Sonu Sood: ರೈಲಿನ ಅಪಾಯಕಾರಿ ಜಾಗದಲ್ಲಿ ಕುಳಿತು ಪ್ರಯಾಣಿಸಿದ ಸೋನು ಸೂದ್; ಅಧಿಕಾರಿಗಳಿಂದ ಖಡಕ್ ಎಚ್ಚರಿಕೆ
Sonu Sood Viral Video: ರೈಲು ಜೋರಾಗಿ ಚಲಿಸುತ್ತಿರುವಾಗ ತುದಿಗಾಲಿನಲ್ಲಿ ಕುಳಿತು ಸೋನು ಸೂದ್ ಅವರು ವಿಡಿಯೋಗೆ ಪೋಸ್ ನೀಡಿದ್ದಾರೆ. ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ನಟ ಸೋನು ಸೂದ್ (Sonu Sood) ಅವರನ್ನು ಕಂಡರೆ ಕೋಟ್ಯಂತರ ಮಂದಿ ಗೌರವ ನೀಡುತ್ತಾರೆ. ಅದು ಅವರ ಸಿನಿಮಾದ ಕಾರಣಕ್ಕಾಗಿ ಮಾತ್ರವಲ್ಲ. ರಿಯಲ್ ಲೈಫ್ನಲ್ಲಿ ಅವರು ಮಾಡಿದ ಸಮಾಜಮುಖಿ ಕಾರ್ಯಗಳಿಂದ ಅವರಿಗೆ ಇಷ್ಟೊಂದು ಪ್ರೀತಿ-ಗೌರವ ಸಿಗುತ್ತಿದೆ. ಎಷ್ಟೋ ಮಂದಿಗೆ ಸೋನು ಸೂದ್ ಮಾದರಿ ಆಗಿದ್ದಾರೆ. ಆದರೆ ಇತ್ತೀಚೆಗೆ ಅವರು ನಡೆದುಕೊಂಡ ರೀತಿಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡಿರುವ ಸೋನು ಸೂದ್ ಅವರು ಅಪಾಯಕಾರಿ ಸ್ಥಳದಲ್ಲಿ ಕುಳಿತು ವಿಡಿಯೋ (Sonu Sood Viral Video) ಮಾಡಿದ್ದಾರೆ. ಇದು ಸಾಕಷ್ಟು ಟ್ರೋಲ್ ಆಗಿದೆ. ಅಲ್ಲದೇ, ಮುಂಬೈ ರೈಲ್ವೆ ಇಲಾಖೆ ಅಧಿಕಾರಿಗಳು ಕೂಡ ನಟನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿಜ ಜೀವನದಲ್ಲಿ ಸಾಧ್ಯವಾದಷ್ಟು ಸಿಂಪಲ್ ಆಗಿರಲು ಸೋನು ಸೂದ್ ಪ್ರಯತ್ನಿಸುತ್ತಾರೆ. ಒಂದಷ್ಟು ದಿನಗಳ ಹಿಂದೆ ಅವರು ರೈಲ್ವೆ ನಿಲ್ದಾಣದ ನಲ್ಲಿಯಲ್ಲಿ ನೀರು ಕುಡಿದು ಸುದ್ದಿಯಾಗಿದ್ದರು. ಆದರೆ ಈ ಬಾರಿ ಅವರು ಟ್ರೋಲ್ ಆಗುವಂತಹ ವಿಡಿಯೋ ವೈರಲ್ ಆಗಿದೆ. ರೈಲು ಬೋಗಿಯ ಮೆಟ್ಟಿಲಿನ ಸಮೀಪದಲ್ಲಿ ಸೋನು ಸೂದ್ ಕುಳಿತುಕೊಂಡಿದ್ದಾರೆ. ರೈಲು ಜೋರಾಗಿ ಚಲಿಸುತ್ತಿರುವಾಗ ತುದಿಗಾಲಿನಲ್ಲಿ ಕುಳಿತು ಅವರು ವಿಡಿಯೋಗೆ ಪೋಸ್ ನೀಡಿದ್ದಾರೆ.
ಇದನ್ನೂ ಓದಿ: Graduate Chaiwali: ಟೀ ಮಾರುವ ‘ಪದವೀಧರೆ ಚಾಯ್ವಾಲಿ’ ಪ್ರಿಯಾಂಕಾ ಗುಪ್ತಾ ಕಣ್ಣೀರಿಗೆ ಕರಗಿದ ಸೋನು ಸೂದ್
ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸೋನು ಸೂದ್ ಹಂಚಿಕೊಂಡಿದ್ದಾರೆ. ಅದನ್ನು ಕಂಡು ಅನೇಕರು ಬುದ್ಧಿಮಾತು ಹೇಳಿದ್ದಾರೆ. ‘ಇದು ನಿಜಕ್ಕೂ ಬೇಜವಾಬ್ದಾರಿಯುತ ನಡವಳಿಕೆ. ಈ ರೀತಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲ’ ಎಂದು ನೆಟ್ಟಿಗರು ಛಾಟಿ ಬೀಸಿದ್ದಾರೆ. ‘ಅಭಿಮಾನಿಗಳಿಗೆ ಮಾದರಿ ಆಗಿರುವ ನೀವು ಈ ರೀತಿ ನಡೆದುಕೊಳ್ಳಬಾರದು’ ಎಂದು ಕೂಡ ಜನರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ರಕ್ತದಲ್ಲಿ ಚಿತ್ರ ಬಿಡಿಸಿ ಸೋನು ಸೂದ್ಗೆ ನೀಡಿದ ಕಲಾವಿದ; ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು
ಮುಂಬೈ ರೈಲ್ವೆ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲೂ ಈ ಬಗ್ಗೆ ಪ್ರತಿಕ್ರಿಯೆ ನೀಡಲಾಗಿದೆ. ‘ಈ ರೀತಿ ಪ್ರಯಾಣ ಮಾಡುವುದು ಸಿನಿಮಾಗಳಲ್ಲಿ ಮನರಂಜನೆ ನೀಡಬಹುದು. ಆದರೆ ನಿಜ ಜೀವನದಲ್ಲಿ ಅಲ್ಲ. ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸೋಣ’ ಎಂದು ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.
— sonu sood (@SonuSood) December 13, 2022
ಜನರ ದೃಷ್ಟಿಯಲ್ಲಿ ಸೋನು ಸೂದ್ ಅವರು ರಿಯಲ್ ಹೀರೋ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡುವ ಮೂಲಕ ಅವರು ಜನರ ಹೃದಯ ಗೆದ್ದರು. ಈಗಲೂ ತಮ್ಮ ಚಾರಿಟಿ ಫೌಂಡೇಷನ್ ಮೂಲಕ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರ ಇಮೇಜ್ ಬದಲಾಗಿದೆ. ಮೊದಲೆಲ್ಲ ವಿಲನ್ ಪಾತ್ರ ಮಾಡುತ್ತಿದ್ದ ಅವರು ಈಗ ಅಂಥ ಪಾತ್ರಗಳಲ್ಲಿ ನಟಿಸುವುದು ಕಷ್ಟವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Thu, 15 December 22