ಆಧಾರ್ ಕಾರ್ಡ್ನಲ್ಲಿ ಹೇಗಿದೆ ಶ್ರದ್ಧಾ ಕಪೂರ್ ಫೋಟೋ? ಇಲ್ಲಿದೆ ವಿಡಿಯೋ
ಸುದ್ದಿಗೋಷ್ಠಿ ಒಂದರಲ್ಲಿ ಶ್ರದ್ಧಾ ಕಪೂರ್ ಬಳಿ ಕೆಲವರು ‘ಆಧಾರ್ ಕಾರ್ಡ್’ ಫೋಟೋನ ರಿವೀಲ್ ಮಾಡಲು ಕೇಳಿದ್ದರು. ಆದರೆ, ಶ್ರದ್ಧಾ ಕಪೂರ್ ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ‘ನಾನು ನನ್ನ ಆಧಾರ್ ಕಾರ್ಡ್ ಫೋಟೋನ ಯಾರಿಗೂ ತೋರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಈಗ ವಿಡಿಯೋ ವೈರಲ್ ಆಗಿದೆ.
ಚಿತ್ರರಂಗದ ಸೆಲೆಬ್ರಿಟಿಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ. ಸೆಲೆಬ್ರಿಟಿಗಳ ವಿಚಾರದ ಬಗ್ಗೆ ತಿಳಿದುಕೊಳ್ಳೋದು ಎಂದರೆ ಫ್ಯಾನ್ಸ್ಗೆ ಎಲ್ಲಿಲ್ಲದ ಖುಷಿ. ಈಗ ನಟಿ ಶ್ರದ್ಧಾ ಕಪೂರ್ ಅವರ ಆಧಾರ್ ಕಾರ್ಡ್ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಶ್ರದ್ಧಾ ಕಪೂರ್ ಅವರು ಯಾವ ರೀತಿಯಲ್ಲಿ ಇದ್ದರು ಎಂಬ ಮಾಹಿತಿಯು ರಿವೀಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯುಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಶ್ರದ್ಧಾ ಕಪೂರ್ ಅವರು ಬಾಲಿವುಡ್ನ ಸ್ಟಾರ್ ನಟಿ. ಅವರ ಸೌಂದರ್ಯಕ್ಕೆ ಮಾರು ಹೋದವರು ಅನೇಕರು ಇದ್ದಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹೆಚ್ಚುತ್ತಿದೆ. ‘ತೂ ಜೂಟಿ ಮೇ ಮಕ್ಕರ್’ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಅವರು, ನಂತರ ‘ಸ್ತ್ರೀ 2’ ಚಿತ್ರದಲ್ಲಿ ಸಿಂಪಲ್ ಹುಡುಗಿ ಲುಕ್ನಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಶ್ರದ್ಧಾ ಕಪೂರ್ ಅವರ ವಿಡಿಯೋ ಈಗ ವೈರಲ್ ಆಗಿದೆ.
ಸುದ್ದಿಗೋಷ್ಠಿ ಒಂದರಲ್ಲಿ ಶ್ರದ್ಧಾ ಕಪೂರ್ ಬಳಿ ಕೆಲವರು ‘ಆಧಾರ್ ಕಾರ್ಡ್’ ಫೋಟೋನ ರಿವೀಲ್ ಮಾಡಲು ಕೇಳಿದ್ದರು. ಆದರೆ, ಶ್ರದ್ಧಾ ಕಪೂರ್ ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ‘ನಾನು ನನ್ನ ಆಧಾರ್ ಕಾರ್ಡ್ ಫೋಟೋನ ಯಾರಿಗೂ ತೋರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ನಂತರ ಅವರು ಸೆಲ್ಫಿ ಒಂದನ್ನು ತೆಗೆದುಕೊಂಡಿದ್ದರು. ಈ ವೇಳೆ ಅವರ ಮೊಬೈಲ್ ಕವರ್ನಲ್ಲಿ ಶ್ರದ್ಧಾ ಆಧಾರ್ ಫೋಟೋ ಕಾಣಿಸಿದೆ. ಇದನ್ನು ಅನೇಕರು ವೈರಲ್ ಮಾಡುತ್ತಿದ್ದಾರೆ.
View this post on Instagram
ಶ್ರದ್ಧಾ ಕಪೂರ್ ಅವರಿಗೆ ‘ಸ್ತ್ರೀ 2’ ದೊಡ್ಡ ಗೆಲುವು ನೀಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿ ಕ್ಲಬ್ ಸೇರಿ ದಾಖಲೆ ಬರೆದಿದೆ. ಈ ಮೂಲಕ ಈ ಚಿತ್ರ ಹಲವು ದಾಖಲೆಗಳನ್ನು ಬರೆದಿದೆ. ಈ ಸಿನಿಮಾ ಒಟಿಟಿಯಲ್ಲೂ ರಿಲೀಸ್ ಆಗಿ ಗಮನ ಸೆಳೆದಿದೆ.
ಇದನ್ನೂ ಓದಿ: ದೀಪಿಕಾ, ಆಲಿಯಾರನ್ನು ಹಿಂದಿಕ್ಕಿ ಭಾರತದ ನಂಬರ್ 1 ನಟಿಯಾದ ಶ್ರದ್ಧಾ ಕಪೂರ್
ಸದ್ಯ ಶ್ರದ್ಧಾ ಅವರು ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ‘ಸ್ತ್ರೀ 3’ ಚಿತ್ರ ಶೀಘ್ರವೇ ಸೆಟ್ಟೇರಲಿದೆ. ಇದರಲ್ಲಿ ಶ್ರದ್ಧಾ ಕಪೂರ್ ಕಥೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಚಿತ್ರ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:25 am, Fri, 6 December 24