ಸೀತೆ ಪಾತ್ರ ಮಾಡಿದ ಕರೀನಾ ಕಪೂರ್​ ಖಾನ್; ‘ಸಿಂಘಂ ಅಗೇನ್’ ಚಿತ್ರದಲ್ಲಿ ರಾಮಾಯಣ

ರಾಮಾಯಣದ ಕಥೆಯನ್ನು ಇಟ್ಟುಕೊಂಡು ರೋಹಿತ್ ಶೆಟ್ಟಿ ಅವರು ‘ಸಿಂಘಂ ಅಗೇನ್​’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಬಹುತಾರಾಗಣ ಇದೆ. ಅಜಯ್​ ದೇವಗನ್​, ರಣವೀರ್​ ಸಿಂಗ್​, ಕರೀನಾ ಕಪೂರ್​ ಖಾನ್​, ಅರ್ಜುನ್​ ಕಪೂರ್​, ಅಕ್ಷಯ್​ ಕುಮಾರ್​, ದೀಪಿಕಾ ಪಡುಕೋಣೆ ಮುಂತಾದವರು ಅಭಿನಯಿಸಿದ್ದಾರೆ. ಟ್ರೇಲರ್​ ನೋಡಿದ ಸಿನಿಪ್ರಿಯರಿಗೆ ಖುಷಿ ಆಗಿದೆ.

ಸೀತೆ ಪಾತ್ರ ಮಾಡಿದ ಕರೀನಾ ಕಪೂರ್​ ಖಾನ್; ‘ಸಿಂಘಂ ಅಗೇನ್’ ಚಿತ್ರದಲ್ಲಿ ರಾಮಾಯಣ
ಕರೀನಾ ಕಪೂರ್​ ಖಾನ್, ರಾಮ-ಲಕ್ಷ್ಮಣ
Follow us
ಮದನ್​ ಕುಮಾರ್​
|

Updated on: Oct 07, 2024 | 3:06 PM

ಈ ವರ್ಷ ದೀಪಾವಳಿ ಹಬ್ಬಕ್ಕೆ ‘ಸಿಂಘಂ ಅಗೇನ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ರೋಹಿತ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಅಜಯ್​ ದೇವಗನ್​, ಕರೀನಾ ಕಪೂರ್​ ಖಾನ್​, ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್​, ಅಕ್ಷಯ್​ ಕುಮಾರ್​, ಜಾಕಿ ಶ್ರಾಫ್​, ಟೈಗರ್​ ಶ್ರಾಫ್, ಅರ್ಜುನ್​ ಕಪೂರ್​ ಮುಂತಾದ ಸ್ಟಾರ್​ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ‘ಸಿಂಘಂ ಅಗೇನ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಟ್ರೇಲರ್​ ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ಈ ಸಿನಿಮಾದಲ್ಲಿ ಇರುವುದು ರಾಮಾಯಣದ ಕಥೆ! ಕರೀನಾ ಕಪೂರ್​ ಖಾನ್​ ಅವರು ಸೀತೆಯ ಪಾತ್ರ ಮಾಡಿದ್ದಾರೆ.

ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ ಲಂಕೆಗೆ ಹೋಗಿದ್ದು ರಾಮಾಯಣದ ಕಹಾನಿ. ಅದನ್ನೇ ಇಟ್ಟುಕೊಂಡು ರೋಹಿತ್​ ಶೆಟ್ಟಿ ಅವರು ‘ಸಿಂಘಂ ಅಗೇನ್​’ ಸಿನಿಮಾ ಮಾಡಿದ್ದಾರೆ. ಇದು ಆಧುನಿಕ ರಾಮಾಯಣ. ಇಲ್ಲಿ ರಾಮನಾಗಿ ಅಜಯ್​ ದೇವಗನ್​ ನಟಿಸಿದ್ದಾರೆ. ಅವರ ಪತ್ನಿಯಾಗಿ ಕರೀನಾ ಕಪೂರ್​ ಖಾನ್​ ಕಾಣಿಸಿಕೊಂಡಿದ್ದಾರೆ. ಹಾಗಾದರೆ ರಾವಣ ಯಾರು? ಅರ್ಜುನ್​ ಕಪೂರ್!

ಇದನ್ನೂ ಓದಿ: ಬರೋಬ್ಬರಿ 130 ಕೋಟಿ ರೂಪಾಯಿಗೆ ‘ಸಿಂಘಂ ಅಗೇನ್’ ಒಟಿಟಿ ಡೀಲ್​; ಯಾವಾಗ ರಿಲೀಸ್?

ಶ್ರೀಲಂಕಾದಲ್ಲಿ ಇರುವ ನಟೋರಿಯಸ್​ ವ್ಯಕ್ತಿಯಾಗಿ ಅರ್ಜುನ್​ ಕಪೂರ್​ ಅಭಿನಯಿಸಿದ್ದಾರೆ. ನಾಯಕಿಯನ್ನು ವಿಲನ್​ ಅಪಹರಣ ಮಾಡಿದ ಬಳಿಕ ಆಕೆಯನ್ನು ಮರಳಿ ಕರೆದುಕೊಂಡು ಬರಲು ಲಂಕೆಗೆ ಸಿಂಘಂ (ಅಜಯ್​ ದೇವಗನ್) ಪ್ರಯಾಣ ಮಾಡುತ್ತಾನೆ. ಅವನಿಗೆ ಲಕ್ಷ್ಮಣ (ಟೈಗರ್​ ಶ್ರಾಫ್​), ಆಂಜನೇಯ (ರಣವೀರ್​ ಸಿಂಗ್​), ಜಟಾಯು (ಅಕ್ಷಯ್​ ಕುಮಾರ್​) ಮುಂತಾದವರು ಸಾಥ್​ ನೀಡುತ್ತಾರೆ. ಈ ರೀತಿ ಕಥೆಯನ್ನು ‘ಸಿಂಗಂ ಅಗೇನ್’ ಸಿನಿಮಾದಲ್ಲಿ ನಿರ್ದೇಶಕ ರೋಹಿತ್​ ಶೆಟ್ಟಿ ತೋರಿಸಲಿದ್ದಾರೆ.

‘ಸಿಂಘಂ ಅಗೇನ್​’ ಸಿನಿಮಾದ ಟ್ರೇಲರ್:

ನವೆಂಬರ್​ 1ರಂದು ‘ಸಿಂಗಂ ಅಗೇನ್​’ ಸಿನಿಮಾ ತೆರೆಕಾಣಲಿದೆ. ದೀಪಿಕಾ ಪಡುಕೋಣೆ ಕೂಡ ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ಮೆರೆದಿದ್ದಾರೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ರೋಹಿತ್​ ಶೆಟ್ಟಿ ಅವರ ಸಿನಿಮಾದಲ್ಲಿ ಅದ್ದೂರಿತನ ಇದ್ದೇ ಇರುತ್ತದೆ. ಅದು ಈ ಚಿತ್ರದಲ್ಲೂ ಮುಂದುವರಿದಿದೆ. ಇನ್ನು, ಕಾಮಿಡಿ ಕೂಡ ಇರಲಿದೆ. ಬಹುತಾರಾಗಣ ಇರುವ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಎಲ್ಲರಿಗೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ