ಚಪ್ಪಲಿ ಧರಿಸಿ ರಾಷ್ಟ್ರ ಧ್ವಜ ಹಾರಿಸಿದ ಶಿಲ್ಪಾ ಶೆಟ್ಟಿ; ‘ನನಗೂ ರೂಲ್ಸ್​ ಗೊತ್ತು’ ಎಂದ ನಟಿ

|

Updated on: Aug 16, 2023 | 1:03 PM

ಶಿಲ್ಪಾ ಶೆಟ್ಟಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋ ವೈರಲ್​ ಆಗಿದೆ. ಅವರು ಚಪ್ಪಲಿ ಹಾಕಿಕೊಂಡು ತ್ರಿವರ್ಣ ಧ್ವಜ ಹಾರಿಸಿದ್ದು ಅನೇಕರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಹಲವರು ಕಮೆಂಟ್​ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಶಿಲ್ಪಾ ಶೆಟ್ಟಿ ಅವರ ಗಮನಕ್ಕೂ ಬಂದಿದೆ. ತಾವು ಮಾಡಿದ್ದರಲ್ಲಿ ತಪ್ಪು ಇಲ್ಲ ಎಂದು ಶಿಲ್ಪಾ ಶೆಟ್ಟಿ ವಾದ ಮಾಡಿದ್ದಾರೆ.

ಚಪ್ಪಲಿ ಧರಿಸಿ ರಾಷ್ಟ್ರ ಧ್ವಜ ಹಾರಿಸಿದ ಶಿಲ್ಪಾ ಶೆಟ್ಟಿ; ‘ನನಗೂ ರೂಲ್ಸ್​ ಗೊತ್ತು’ ಎಂದ ನಟಿ
ಶಿಲ್ಪಾ ಶೆಟ್ಟಿ
Follow us on

ದೇಶದೆಲ್ಲೆಡೆ ಮಂಗಳವಾರ (ಆಗಸ್ಟ್​ 15) ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ (Independence Day) ಆಚರಿಸಲಾಯಿತು. ಸೆಲೆಬ್ರಿಟಿಗಳು ಕೂಡ ಈ ಸಂಭ್ರಮದಲ್ಲಿ ಭಾಗಿ ಆದರು. ಮನೆ, ಕಚೇರಿ ಮುಂತಾದ ಕಡೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ನಟಿ ಶಿಲ್ಪಾ ಶೆಟ್ಟಿ (Shilpa Shetty) ಕೂಡ ಇದಕ್ಕೆ ಹೊರತಾಗಿಲ್ಲ. ಕುಟುಂಬ ಸಮೇತರಾಗಿ ಅವರು ಧ್ವಜಾರೋಹಣ (Flag hoisting) ಮಾಡಿದ್ದಾರೆ. ಅವರ ಜೊತೆ ಮಕ್ಕಳಾದ ವಿಯಾನ್​, ಸಮೀಶಾ, ಗಂಡ ರಾಜ್​ ಕುಂದ್ರಾ ಹಾಗೂ ತಾಯಿ ಸುನಂದಾ ಶೆಟ್ಟಿ ಕೂಡ ಭಾಗಿಯಾಗಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ಅವರು ಸೋಶಿಯಲ್​ ವೀಡಿಯಾದಲ್ಲಿ ಹಂಚಿಕೊಂಡರು. ಅದನ್ನು ನೋಡಿದ್ದೇ ತಡ, ನೆಟ್ಟಿಗರು ಟ್ರೋಲ್​ ಮಾಡಲು ಆರಂಭಿಸಿದರು. ಶಿಲ್ಪಾ ಶೆಟ್ಟಿ ಮತ್ತು ಅವರ ಕುಟುಂಬದವರು ಚಪ್ಪಲಿ ಧರಿಸಿ ಧ್ವಜ ಹಾರಿಸಿದ್ದೇ ಇದಕ್ಕೆ ಕಾರಣ! ತಮ್ಮ ವಿರುದ್ಧ ಮಾಡಲಾಗಿರುವ ಟ್ರೋಲ್​ಗೆ ಶಿಲ್ಪಾ ಶೆಟ್ಟಿ ಅವರು ಈಗ ಉತ್ತರ ನೀಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋ ವೈರಲ್​ ಆಗಿದೆ. ಅವರು ಚಪ್ಪಲಿ ಹಾಕಿಕೊಂಡು ತ್ರಿವರ್ಣ ಧ್ವಜ ಹಾರಿಸಿದ್ದು ಅನೇಕರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಹಲವರು ಕಮೆಂಟ್​ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಶಿಲ್ಪಾ ಶೆಟ್ಟಿ ಅವರ ಗಮನಕ್ಕೂ ಬಂದಿದೆ. ತಾವು ಮಾಡಿದ್ದರಲ್ಲಿ ತಪ್ಪು ಇಲ್ಲ ಎಂದು ಶಿಲ್ಪಾ ಶೆಟ್ಟಿ ವಾದ ಮಾಡಿದ್ದಾರೆ. ತಮಗೂ ರೂಲ್ಸ್​ ಗೊತ್ತು ಎಂದು ಅವರು ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಇನ್​ಸ್ಟಾಗ್ರಾಮ್ ಪೋಸ್ಟ್​:

‘ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮ ಏನು ಎಂಬುದು ನನಗೂ ಗೊತ್ತು. ದೇಶದ ಬಗ್ಗೆ, ರಾಷ್ಟ್ರ ಧ್ವಜದ ಬಗ್ಗೆ ನನಗೆ ಗೌರವ ಇದೆ. ಅದನ್ನು ಪ್ರಶ್ನಿಸುವ ಅಗತ್ಯವಿಲ್ಲ. ಹೆಮ್ಮೆಯ ಭಾರತೀಯಳಾದ ನಾನು ಆ ಭಾವನೆಯನ್ನು ಹರಡುವ ಸಲುವಾಗಿ ವಿಡಿಯೋ ಹಂಚಿಕೊಂಡಿದ್ದೇನೆ. ಸಾಮಾನ್ಯವಾಗಿ ನಾನು ಟ್ರೋಲ್​ಗಳಿಗೆ ಉತ್ತರ ನೀಡುವುದಿಲ್ಲ. ನಿಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಕ್ಕೆ ಮತ್ತು ನೆಗೆಟಿವಿಟಿ ಹರಡಿದ್ದಕ್ಕೆ ನಾನು ಮೆಚ್ಚುಗೆ ಸೂಚಿಸುವುದಿಲ್ಲ. ಸರಿಯಾಗಿ ಮಾಹಿತಿ ತಿಳಿದುಕೊಂಡು ನಿಮ್ಮ ಮಾತನ್ನು ವಾಪಸ್​ ಪಡೆದುಕೊಳ್ಳಿ’ ಎಂದು ಶಿಲ್ಪಾ ಶೆಟ್ಟಿ ಅವರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಶುಭ ಕೋರಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು; ಇಲ್ಲಿದೆ ಫೋಟೋ ಗ್ಯಾಲರಿ

ಧ್ವಜಾರೋಹಣದ ಸಮಯದಲ್ಲಿ ಚಪ್ಪಲಿ ಅಥವಾ ಶೂ ಬಿಚ್ಚಬೇಕು ಎಂಬ ನಿಯಯ ಇಲ್ಲ. ಶೂ ಧರಿಸಿ ಧ್ವಜ ಹಾರಿಸಿದರೆ ಅದು ಅಪರಾಧ ಕೂಡ ಅಲ್ಲ. ಆದರೆ ಭಾರತೀಯ ಸಂಪ್ರದಾಯದಲ್ಲಿ ಈ ರೀತಿಯ ವಿಶೇಷ ಸಂದರ್ಭದ ವೇಳೆ ಗೌರವಾರ್ಥವಾಗಿ ಚಪ್ಪಲಿ ಬಿಚ್ಚಲಾಗುತ್ತದೆ ಅಷ್ಟೇ. ಹಾಗಾಗಿ ಅನೇಕರು ಧ್ವಜಾರೋಹಣ ಮಾಡುವಾಗ ಶೂ ಅಥವಾ ಚಪ್ಪಲಿ ಧರಿಸುವುದಿಲ್ಲ. ಒಟ್ಟಿನಲ್ಲಿ ಕೆಲವರು ಶಿಲ್ಪಾ ಶೆಟ್ಟಿ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನುಳಿದವರು ವಿರೋಧಿಸಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಕುಟುಂಬಕ್ಕೆ ಟ್ರೋಲ್​ ಎಂಬುದು ಹೊಸದೇನೂ ಅಲ್ಲ. ಈ ಮೊದಲು ರಾಜ್​ ಕುಂದ್ರಾ ಅರೆಸ್ಟ್​ ಆದಾಗ ಅವರು ಸಾಕಷ್ಟು ಟೀಕೆ ಎದುರಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.