ನಾನೂ ಗಾಂಜಾ ಸೇದಿದ್ದೇನೆ, ಆರ್ಯನ್​ ತಪ್ಪಿಲ್ಲ, ನ್ಯಾಯಾಂಗ ವ್ಯವಸ್ಥೆ ಸರಿ ಇಲ್ಲ ಎಂದ ಸಲ್ಲು ಮಾಜಿ ಪ್ರೇಯಸಿ

ಆರ್ಯನ್​ಗೆ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರ್ಯನ್​ ಪರ ವಕೀಲರಾದ ಸತೀಶ್​ ಮಾನೇಶಿಂಧೆ ಅವರು ಎಷ್ಟೇ ಪ್ರಯತ್ನ ಮಾಡಿದರೂ ಜಾಮೀನು ಸಿಗುತ್ತಿಲ್ಲ.

ನಾನೂ ಗಾಂಜಾ ಸೇದಿದ್ದೇನೆ, ಆರ್ಯನ್​ ತಪ್ಪಿಲ್ಲ, ನ್ಯಾಯಾಂಗ ವ್ಯವಸ್ಥೆ ಸರಿ ಇಲ್ಲ ಎಂದ ಸಲ್ಲು ಮಾಜಿ ಪ್ರೇಯಸಿ
ಸೋಮಿ-ಆರ್ಯನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 10, 2021 | 10:12 PM

ಸೋಮಿ ಅಲಿ ಬಾಲಿವುಡ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಇವರು ಸಲ್ಲು ಜತೆ ರಿಲೇಶನ್​ಶಿಪ್​ನಲ್ಲೂ ಇದ್ದರು. ಈಗ ಎಲ್ಲವನ್ನೂ ಬಿಟ್ಟು ತಮ್ಮದೇ ಎನ್​ಜಿಒ ಕಟ್ಟಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ಅಚ್ಚರಿ ಎಂದರೆ, ಇವರು 15ನೇ ವಯಸ್ಸಿಗೆ ಗಾಂಜಾ ಸೇವನೆ ಮಾಡಿದ್ದರು. ಇದನ್ನು ಅವರು ಒಪ್ಪಿಕೊಂಡಿದ್ದಾರೆ.

‘ಮಾನವ ಹಕ್ಕುಗಳ ಕಾರ್ಯಕರ್ತೆಯಾಗು ಮತ್ತು ಎನ್‌ಜಿಒ ಸ್ಥಾಪಕಿಯಾಗಿ ಕಷ್ಟದ ಪರಿಸ್ಥಿತಿ ಎದುರಿಸುತ್ತಿರುವವರಿಗೆ ಸಹಾಯ ಮಾಡೋದು ನನಗೆ ಅಭ್ಯಾಸವಾಗಿದೆ. ಇದೀಗ ಆರ್ಯನ್ ಮತ್ತು ಅವನ ಪೋಷಕರು ಕಷ್ಟದ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ನನ್ನ ಧ್ವನಿ ಎತ್ತುತ್ತಿದ್ದೇನೆ’ ಎಂದಿದ್ದಾರೆ ಅವರು.

‘ನಾನು 15ನೇ ವಯಸ್ಸಿಗೆ ಗಾಂಜಾ ಸೇದಿದ್ದೆ. ನಂತರ ಶೂಟಿಂಗ್​ ಸೆಟ್​ನಲ್ಲೂ ಒಮ್ಮೆ ಅದನ್ನು ತೆಗೆದುಕೊಂಡಿದ್ದ. ಯುವಕರಾಗಿದ್ದಾಗ ಅನೇಕರು ಇದನ್ನು ಪ್ರಯತ್ನಿಸುತ್ತಾರೆ ಮತ್ತು ಕೆಲವರು ಮಾತ್ರ ಅದೇ ಗುಂಗಿನಲ್ಲಿರುತ್ತಾರೆ, ಬಹುತೇಕರು ಅದರಿಂದ ಹೊರ ಬರುತ್ತಾರೆ. ಇದೆಲ್ಲವೂ ನನಗಲ್ಲ ಎಂಬುದು ಜ್ಞಾನೋದವಾಯಿತು’ ಎಂದರು ಸೋಮಿ.

‘ನಾವು ಹಣವಂತರಾಗಲಿ ಅಥವಾ ಬಡವರಾಗಲಿ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತೇವೆ ಎಂಬುದನ್ನು ನ್ಯಾಯಾಂಗಕ್ಕೆ ಸಾಬೀತು ಮಾಡಬೇಕಿದೆ. ಅದಕ್ಕೆ ಆರ್ಯನ್​ಗೆ ಜಾಮೀನು ನೀಡುತ್ತಿಲ್ಲ. ಆತ ಯುವಕ. ನಾವೇಕೆ ಅವರನ್ನು ಮಾನ್​ಸ್ಟರ್​ ಎಂಬ ರೀತಿಯಲ್ಲಿ ಬಿಂಬಿಸಬೇಕು? ಮುಂಬೈನಲ್ಲಿ ಮನೆ ಇಲ್ಲದ ಅನೇಕರು ಡ್ರಗ್​ನ ದಾಸರಾಗಿದ್ದಾರೆ. ಪೊಲೀಸರು ಅವರನ್ನು ಬಂಧಿಸುತ್ತಿಲ್ಲ. ಏಕೆಂದರೆ, ಅವರು ಶಾರುಖ್​ ಹಾಗೂ ಗೌರಿ ಖಾನ್​ ಮಕ್ಕಳಲ್ಲ’ ಎಂದು ನ್ಯಾಯಾಂಗ ಹಾಗೂ ಪೊಲೀಸ್​ ವ್ಯವಸ್ಥೆಯನ್ನು ಅವರು ಟೀಕಿಸಿದ್ದಾರೆ.

ಅಕ್ಟೋಬರ್ 2ರಂದು ಮುಂಬೈನ ಐಷಾರಾಮಿ ಕ್ರೂಸ್​ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಆರ್ಯನ್ ಖಾನ್​ ಬಂಧನಕ್ಕೆ ಒಳಗಾದರು. ಅವರನ್ನು ಎನ್​ಸಿಬಿ ವಶಕ್ಕೆ ಪಡೆಯಿತು. ಕೆಲ ದಿನಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದಾದ ನಂತರ ಆರ್ಯನ್​ಗೆ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರ್ಯನ್​ ಪರ ವಕೀಲರಾದ ಸತೀಶ್​ ಮಾನೇಶಿಂಧೆ ಅವರು ಎಷ್ಟೇ ಪ್ರಯತ್ನ ಮಾಡಿದರೂ ಜಾಮೀನು ಸಿಗುತ್ತಿಲ್ಲ.

ಇದನ್ನೂ ಓದಿ: ‘ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಬರೋದು ಸಲ್ಮಾನ್’​​; ಶಾರುಖ್​ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್​

ಮಗನಿಗಾಗಿ ನಿದ್ದೆ, ಊಟ ತ್ಯಜಿಸಿದ ಶಾರುಖ್​ ಖಾನ್​; ಹೀಗಾದರೆ ಫಿಟ್​ನೆಸ್​ ಗತಿಯೇನು?

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ