
ಯಾವುದೇ ಸೆಲೆಬ್ರಿಟಿ ಎಷ್ಟೇ ಬೇಕಿದ್ದರೂ ಹೆಸರು ಮಾಡಬಹುದು, ಹಣ ಮಾಡಬಹುದು. ಆದರೆ, ಗೌರವ ಕೊಡಲು ಅವರು ವಿಫಲರಾದರೆ ಅವರಿಗೆ ಅಷ್ಟೆಲ್ಲ ಹಣ, ಖ್ಯಾತಿ ಇದ್ದೂ ಅದು ನಿರುಪಯೋಗ. ಅನೇಕ ಸೆಲೆಬ್ರಿಟಿಗಳು ಮಾಡಿದ್ದು ಕೆಲವೇ ಸಿನಿಮಾ ಆದರೂ ಧಿಮಾಕು ತೋರಿಸುತ್ತಾರೆ. ಇನ್ನೂ ಕೆಲವರು ಎಷ್ಟೇ ಎತ್ತರಕ್ಕೆ ಬೆಳೆದರೂ ಜನಸಾಮಾನ್ಯರಂತೆ ನಡೆದುಕೊಳ್ಳುತ್ತಾರೆ. ಇದಕ್ಕೆ ಶಾರುಖ್ ಖಾನ್ (Shahr Rukh Khan) ಅವರು ಉತ್ತಮ ಉದಾಹರಣೆ. ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.
ಶಾರುಖ್ ಖಾನ್ ಅವರು ಸ್ಟಾರ್ ಹೀರೋ. ಅವರ ಬಳಿಕ ಏಳು ಸಾವಿರ ಕೋಟಿ ರೂಪಾಯಿ ಆಸ್ತಿ ಇದೆ. ಅವರು ನೀಡಿದ ಹಿಟ್ ಚಿತ್ರಗಳ ಸಾಲು ತುಂಬಾನೇ ದೊಡ್ಡದಿದೆ. ‘ಪಠಾಣ್’ ಹಾಗೂ ‘ಜವಾನ್’ ಎರಡೂ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿವೆ. ಅದುಕೂಡ ಒಂದೇ ವರ್ಷ. ಈ ರೀತಿಯ ಅಪರೂಪದ ದಾಖಲೆ ಶಾರುಖ್ ಖಾನ್ ಬಳಿ ಇದೆ. ಆದರೆ, ಅವರು ಎಂದಿಗೂ ಅಹಂನಲ್ಲಿ ಮೆರೆದಿಲ್ಲ.
ಚಿತ್ರರಂಗದಲ್ಲಿ ಶಾರುಖ್ ಖಾನ್ಗಿಂತ ಅನೇಕ ಹಿರಿಯ ಕಲಾವಿದರು ಇದ್ದಾರೆ. ಅವರನ್ನು ಕಂಡರೆ ಶಾರುಖ್ ಖಾನ್ ಅವರಿಗೆ ಅತೀವ ಗೌರವ. ಅದನ್ನು ತೋರಿಸುವಂತಹ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ರಜನಿಕಾಂತ್, ರಜನಿಕಾಂತ್ ಪತ್ನಿಗೆ ಸಾಕಷ್ಟು ಗೌರವ ಕೊಡೋದು ಕಾಣಿಸಿದೆ. ಅವರು ಕೈ ಮುಗಿದು ವಿಶ್ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ಗೆ ಶೇಖ್ ಹ್ಯಾಂಡ್ ಮಾಡಿದರು.
ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಶಾರುಖ್ ಕೂಡ ಅಲ್ಲಿಯೇ ಇದ್ದರು. ಅವರ ಕಾಲಿಗೆ ನಮಸ್ಕರಿಸಿ ಶಾರುಖ್ ಖಾನ್ ಆಶೀರ್ವಾದ ಪಡೆದಿದ್ದಾರೆ. ಈ ರೀತಿಯ ಸ್ಟಾರ್ಗಳು ಅನೇಕರಿಗೆ ಮಾದರಿ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಇವರೇ ಶಾರುಖ್ ಖಾನ್ ಸೊಸೆ? ಈ ಮಾಡೆಲ್ ಆರ್ಯನ್ ಖಾನ್ ಮನದರಸಿ
ಶಾರುಖ್ ಖಾನ್ ಕೈ ಸದ್ಯ ಪೆಟ್ಟಾಗಿದೆ. ಈ ಕಾರಣಕ್ಕೆ ಅವರ ನಟನೆಯ ‘ಕಿಂಗ್’ ಸಿನಿಮಾ ಮುಂದಕ್ಕೆ ಹೋಗಿದೆ. ಅವರ ಮಗ ಆರ್ಯನ್ ಖಾನ್ ನಿರ್ದೇಶನ ಮಾಡಿದ ‘ಬಾಸ್ಟರ್ಡ್ ಆಫ್ ಬಾಲಿವುಡ್’ ವೆಬ್ ಸರಣಿ ರಿಲೀಸ್ ಆಗಿದ್ದು, ಮೆಚ್ಚುಗೆ ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.