Sooryavanshi: ಅಕ್ಷಯ್​ ಕುಮಾರ್​ ಫ್ಯಾನ್ಸ್​ ‘ಸೂರ್ಯವಂಶಿ’ ಸಿನಿಮಾ ಯಾಕೆ ನೋಡಬೇಕು? ಇಲ್ಲಿವೆ 5 ಕಾರಣಗಳು

| Updated By: ಮದನ್​ ಕುಮಾರ್​

Updated on: Nov 05, 2021 | 7:28 AM

Akshay Kumar: ಭರ್ಜರಿ ಆ್ಯಕ್ಷನ್​ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ರೋಹಿತ್​ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ‘ಸೂರ್ಯವಂಶಿ’ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಜೊತೆ ಕೈ ಜೋಡಿಸಿದ್ದಾರೆ. ನಾಯಕಿಯಾಗಿ ಕತ್ರಿನಾ ಕೈಫ್​ ನಟಿಸಿದ್ದಾರೆ.

Sooryavanshi: ಅಕ್ಷಯ್​ ಕುಮಾರ್​ ಫ್ಯಾನ್ಸ್​ ‘ಸೂರ್ಯವಂಶಿ’ ಸಿನಿಮಾ ಯಾಕೆ ನೋಡಬೇಕು? ಇಲ್ಲಿವೆ 5 ಕಾರಣಗಳು
ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್​ ಕುಮಾರ್
Follow us on

ಅಕ್ಷಯ್​ ಕುಮಾರ್​ ಮತ್ತು ಕತ್ರಿನಾ ಕೈಫ್​ ಅಭಿನಯದ ‘ಸೂರ್ಯವಂಶಿ’ ಸಿನಿಮಾ ಇಂದು (ನ.5) ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುತ್ತಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ರೋಹಿತ್​ ಶೆಟ್ಟಿ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅಕ್ಷಯ್​ ಕುಮಾರ್​ ಅಭಿಮಾನಿಗಳು ಈ ಸಿನಿಮಾಗಾಗಿ ಬಹಳ ತಿಂಗಳಿನಿಂದ ಕಾದಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್​ 20ರಂದು ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆಯ ಕಾರಣದಿಂದ ‘ಸೂರ್ಯವಂಶಿ’ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಅಂತೂ ಈಗ ರಿಲೀಸ್​ಗೆ ಸಮಯ ಕೂಡಿಬಂದಿದೆ. ಈ ಸಿನಿಮಾ ನೋಡಲು ಇರುವ 5 ಪ್ರಮುಖ ಕಾರಣಗಳು ಹೀಗಿವೆ..

 

1: ರೋಹಿತ್​ ಶೆಟ್ಟಿ-ಅಕ್ಷಯ್​ ಕುಮಾರ್​ ಮಸ್ತ್​ ಕಾಂಬಿನೇಷನ್​

ಭರ್ಜರಿ ಆ್ಯಕ್ಷನ್​ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ರೋಹಿತ್​ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಅಕ್ಷಯ್​ ಕುಮಾರ್​ ಜೊತೆ ಕೈ ಜೋಡಿಸಿದ್ದಾರೆ. ಸಾಹಸಮಯ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅಕ್ಷಯ್​ಕುಮಾರ್​ಗೆ ರೋಹಿತ್​ ಶೆಟ್ಟಿ ಯಾವ ರೀತಿ ನಿರ್ದೇಶನ ಮಾಡಿರಬಹುದು ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ.

ಕಾರಣ 2: ಅಕ್ಕಿ-ಕತ್ರಿನಾ ಸೂಪರ್​ ಜೋಡಿ

ಸಿಂಗ್​ ಈಸ್​ ಕಿಂಗ್​​, ತೀಸ್​ ಮಾರ್​ ಖಾನ್​, ಸಮಸ್ತೆ ಲಂಡನ್​ ಮುಂತಾದ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ ಮತ್ತು ಕತ್ರಿನಾ ಕೈಫ್​ ಮೋಡಿ ಮಾಡಿದ್ದರು. ಈ ಸೂಪರ್​ ಹಿಟ್​ ಜೋಡಿ ‘ಸೂರ್ಯವಂಶಿ’ ಸಿನಿಮಾದಲ್ಲಿ ಮತ್ತೆ ಒಂದಾಗಿದೆ. ಆ ಕಾರಣದಿಂದಲೂ ಈ ಚಿತ್ರ ಸಖತ್​ ನಿರೀಕ್ಷೆ ಮೂಡಿಸಿದೆ. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದು, ಅವರ ಹೆಂಡತಿ ಪಾತ್ರದಲ್ಲಿ ಕತ್ರಿನಾ ಕೈಫ್​ ಕಾಣಿಸಿಕೊಂಡಿದ್ದಾರೆ.

ಕಾರಣ 3: ರಣವೀರ್​ ಸಿಂಗ್​-ಅಜಯ್​ ದೇವಗನ್​

‘ಸೂರ್ಯವಂಶಿ’ ಚಿತ್ರಕ್ಕೆ ಅಕ್ಷಯ್​ಕುಮಾರ್​ ನಾಯಕ. ಅವರ ಜೊತೆಗೆ ರಣವೀರ್​ ಸಿಂಗ್​ ಮತ್ತು ಅಜಯ್​ ದೇವಗನ್​ ಕೂಡ ತೆರೆಹಂಚಿಕೊಂಡಿದ್ದಾರೆ. ಮುಖ್ಯವಾದ ಅತಿಥಿ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಮೂವರ ಕಾಂಬಿನೇಷನ್​ ಅನ್ನು ದೊಡ್ಡ ಪರದೆ ಮೇಲೆ ನೋಡುವುದು ಅಭಿಮಾನಿಗಳಿಗೆ ನಿಜವಾದ ಹಬ್ಬ.

ಕಾರಣ 4: ರಿಮೇಕ್​ ಅಥವಾ ಸ್ವಮೇಕ್​?

ರೋಹಿತ್​ ಶೆಟ್ಟಿ ನಿರ್ದೇಶನದ ‘ಸಿಂಘಂ’ ಚಿತ್ರವು ತಮಿಳಿನ ‘ಸಿಂಗಂ’ ಸಿನಿಮಾದ ರಿಮೇಕ್​ ಆಗಿತ್ತು. ನಂತರ ಅವರು ನಿರ್ದೇಶನ ಮಾಡಿದ ‘ಸಿಂಬ’ ಚಿತ್ರದ ಕಥೆಗೆ ತೆಲುಗಿನ ‘ಟೆಂಪರ್​’ ಸಿನಿಮಾ ಪ್ರೇರಣೆಯಾಗಿತ್ತು. ಆದರೆ ಈಗ ಮೂಡಿಬಂದಿರುವ ‘ಸೂರ್ಯವಂಶಿ’ ಸಿನಿಮಾ ಸಂಪೂರ್ಣ ಸ್ವಮೇಕ್​ ಎಂಬ ಮಾತಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲು ಇದು ಕೂಡ ಒಂದು ಮುಖ್ಯ ಕಾರಣ.

ಕಾರಣ 5: ಕೊವಿಡ್​ 2ನೇ ಅಲೆ ಬಳಿಕ ಚಿತ್ರಮಂದಿರದಲ್ಲಿ ಹಬ್ಬ

ಕೊರೊನಾ ವೈರಸ್​​ ಹಾವಳಿಯ ಕಾರಣದಿಂದ ಹಲವು ತಿಂಗಳ ಕಾಲ ಚಿತ್ರಮಂದಿರಗಳು ಬಂದ್​ ಆಗಬೇಕಾಯಿತು. ನಂತರ ಲಾಕ್​ಡೌನ್​ ನಿಯಮ ಸಡಿಲಿಕೆ ಆದರೂ ದೇಶದ ಹಲವು ಕಡೆಗಳಲ್ಲಿ ಶೇ.50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಈಗ ಶೇ.100ರಷ್ಟು ಆಸನಭರ್ತಿಗೆ ಅನುಮತಿ ಸಿಕ್ಕಿದೆ. ಹಾಗಾಗಿ ಬ್ಯಾಕ್​ ಟು ಬ್ಯಾಕ್​ ಸ್ಟಾರ್​ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಚಿತ್ರಮಂದಿರದಲ್ಲಿ ಸಿನಿಪ್ರಿಯರು ಸಂಭ್ರಮಿಸುತ್ತಿದ್ದಾರೆ. ಆ ಸಂಭ್ರಮಕ್ಕೆ ‘ಸೂರ್ಯವಂಶಿ’ ಕೂಡ ಸಾಕ್ಷಿಯಾಗುತ್ತಿದೆ.

ಇದನ್ನೂ ಓದಿ:

ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು

OMG 2: ‘ಓಹ್​ ಮೈ ಗಾಡ್​ 2’ ಪೋಸ್ಟರ್​ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ ಅಕ್ಷಯ್​ ಕುಮಾರ್​; ಹೇಗಿದೆ ಹೊಸ ಗೆಟಪ್​?