ಕುಟುಂಬಕ್ಕಾಗಿ ನೂರಾರು ಕೋಟಿ ರೂಪಾಯಿ ಬಿಟ್ಟು ಹೋದ ಸೆಲೆಬ್ರಿಟಿಗಳು ಇವರು

| Updated By: ರಾಜೇಶ್ ದುಗ್ಗುಮನೆ

Updated on: Sep 10, 2024 | 7:52 AM

2018ರಲ್ಲಿ ಶ್ರೀದೇವಿ ಕೊನೆಯುಸಿರೆಳೆದರು. ಅವರ ಸಾವು ಬಾಲಿವುಡ್‌ಗೆ ಆಘಾತವನ್ನುಂಟುಮಾಡಿತ್ತು. ಕುಟುಂಬದ ದುಃಖ ಬಹುವಾಗಿತ್ತು. ಶ್ರೀದೇವಿ ಸಾವಿನ ನಂತರ ಕುಟುಂಬಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಬಿಟ್ಟು ಹೋಗಿದ್ದಾರೆ. ಈ ರೀತಿ ಅನೇಕ ಸೆಲೆಬ್ರಿಟಿಗಳು ಕೋಟಿ ಕೋಟಿ ಬಿಟ್ಟು ಹೋಗಿದ್ದಾರೆ.

ಕುಟುಂಬಕ್ಕಾಗಿ ನೂರಾರು ಕೋಟಿ ರೂಪಾಯಿ ಬಿಟ್ಟು ಹೋದ ಸೆಲೆಬ್ರಿಟಿಗಳು ಇವರು
ಶ್ರೀದೇವಿ-ಸುಶಾಂತ್
Follow us on

ಅನೇಕ ಸೆಲೆಬ್ರಿಟಿಗಳ ಹೆಸರನ್ನು ನಿಧನದ ನಂತರವೂ ಅವರನ್ನು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಸೆಲೆಬ್ರಿಟಿಗಳು ಬದುಕಿಲ್ಲದಿದ್ದರೂ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಾ ಇರುತ್ತದೆ. ಇಂದಿಗೂ ಅವರ ಸಿನಿಮಾಗಳನ್ನು ಅಭಿಮಾನಿಗಳು ಅಷ್ಟೇ ಆಸಕ್ತಿಯಿಂದ ನೋಡುತ್ತಾರೆ. ಇಷ್ಟೇ ಅಲ್ಲ, ಸೆಲೆಬ್ರಿಟಿಗಳು ಕೊನೆಯುಸಿರೆಳೆದರೂ ಕುಟುಂಬಕ್ಕಾಗಿ ಕೋಟಿಗಟ್ಟಲೆ ಸಂಪತ್ತನ್ನು ಬಿಟ್ಟು ಹೋಗುತ್ತಾರೆ. ತಮ್ಮ ಕುಟುಂಬಕ್ಕಾಗಿ ಕೋಟಿಗಟ್ಟಲೆ ಸಂಪತ್ತನ್ನು ಬಿಟ್ಟು ಹೋದ ಕೆಲವು ದಿವಂಗತ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ನಟಿ ಶ್ರೀದೇವಿ

2018ರಲ್ಲಿ ಶ್ರೀದೇವಿ ಕೊನೆಯುಸಿರೆಳೆದರು. ಅವರ ಸಾವು ಬಾಲಿವುಡ್‌ಗೆ ಆಘಾತವನ್ನುಂಟುಮಾಡಿತ್ತು. ಕುಟುಂಬದ ದುಃಖ ಬಹುವಾಗಿತ್ತು. ಶ್ರೀದೇವಿ ಸಾವಿನ ನಂತರ ಕುಟುಂಬಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಬಿಟ್ಟು ಹೋಗಿದ್ದಾರೆ. ಶ್ರೀದೇವಿಯ ಸಂಪತ್ತಿನ ಬಗ್ಗೆ ಹೇಳೋದಾದರೆ ಅವರು 247 ಕೋಟಿ ರೂಪಾಯಿ ಸಂಪತ್ತನ್ನು ಬಿಟ್ಟು ಹೋಗಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್

ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಬೇಗನೆ ವಿದಾಯ ಹೇಳಿದ್ದಾರೆ. ಅವರ ಮರಣದ ನಂತರ, ನಟ ತನ್ನ ಕುಟುಂಬಕ್ಕೆ ಸುಮಾರು 59 ಕೋಟಿ ರೂಪಾಯಿಗಳನ್ನು ಬಿಟ್ಟು ಹೋಗಿದ್ದಾರೆ. ಅಷ್ಟೇ ಅಲ್ಲ, ನಟ ದುಬಾರಿ ಕಾರುಗಳನ್ನು ಸಹ ಹೊಂದಿದ್ದರು. ನಟ 2020ರ ಜೂನ್ 20ರಂದು ಆತ್ಮಹತ್ಯೆ ಮಾಡಿಕೊಂಡರು.

ರಿಷಿ ಕಪೂರ್

ರಿಷಿ ಕಪೂರ್ ಕೂಡ ತಮ್ಮ ಕುಟುಂಬಕ್ಕೆ ಕೋಟಿಗಟ್ಟಲೆ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ರಿಷಿ ಕಪೂರ್ 300 ಕೋಟಿ ರೂಪಾಯಿ ಸಂಪತ್ತನ್ನು ಹೊಂದಿದ್ದರು. ಕಪೂರ್ ಕುಟುಂಬ ಕಳೆದ ಹಲವಾರು ವರ್ಷಗಳಿಂದ ಬಾಲಿವುಡ್ ಅನ್ನು ಆಳುತ್ತಿದೆ. ಕರೋನಾ ಸಮಯದಲ್ಲಿ ರಿಷಿ ಕಪೂರ್ ಕೊನೆಯುಸಿರೆಳೆದರು.

ಇದನ್ನೂ ಓದಿ: ‘ಎರಡನೇ ಅಧ್ಯಾಯ’ ಆರಂಭಿಸಿದ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಗರ್ಲ್​ಫ್ರೆಂಡ್

ಓಂಪುರಿ

ಓಂಪುರಿ ಕೂಡ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಅಭಿಮಾನಿಗಳೂ ಓಂಪುರಿಯನ್ನು ಮೆರೆಇಸದರು. ಆದರೆ ಅವರ ಸಾವು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ. ಓಂಪುರಿ ನಿಧನದ ನಂತರ ಅವರ ಕುಟುಂಬಕ್ಕೆ 151 ಕೋಟಿ ರೂ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.