
ನಟಿ ಶ್ರೀಲೀಲಾ (Sreeleela) ಅವರು ಇತ್ತೀಚೆಗೆ ಸಿನಿಮಾಗಳ ಮೂಲಕ ಭರ್ಜರಿ ಸುದ್ದಿ ಆಗುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಆದರೆ, ಅಲ್ಲಿಂದ ಅವರಿಗೆ ಆಫರ್‌ಗಳು ಮಾತ್ರ ನದಿಯಂತೆ ಹರಿದು ಬರುತ್ತಿದೆ. ಈಗ ಅವರು ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟಿದ್ದಾರೆ. ಇದರಿಂದ ಹೊಸ ಗಾಸಿಪ್ ಒಂದು ಹುಟ್ಟಿಕೊಂಡಿದೆ. ಆ ನಿರ್ಮಾಪಕರ ಮುಂದಿನ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಆಗಿರೋದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.
ಶ್ರೀಲೀಲಾ ಅವರಿಗೆ ಬಾಲಿವುಡ್‌ನಲ್ಲಿ ಅಟೆಂಕ್ಷನ್ ಸಿಕ್ಕಿದ್ದು ‘ಪುಷ್ಪ 2’ ಚಿತ್ರದ ‘ಕಿಸ್ಸಿಕ್..’ ಹಾಡಿನ ಮೂಲಕ. ಈ ಹಾಡು ಸೂಪರ್ ಹಿಟ್ ಆಗಿ ಗಮನ ಸೆಳೆಯಿತು. ಇದು ತೆಲುಗು ಸಿನಿಮಾ ಆದರೂ ಬಾಲಿವುಡ್ಗೆ ಡಬ್ ಆಗಿ ರಿಲೀಸ್ ಕಂಡಿತ್ತು. ‘ಕಿಸ್ಸಿಕ್.. ಹಾಡಿನಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡಿದ್ದರು. ಅಲ್ಲಿಯವರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಕಾರಣದಿಂದಲೇ ಶ್ರೀಲೀಲಾ ಬಾಲಿವುಡ್‌ನಲ್ಲಿ ಫೇಮಸ್ ಆದರು. ಬಾಲಿವುಡ್ ಮಂದಿ ಅವರು ಹಾಡಿ ಹೊಗಳಿದ್ದಾರೆ. ಸದ್ಯ ಅವರು ‘ಆಶಿಕಿ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಆಫರ್‌ಗಳು ಅವರನ್ನು ಹುಡಕಿ ಬರುತ್ತಿವೆ.
ಶ್ರೀಲೀಲಾ ಅವರು ನಿರ್ಮಾಪಕ ಮಹಾವೀರ್ ಜೈನ್ ಜೊತೆ ಕಾಣಿಸಿಕೊಂಡಿದ್ದಾರೆ. ಇವರು ರಾಜ್ ಶಾಂಡಿಲ್ಯ ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ಸಿದ್ದಾರ್ಥ್ ಮಲ್ಹೋತ್ರ ಹೀರೋ. ಈಗ ವೈರಲ್ ಆಗಿರೋ ಫೋಟೋದಿಂದ ಶ್ರೀಲೀಲಾ ಅವರು ಈ ಚಿತ್ರದಲ್ಲಿ ನಟಿಸೋದು ಬಹುತೇಕ ಖಚಿತ ಆದಂತೆ ಆಗಿದೆ. ಮಹಾವೀರ್ ಜೈನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ ವೇಳೆಗೆ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ.
ಇದನ್ನೂ ಓದಿ: ಬಾಲಿವುಡ್ ಸಿನಿಮಾಕ್ಕಾಗಿ ಸಂಭಾವನೆ ತಗ್ಗಿಸಿಕೊಂಡರಾ ನಟಿ ಶ್ರೀಲೀಲಾ
ಬಾಲಿವುಡ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಇದೇ ರೀತಿಯ ಕ್ರೇಜ್ ಹೊಂದಿದ್ದಾರೆ. ಬಾಲಿವುಡ್‌ನಲ್ಲಿ ಮೊದಲು ನಟಿಸಿದ ಸಿನಿಮಾ ರಿಲೀಸ್ ಆಗುವ ಮೊದಲೇ ಹಲವು ಚಿತ್ರಗಳ ಆಫರ್‌ಗಳು ಅವರನ್ನು ಹುಡುಕಿ ಬಂದಿದ್ದವು. ಈಗ ಶ್ರೀಲೀಲಾ ಕೂಡ ಇದೇ ಸಾಲಿಗೆ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ವಿಶೇಷ ಎಂದರೆ ಇಬ್ಬರೂ ಕನ್ನಡದವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:38 am, Mon, 5 May 25