Shilpa Shetty: ಮಕ್ಕಳು ಹಾಗೂ ತಾಯಿಯೊಂದಿಗೆ ಶಿಲ್ಪಾ ಶೆಟ್ಟಿ ಭರ್ಜರಿ ಸುತ್ತಾಟ; ರಾಜ್ ಕುಂದ್ರಾ ಎಲ್ಲಿ ಎಂದು ಪ್ರಶ್ನಿಸಿದ ಫ್ಯಾನ್ಸ್

Raj Kundra: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ತಮ್ಮ ಮಕ್ಕಳು ಹಾಗೂ ತಾಯಿಯೊಂದಿಗೆ ಸುತ್ತಾಡುತ್ತಾ ಕ್ಯಾಮೆರಾಗಳಿಗೆ ಸಖತ್ ಪೋಸ್ ನೀಡಿದ್ದಾರೆ. ಆದರೆ ಈ ವೇಳೆ ರಾಜ್ ಕುಂದ್ರಾ ಗೈರು ಎದ್ದು ಕಂಡಿದೆ.

Shilpa Shetty: ಮಕ್ಕಳು ಹಾಗೂ ತಾಯಿಯೊಂದಿಗೆ ಶಿಲ್ಪಾ ಶೆಟ್ಟಿ ಭರ್ಜರಿ ಸುತ್ತಾಟ; ರಾಜ್ ಕುಂದ್ರಾ ಎಲ್ಲಿ ಎಂದು ಪ್ರಶ್ನಿಸಿದ ಫ್ಯಾನ್ಸ್
ಶಿಲ್ಪಾ ಶೆಟ್ಟಿ ಮತ್ತು ಕುಟುಂಬ
Edited By:

Updated on: Oct 24, 2021 | 10:39 AM

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಿಡುಗಡೆಯ ನಂತರ ನಿರಾಳರಾಗಿದ್ದಾರೆ. ಆದರೆ ಈ ದಂಪತಿ ರಾಜ್ ಕುಂದ್ರಾ ಬಂಧನದ ನಂತರ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಶಿಲ್ಪಾ ತಮ್ಮ ಕುಟುಂಬದವರೊಂದಿಗೆ ಅನೇಕ ಬಾರಿ ಕಾಣಿಸಿಕೊಂಡಿದ್ದು, ಎಲ್ಲೆಡೆ ರಾಜ್ ಕುಂದ್ರಾ ಗೈರು ಎದ್ದು ಕಂಡಿದೆ. ಈ ವೀಕೆಂಡ್​ನಲ್ಲಿ ಕೂಡ ಶಿಲ್ಪಾ ತಮ್ಮ ಮಕ್ಕಳಾದ ವಿಯಾನ್ ಹಾಗೂ ಸಮಿಷಾರೊಂದಿಗೆ ಆಲಿಬಾಗ್​ಗೆ ತೆರಳಿದ್ದರು. ಈ ಪಯಣದಲ್ಲಿ ಶಿಲ್ಪಾಗೆ ತಾಯಿ ಸುನಂದಾ ಶೆಟ್ಟಿ ಜೊತೆಯಾಗಿದ್ದರು. ಆದರೆ ರಾಜ್ ಕುಂದ್ರಾ ಕಾಣಿಸಿಕೊಂಡಿಲ್ಲ.

ಶಿಲ್ಪಾ ಶೆಟ್ಟಿ ತೆರಳುವಾಗ ನೆರೆದಿದ್ದ ಛಾಯಾಗ್ರಾಹಕರಿಗೆ ನಗುಮೊಗದಿಂದಲೇ ಪೋಸ್ ನೀಡಿದ್ದಾರೆ. ಈ ಮೂಲಕ ಅವರು ಕ್ಯಾಮೆರಾಗಳಿಂದ ಅಂತರವೇನೂ ಕಾಯ್ದುಕೊಂಡಿಲ್ಲ. ಆದರೆ ರಾಜ್ ಕುಂದ್ರಾ ಗೈರು ಅವರ ಅಭಿಮಾನಿಗಳಿಗೆ ಎದ್ದು ಕಂಡಿದೆ. ಅಶ್ಲೀಲ ಸಿನಿಮಾ ತಯಾರಿಕೆ ಹಾಗೂ ಹಂಚಿಕೆಯ ಪ್ರಕರಣದ ಪ್ರಮುಖ ಆರೋಪಿಯಾಗಿ ರಾಜ್ ಕುಂದ್ರಾ ಜುಲೈನಲ್ಲಿ ಜೈಲು ಸೇರಿದ್ದರು. ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ ಕೂಡ ಅವರು ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

ಜೊತೆಗೆ, ಇತ್ತೀಚೆಗೆ ಶಿಲ್ಪಾ ಶೆಟ್ಟಿ ಹಂಚಿಕೊಂಡ ಹಬ್ಬಗಳ ಆಚರಣೆಯ ಚಿತ್ರಗಳಲ್ಲೂ ರಾಜ್ ಕುಂದ್ರಾ ಸುಳಿವಿರಲಿಲ್ಲ. ಉದ್ದೇಶಪೂರ್ವಕವಾಗಿ ಅವರು ಸುದ್ದಿಯಾಗುವುದರಿಂದ ದೂರವಿದ್ದಾರೋ ಅಥವಾ ಬೇರೇನಾದರೂ ಕಾರಣವಿದೆಯೋ ಎಂಬುದು ಅಭಿಮಾನಿಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಫ್ಯಾನ್ಸ್ ಚರ್ಚಿಸುತ್ತಿದ್ದಾರೆ. ಅದಾಗ್ಯೂ ಶಿಲ್ಪಾ ತಮ್ಮ ಕುಟುಂಬದವರೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿರುವುದು ಫ್ಯಾನ್ಸ್ ಮುಖದಲ್ಲಿ ನಗು ಮೂಡಿಸಿದೆ.

ಮಕ್ಕಳು ಹಾಗೂ ತಾಯಿಯೊಂದಿಗೆ ಶಿಲ್ಪಾ ಶೆಟ್ಟಿ:

ರಾಜ್ ಕುಂದ್ರಾ ಬಂಧನದ ಸಮಯದಲ್ಲಿ ಶಿಲ್ಪಾ ಸಾಮಾಜಿಕ ಜಾಲತಾಣಗಳ ಮುಖಾಂತರ, ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆಯಿದೆ. ಪ್ರಕರಣದಲ್ಲಿ ಸರಿಯಾದ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಿದೆ ಎಂದು ನುಡಿದಿದ್ದರು. ರಾಜ್ ಕುಂದ್ರಾ ಬಂಧನವಾದ ಕೆಲವೇ ದಿನಗಳಲ್ಲಿ ಶಿಲ್ಪಾ ನಟನೆಯ ‘ಹಂಗಾಮ 2’ ಚಿತ್ರ ಬಿಡುಗಡೆಯಾಗಿತ್ತು. ಶಿಲ್ಪಾ ಪ್ರಸ್ತುತ ‘ಇಂಡಿಯಾ ಗಾಟ್ ಟ್ಯಾಲೆಂಟ್’ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:

ಉಪೇಂದ್ರ ಬಗ್ಗೆ ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಸುದೀಪ್​ ಮಾತು; ಉಪ್ಪಿ ಅಂದ್ರೆ ಸ್ಫೂರ್ತಿಯ ಕಿಚ್ಚು

ನಿರೂಪಣೆಯಿಂದ ಅರುಣ್​ ಸಾಗರ್​ ನಿವೃತ್ತಿ ತಗೊಂಡ್ರಾ? ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಕಾಲೆಳೆದ ಸುದೀಪ್​