ಮಿಥುನ್ ಚಕ್ರವರ್ತಿ ಜೊತೆ ಹುಚ್ಚು ಪ್ರೀತಿ, ರಹಸ್ಯ ಮದುವೆ; ಶ್ರೀದೇವಿ ಬಾಳಲ್ಲಿ ಬೀಸಿತ್ತು ಬಿರುಗಾಳಿ

Sridevi: ಶ್ರೀದೇವಿ ಮತ್ತು ಮಿಥುನ್ ಚಕ್ರವರ್ತಿಯವರ ರಹಸ್ಯ ಮದುವೆ ಬಗ್ಗೆ ಸುಜಾತಾ ಮೆಹ್ತಾ ನೆನಪು ಮಾಡಿಕೊಂಡಿದ್ದಾರೆ. ಮಿಥುನ್ ಚಕ್ರವರ್ತಿ ಜೊತೆ ಬ್ರೇಕ್ ಅಪ್ ಆದಾಗ ಶ್ರೀದೇವಿ ತೀವ್ರ ಶಾಕ್​ಗೆ ಒಳಗಾಗಿದ್ದರಂತೆ. ಮಿಥುನ್ ಚಕ್ರವರ್ತಿ ಜೊತೆ ಶ್ರೀದೇವಿ ರಹಸ್ಯ ಮದುವೆ ಮಾಡಿಕೊಂಡಿದ್ದರು ಎಂದು ಸುಜಾತಾ ಹೇಳಿದ್ದಾರೆ.

ಮಿಥುನ್ ಚಕ್ರವರ್ತಿ ಜೊತೆ ಹುಚ್ಚು ಪ್ರೀತಿ, ರಹಸ್ಯ ಮದುವೆ; ಶ್ರೀದೇವಿ ಬಾಳಲ್ಲಿ ಬೀಸಿತ್ತು ಬಿರುಗಾಳಿ
Sridevi Mithun
Edited By:

Updated on: Jan 01, 2025 | 6:38 PM

ಶ್ರೀದೇವಿ ಅವರು ಅದ್ಭುತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಅವರು ವೈಯಕ್ತಿಕ ವಿಚಾರಗಳ ಕಾರಣಕ್ಕೆ ಸಾಕಷ್ಟು ಸುದ್ದಿ ಆಗುತ್ತಲೇ ಇದ್ದರು. ಅವರ ವಯಕ್ತಿ ಬದುಕಿನಲ್ಲಿ ಸಾಕಷ್ಟು ಏರಿಳಿತಗಳು ಇದ್ದವು. ಅವರ ಬಗ್ಗೆ ಹರಿದಾಡಿದ ಸುದ್ದಿ ಒಂದೆರಡಲ್ಲ. ಅವರು ಮಾಡಿಕೊಂಡ ವಿವಾದಗಳು ಹಲವು. ಅವರು ಮಿಥುನ್ ಚಕ್ರವರ್ತಿಯನ್ನು ವಿವಾಹ ಆಗಿದ್ದರು. ಈಗ ಹಿರಿಯ ನಟಿ ಸುಜಾತಾ ಮೆಹ್ತಾ ಅವರು ಶ್ರೀದೇವಿ ಬಗ್ಗೆ ಹಾಗೂ ಅವರ ಲವ್ಲೈಫ್ ಬಗ್ಗೆ ಮಾತನಾಡಿದ್ದಾರೆ. ಮಿಥುನ್ ಚಕ್ರವರ್ತಿ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ.

‘ಮಿಥುನ್ ಚಕ್ರವರ್ತಿ ಜೊತೆಗಿನ ಬ್ರೇಕಪ್ ಬಳಿಕ ಶ್ರೀದೇವಿ ತುಂಬಾ ವಿಚಲಿತಳಾಗಿದ್ದರು. ಆದರೆ ಅವರು ತುಂಬಾ ವೃತ್ತಿಪರ ಆಗಿದ್ದರು. ಕ್ಯಾಮೆರಾ ಆನ್ ಆದ ಕ್ಷಣದಲ್ಲಿ ಅವರು ಕ್ಯಾಮರಾಗೆ ಮಾತ್ರ ಸೇರಿದ್ದರು. ಆದರೆ ಆ ಹೊಡೆತದ ನಂತರ ಅವರು ಒಂದು ಮೂಲೆಯಲ್ಲಿ ಶಾಂತವಾಗಿ ಕುಳಿತುಕೊಳ್ಳುತ್ತಿದ್ದರು’ ಎಂದು ಸುಜಾತಾ ನೆನಪಿಸಿಕೊಂಡರು. ‘ಮಿಥುನ್ ಅವರನ್ನು ಶ್ರೀದೇವಿ ಹುಚ್ಚುತನದಿಂದ ಪ್ರೀತಿಸುತ್ತಿದ್ದರು’ ಎಂದು ಹೇಳಿದ್ದಾರೆ.

‘ಜಾಗ್ ಉಟಾ ಇನ್ಸಾನ್’ ಸೆಟ್‌ನಲ್ಲಿ ಮಿಥುನ್ ಮತ್ತು ಶ್ರೀದೇವಿ ಭೇಟಿಯಾದರು. ಇಬ್ಬರೂ 1985ರಲ್ಲಿ ರಹಸ್ಯವಾಗಿ ವಿವಾಹವಾದರು ಎಂದು ಆರೋಪಿಸಲಾಗಿದೆ. ಇಬ್ಬರೂ 1985ರಿಂದ 1988ರವರೆಗೆ ಸಂಸಾರ ನಡೆಸಿದರು ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಮಿಥುನ್ ಯೋಗೀತಾ ಬಾಲಿ ಅವರನ್ನು ಮದುವೆಯಾಗಿದ್ದರು.

ಇದನ್ನೂ ಓದಿ:ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿ ಅರೆಸ್ಟ್ ಮಾಡ್ತಾರಾ? ಆರ್​ಜಿವಿ ಪ್ರಶ್ನೆ

1987ರಲ್ಲಿ ಬೋನಿ ಕಪೂರ್ ಅವರು ಶ್ರೀದೇವಿಗೆ ಹತ್ತಿರವಾದರು. ಆಗ, ಮಿಥುನ್ ರಹಸ್ಯೆ ಮದುವೆ ವಿಚಾರ ಹೊರಬಿತ್ತು. ಮಿಥುನ್ ಅವರ ಪತ್ನಿ ಯೋಗೀತಾ ಬಾಲಿಗೆ ಈ ವಿಚಾರ ತಿಳಿಯಿತು. ನಂತರ ಬೋನಿ ಕಪೂರ್ ಮತ್ತು ಮಿಥುನ್ ಚಕ್ರವರ್ತಿ ಅವರ ಸ್ನೇಹವೂ ಹಳಸಿತ್ತು ಎನ್ನಲಾಗಿದೆ. ಶ್ರೀದೇವಿ 1988ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು ಮತ್ತು ಮಿಥುನ್‌ನಿಂದ ಬೇರ್ಪಟ್ಟರು ಎಂದು ಹೇಳಲಾಗಿದೆ.

ಈ ವಿಚಾರವನ್ನು ಮಿಥುನ್ ನೇರವಾಗಿ ಒಪ್ಪಿಕೊಳ್ಳಲೂ ಇಲ್ಲ, ಅಲ್ಲಗಳೆಯಲೂ ಇಲ್ಲ. ‘ಇವುಗಳ ಪೈಕಿ ಕೆಲವು ಸತ್ಯ, ಕೆಲವು ಸುಳ್ಳು’ ಎಂದು ಮಿಥುನ್ ಚಕ್ರವರ್ತಿ ಅವರು ಹೇಳಿದ್ದರು. ಆ ಬಳಿಕ ಶ್ರಿದೇವಿ ಅವರು ಬೋನಿ ಕಪೂರ್​ ಅನ್ನು ಮದುವೆ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ