Shilpa Shetty Property Seized: ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾಗೆ ಜಾರಿ ನಿರ್ದೇಶನಾಲಯ ಶಾಕ್; 98 ಕೋಟಿ ರೂಪಾಯಿ ಆಸ್ತಿ ಸೀಜ್

| Updated By: ರಾಜೇಶ್ ದುಗ್ಗುಮನೆ

Updated on: Apr 18, 2024 | 12:59 PM

Raj Kundra’s Property Seized: ನಟಿ ಶಿಲ್ಪಾ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಅವರು ಹಾಗೂ ಪತಿ ರಾಜ್​ ಕುಂದ್ರಾಗೆ ಸೇರಿದ ಸುಮಾರು 98 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ

Shilpa Shetty Property Seized: ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾಗೆ ಜಾರಿ ನಿರ್ದೇಶನಾಲಯ ಶಾಕ್; 98 ಕೋಟಿ ರೂಪಾಯಿ ಆಸ್ತಿ ಸೀಜ್
ರಾಜ್ ಕುಂದ್ರಾ-ಶಿಲ್ಪಾ
Follow us on

ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ನಟಿ ಶಿಲ್ಪಾ ಶೆಟ್ಟಿಗೆ (Shilpa Shetty) ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿಲ್ಪಾ ಹಾಗೂ ಪತಿ ರಾಜ್​ ಕುಂದ್ರಾಗೆ ಸೇರಿದ ಸುಮಾರು 98 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜುಹುದಲ್ಲಿರುವ ಅವರ ಫ್ಲ್ಯಾಟ್, ಪುಣೆಯಲ್ಲಿರುವ ಬಂಗಲೆ, ರಾಜ್ ಕುಂದ್ರಾ ಹೆಸರಲ್ಲಿರುವ ಶೇರುಗಳನ್ನು ಜಪ್ತಿ ಮಾಡಲಾಗಿದೆ.

ಏನಿದು ಪ್ರಕರಣ?

2017ರಲ್ಲಿ 6600 ಕೋಟಿ ರೂಪಾಯಿಯನ್ನು ರಾಜ್​ ಕುಂದ್ರಾ ಹಾಗೂ ಅವರ ಸಂಗಡಿಗರು ಬಿಟ್​ಕಾಯಿನ್ ಮೂಲಕ ಸಂಪಾದಿಸಿದ್ದರು. ಜೊತೆಗೆ ತಿಂಗಳಿಗೆ ಶೇ. 10 ಪಾವತಿಸುವುದಾಗಿ ಜನರಿಗೆ ಆಮಿಷ ಒಡ್ಡಿದ್ದರು. ಇದನ್ನು ಬೃಹತ್ ಬಿಟ್‌ಕಾಯಿನ್ ಹಗರಣ ಎಂದು ಆರೋಪಿಸಲಾಗಿದೆ. ಬಿಟ್‌ಕಾಯಿನ್ ಪ್ರಕರಣದಿಂದ ರಾಜ್ ಕುಂದ್ರಾ ಪ್ರಸ್ತುತ 150 ಕೋಟಿ ಲಾಭ ಗಳಿಸುತ್ತಿದ್ದಾರೆ ಎಂದು ಇಡಿ ಹೇಳುತ್ತದೆ.

ಬಿಟ್‌ಕಾಯಿನ್ ಹಗರಣದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಹೆಸರಿತ್ತು. ಇದು ಸಾವಿರಾರು ಕೋಟಿ ರೂಪಾಯಿ ಹಗರಣ ಎನ್ನಲಾಗಿದೆ. ಈ ಪ್ರಕರಣದಲ್ಲಿ ಇಬ್ಬರಿಗೂ ಇಡಿ 2018ರಲ್ಲಿ ಸಮನ್ಸ್ ನೀಡಿತ್ತು. ಅವರನ್ನೂ ಪ್ರಶ್ನಿಸಲಾಯಿತು. ಆಗ ಈ ಪ್ರಕರಣದ ಪ್ರಮುಖ ಆರೋಪಿ ಅಮಿತ್ ಭಾರದ್ವಾಜ್ ಅವರನ್ನು  ಬಂಧಿಸಲಾಗಿತ್ತು. ಈ ಹಗರಣವು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. gatbitcoin.com ಎಂಬ ವೆಬ್‌ಸೈಟ್‌ನಿಂದ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ. ಈ ಪ್ರಕರಣ ಕುಂದ್ರಾಗೆ ಸಂಬಂಧಿಸಿದ್ದು. ಹೀಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಕುಂದ್ರಾ ಅಪರಾಧಿಯೇ ಅಥವಾ ಹೂಡಿಕೆದಾರನೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ರಾಜ್ ಕುಂದ್ರಾಗಿನಿಂತಲೂ ಶ್ರೀಮಂತರು ನನಗಾಗಿ ಕ್ಯೂ ನಿಂತಿದ್ದರು: ಶಿಲ್ಪಾ ಶೆಟ್ಟಿ

ಜಾರಿ ನಿರ್ದೇಶನಾಲಯದ ಟ್ವೀಟ್..

ಜಾರಿ ನಿರ್ದೇನಾಲಯದ ಅಧಿಕಾರಿಗಳು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ರಾಜ್ ಕುಂದ್ರಾಗೆ ಸೇರಿದ 97.7 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ಇರುವ ಜುಹು ಮನೆ, ಪುಣೆಯಲ್ಲಿರುವ ನಿವಾಸ, ರಾಜ್ ಕುಂದ್ರಾ ಹೆಸರಲ್ಲಿರುವ ಇಕ್ವಿಟಿ ಷೇರುಗಳನ್ನು ಸೀಜ್ ಮಾಡಲಾಗಿದೆ’ ಎಂದು ಮಾಹಿತಿ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:36 pm, Thu, 18 April 24