Jacqueline Fernandez: ‘ನನ್ನ ಜೀವನವನ್ನು ನರಕ ಮಾಡಿದ’; ಸುಕೇಶ್ ಕರ್ಮಕಾಂಡವನ್ನು ಬಿಚ್ಚಿಟ್ಟ ನಟಿ ಜಾಕ್ವೆಲಿನ್ ಫರ್ನಾಂಡಿಸ್ 

| Updated By: ರಾಜೇಶ್ ದುಗ್ಗುಮನೆ

Updated on: Jan 19, 2023 | 12:16 PM

ಸುಕೇಶ್ ಚಂದ್ರಶೇಖರ್ ಸಹಚರೆ ಪಿಂಕಿ ಇರಾನಿಯಿಂದ ಜಾಕ್ವೆಲಿನ್​ಗೆ ಆತನ ಪರಿಚಯ ಆಗಿತ್ತು. ಸರ್ಕಾರಿ ಅಧಿಕಾರಿ ಎಂದು ಸುಕೇಶ್​​ನನ್ನು ಪಿಂಕಿ ಪರಿಚಯಿಸಿದ್ದಳು.

Jacqueline Fernandez: ‘ನನ್ನ ಜೀವನವನ್ನು ನರಕ ಮಾಡಿದ’; ಸುಕೇಶ್ ಕರ್ಮಕಾಂಡವನ್ನು ಬಿಚ್ಚಿಟ್ಟ ನಟಿ ಜಾಕ್ವೆಲಿನ್ ಫರ್ನಾಂಡಿಸ್ 
ಸುಕೇಶ್ ಜತೆ ಜಾಕ್ವೆಲಿನ್
Follow us on

ಸುಕೇಶ್ ಚಂದ್ರಶೇಖರ್ (Sukesh Chandrashekhar) ಅವರು ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್​​ ಫರ್ನಾಂಡಿಸ್​​ಗೆ (Jacqueline Fernandez) ಸಂಕಷ್ಟ ಉಂಟಾಗಿದೆ. ಸುಕೇಶ್ ಜತೆ ಆಪ್ತವಾಗಿದ್ದ ಕಾರಣಕ್ಕೆ ಅವರು ಕೂಡ ಈ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈಗ ದೆಹಲಿ ಕೋರ್ಟ್​ಗೆ ಹಾಜರಾಗಿರುವ ಜಾಕ್ವೆಲಿನ್ ಅವರು, ‘ಸುಕೇಶ್ ನನ್ನ ಭಾವನೆಗಳ ಜತೆ ಆಟ ಆಡಿದ ಹಾಗೂ ನನ್ನ ಜೀವನವನ್ನು ನರಕ ಮಾಡಿದ’ ಎಂದು ಹೇಳಿದ್ದಾರೆ. ಸುಕೇಶ್ ಚಂದ್ರಶೇಖರ್ ಮಾಡಿದ ಮೋಸದ ಬಗ್ಗೆ ಅವರು ಕೋರ್ಟ್​ಗೆ ವಿವರಿಸಿದ್ದಾರೆ.

ಸುಕೇಶ್ ಚಂದ್ರಶೇಖರ್ ಸಹಚರೆ ಪಿಂಕಿ ಇರಾನಿಯಿಂದ ಜಾಕ್ವೆಲಿನ್​ಗೆ ಆತನ ಪರಿಚಯ ಆಗಿತ್ತು. ಸರ್ಕಾರಿ ಅಧಿಕಾರಿ ಎಂದು ಸುಕೇಶ್​​ನನ್ನು ಪಿಂಕಿ ಪರಿಚಯಿಸಿದ್ದಳು. ‘ನಾನು ಸನ್ ಟಿವಿ ಮಾಲೀಕ’ ಎಂದು ಕೂಡ ಸುಕೇಶ್ ಹೇಳಿಕೊಂಡಿದ್ದ. ಜಯಲಲಿತಾ ತನ್ನ ಚಿಕ್ಕಮ್ಮ ಎಂದು ಆತ ಹೇಳಿಕೊಂಡಿದ್ದ.

‘ನಾನು ನಿಮ್ಮ ದೊಡ್ಡ ಫ್ಯಾನ್ ಎಂದು ಚಂದ್ರಶೇಖರ್ ಹೇಳಿದ್ದ. ನನ್ನ ಬಳಿ ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡುವಂತೆ ಹೇಳಿದ್ದ. ಸನ್​ ಟಿವಿ ಮಾಲೀಕ ಆಗಿರುವುದರಿಂದ ಹಲವು ಪ್ರಾಜೆಕ್ಟ್​​ಗಳು ಲೈನಪ್​ ಆಗಿವೆ. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಆತ ಹೇಳಿದ್ದ. ಸುಕೇಶ್ ನನ್ನ ದಾರಿ ತಪ್ಪಿಸಿದ. ನನ್ನ ಜೀವನ ಹಾಗೂ ವೃತ್ತಿಜೀವನವನ್ನು ಆತ ಹಾಳು ಮಾಡಿದ’ ಎಂದು ಜಾಕ್ವೆಲಿನ್ ಹೇಳಿದ್ದಾರೆ.

ಇದನ್ನೂ ಓದಿ
ವಂಚನೆ ಪ್ರಕರಣದ ಬಗ್ಗೆ ಜಾಕ್ವೆಲಿನ್​ಗೆ ಇಲ್ಲ ಟೆನ್ಷನ್; ಮಸ್ತ್ ಫೋಟೋ ಹಂಚಿಕೊಂಡ ನಟಿ
ಅಕ್ರಮ ಹಣ ವರ್ಗಾವಣೆ ಕೇಸ್​: ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಮಧ್ಯಂತರ ಜಾಮೀನು ವಿಸ್ತರಣೆ
ನಟಿ ಜಾಕ್ವಲಿನ್ ಫರ್ನಾಂಡಿಸ್ ಟಾಪ್​ಲೆಸ್​ ಫೋಟೋ ನೋಡಿ ಅಭಿಮಾನಿಗಳು ಕ್ಲೀನ್​ ಬೋಲ್ಡ್​

‘ಸುಕೇಶ್ ಅರೆಸ್ಟ್​ ಆದ ನಂತರವೇ ಆತನ ನಿಜವಾದ ಹೆಸರು ನನಗೆ ಗೊತ್ತಾಗಿತ್ತು. ಆತ ಮಾಡುತ್ತಿದ್ದ ಕೆಲಸಗಳ ಬಗ್ಗೆ ಗೊತ್ತಾಯಿತು. ಪಿಂಕಿ ನನಗೆ ಮೋಸ ಮಾಡಿದಳು. ಆತನ ಹಿನ್ನೆಲೆ ಬಗ್ಗೆ ಪಿಂಕಿ ಎಂದಿಗೂ ಹೇಳಿಲ್ಲ. ಸುಕೇಶ್ ಹಿನ್ನಲೆ ಬಗ್ಗೆ ಆಕೆಗೆ ಗೊತ್ತಿತ್ತು’ ಎಂದು ಜಾಕ್ವೆಲಿನ್ ಹೇಳಿದ್ದಾರೆ.

ಜನವರಿ 27ಕ್ಕೆ ಕೆಲಸದ ನಿಮಿತ್ತ ದುಬೈಗೆ ಹಾರಲು ಅವಕಾಶ ನೀಡಬೇಕು ಎಂದು ಜಾಕ್ವೆಲಿನ್ ಕೋರಿದ್ದಾರೆ. ಈ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೋಟಿಸ್ ನೀಡಿದ್ದು, ಈ ಸಂಬಂಧ ಪ್ರತಿಕ್ರಿಯಿಸುವಂತೆ ಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ: ವಂಚನೆ ಪ್ರಕರಣದ ಬಗ್ಗೆ ಜಾಕ್ವೆಲಿನ್​ಗೆ ಇಲ್ಲ ಟೆನ್ಷನ್; ಮಸ್ತ್ ಫೋಟೋ ಹಂಚಿಕೊಂಡ ನಟಿ

ಕಳೆದ ಡಿಸೆಂಬರ್ ತಿಂಗಳಲ್ಲಿ ಜಾಕ್ವೆಲಿನ್ ಅವರು ಬಹ್ರೇನ್​​ಗೆ ತೆರಳಲು ಅವಕಾಶ ಕೋರಿದ್ದರು. ತಾಯಿಗೆ ಅನಾರೋಗ್ಯ ಇರುವ ಕಾರಣ ಅವರನ್ನು ನೋಡಲು ಅಲ್ಲಿಗೆ ಹೋಗಬೇಕು ಎಂದು ಕೋರಿದ್ದರು. ಕೋರ್ಟ್ ಈ ಬಗ್ಗೆ ಆಸಕ್ತಿ ತೋರದ ಕಾರಣ ಅವರು ಅರ್ಜಿಯನ್ನು ಹಿಂಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:33 am, Thu, 19 January 23