ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅವರನ್ನು ಕೆಲವು ಮಂದಿ ವಿರೋಧಿಸುತ್ತಾರೆ. ಆದರೆ ಅವರನ್ನು ಪ್ರೀತಿಸುವ ಅಭಿಮಾನಿ ಬಳಗ ದೊಡ್ಡದಿದೆ. ಬರೋಬ್ಬರಿ ನಾಲ್ಕು ವರ್ಷದ ಬಳಿಕ ಶಾರುಖ್ ಖಾನ್ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಅವರು ನಟಿಸಿರುವ ಬಹುನಿರೀಕ್ಷಿತ ‘ಪಠಾಣ್’ ಸಿನಿಮಾ (Pathaan Movie) ಜನವರಿ 25ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ಈ ಚಿತ್ರಕ್ಕೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಇದು ಹೈವೋಲ್ಟೇಜ್ ಸಿನಿಮಾ ಆದ್ದರಿಂದ ಟಿಕೆಟ್ ದರ ಕೂಡ ಜಾಸ್ತಿ ಆಗಿದೆ. ದೆಹಲಿ, ಮುಂಬೈನ ಕೆಲವು ಚಿತ್ರಮಂದಿರಗಳಲ್ಲಿ ‘ಪಠಾಣ್’ ಟಿಕೆಟ್ ಬೆಲೆ (Pathaan Movie Ticket Price) 2 ಸಾವಿರ ರೂಪಾಯಿ ದಾಟಿದೆ. ಆದರೂ ಕೂಡ ಅಪ್ಪಟ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ.
ಶಾರುಖ್ ಖಾನ್ ಅವರಿಗೆ ಈ ಸಿನಿಮಾದ ಗೆಲುವು ಬಹಳ ಮುಖ್ಯವಾಗಲಿದೆ. ಈ ಹಿಂದೆ ಅವರು ನಟಿಸಿದ್ದ ‘ಜೀರೋ’ ಚಿತ್ರ ಹೀನಾಯವಾಗಿ ಸೋತಿತ್ತು. ಆ ಬಳಿಕ ಅವರು ನಾಲ್ಕು ವರ್ಷ ಗ್ಯಾಪ್ ತೆಗೆದುಕೊಂಡರು. ಈಗ ಭರ್ಜರಿಯಾಗಿ ಕಮ್ಬ್ಯಾಕ್ ಮಾಡುತ್ತಿದ್ದಾರೆ. ‘ಪಠಾಣ್’ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ವರ್ಷನ್ನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್ ಖಂಡನೆ
ದೆಹಲಿಯ ಕೆಲವು ಐಮ್ಯಾಕ್ಸ್ ಸ್ಕ್ರೀನ್ಗಳಲ್ಲಿ ‘ಪಠಾಣ್’ ಚಿತ್ರದ ಟಿಕೆಟ್ ಬೆಲೆ 2,200 ರೂಪಾಯಿ ಇದೆ. ಆದರೂ ಕೂಡ ಬಹುತೇಕ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. 1000 ರೂಪಾಯಿ ಟಿಕೆಟ್ಗಳನ್ನು ಕೂಡ ಜನರು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. ಮುಂಬೈನಲ್ಲೂ ಕ್ರೇಜ್ ಜೋರಾಗಿದ್ದು, ಅನೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.
ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್ ಖಾನ್
ಬೆಂಗಳೂರಿನಲ್ಲೂ ಶಾರುಖ್ ಖಾನ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇಲ್ಲಿಯೂ ಕೂಡ 900 ರೂಪಾಯಿ ಬೆಲೆಯ ಟಿಕೆಟ್ಗಳು ಸೋಲ್ಡ್ ಔಟ್ ಆಗುತ್ತಿವೆ. ಮೊದಲ ದಿನ ಈ ಸಿನಿಮಾಗೆ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್ಟೈಟಲ್ ಅಳವಡಿಸಲು ಕೋರ್ಟ್ ಸೂಚನೆ
‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜಾನ್ ಅಬ್ರಾಹಂ ಅವರಿಗೆ ಈ ಚಿತ್ರದಲ್ಲಿ ವಿಲನ್ ಪಾತ್ರವಿದೆ. ಈ ಸಿನಿಮಾದ ಟ್ರೇಲರ್ ಧೂಳೆಬ್ಬಿಸಿದೆ. ‘ಬೇಷರಂ ರಂಗ್..’ ಹಾಗೂ ‘ಜೂಮೇ ಜೋ ಪಠಾಣ್..’ ಹಾಡುಗಳು ಶಾರುಖ್ ಅಭಿಮಾನಿಗಳ ಮನ ಗೆದ್ದಿವೆ. ಸಿನಿಮಾವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Fri, 20 January 23