ಆರ್ಯನ್​ ಖಾನ್​ ಇನ್ನೂ ಮಗು ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ ನಟ ಸುನೀಲ್​ ಶೆಟ್ಟಿ

| Updated By: ರಾಜೇಶ್ ದುಗ್ಗುಮನೆ

Updated on: Oct 03, 2021 | 6:01 PM

ರೇವ್​ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಡಿಲಿಯಾ ಕ್ರೂಸ್ ಶಿಪ್​ಮೇಲೆ ದಾಳಿ ನಡೆದಿದೆ. ಈ ವೇಳೆ ಆರ್ಯನ್​ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಬಂಧನ ನಡೆದಿದೆ. ಈ ಬಗ್ಗೆ ಮಾಧ್ಯಮಗಳು ನಾನಾ ರೀತಿಯ ವರದಿ ಬಿತ್ತರಿಸುತ್ತಿವೆ.

ಆರ್ಯನ್​ ಖಾನ್​ ಇನ್ನೂ ಮಗು ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ ನಟ ಸುನೀಲ್​ ಶೆಟ್ಟಿ
ಸುನೀಲ್​ ಶೆಟ್ಟಿ-ಆರ್ಯನ್
Follow us on

ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​​ ಅವರು ಡ್ರಗ್ಸ್​ ಪಾರ್ಟಿಯಲ್ಲಿ ಭಾಗಿಯಾಗಿದ್ದಕ್ಕೆ ಬಂಧನಕ್ಕೆ ಒಳಗಾಗಿದ್ದಾರೆ. ಸಾಕಷ್ಟು ಪ್ರತಿಷ್ಠಿತ ಕುಟುಂಬದವರು ಈ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುನೀಲ್​ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಆರ್ಯನ್​ ಖಾನ್​ ಪರ ವಾದ ಮಂಡಿಸಿದ್ದಾರೆ. ಈ ವಿಚಾರದಲ್ಲಿ ಸುನೀಲ್​ ಶೆಟ್ಟಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಕಾರ್ಡಿಲಿಯಾ ಕ್ರೂಸ್ ಶಿಪ್​ನಲ್ಲಿ ಈ ಪಾರ್ಟಿ ನಡೆಯುತ್ತಿತ್ತು. ಆರ್ಯನ್​ ಖಾನ್​ ಸೇರಿ ಸಾಕಷ್ಟು ಪ್ರತಿಷ್ಠಿತ ಕುಟುಂಬದ ಮಕ್ಕಳು ಈ ಪಾರ್ಟಿಗೆ ಹಾಜರಿ ಹಾಕಿದ್ದರು. ಈ ಪಾರ್ಟಿಗೆ ಎಂಟ್ರಿ ಫೀ 80 ಸಾವಿರ ರೂಪಾಯಿ ಇದೆ ಎನ್ನುವ ಬಗ್ಗೆ ವರದಿಯಾಗಿದೆ. ರೇವ್​ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಡಿಲಿಯಾ ಕ್ರೂಸ್ ಶಿಪ್​ಮೇಲೆ ದಾಳಿ ನಡೆದಿದೆ. ಈ ವೇಳೆ ಆರ್ಯನ್​ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಬಂಧನ ನಡೆದಿದೆ. ಈ ಬಗ್ಗೆ ಮಾಧ್ಯಮಗಳು ನಾನಾ ರೀತಿಯ ವರದಿ ಬಿತ್ತರಿಸುತ್ತಿವೆ.

ಈ ಬಗ್ಗೆ ಮಾತನಾಡಿರುವ ಸುನೀಲ್​ ಶೆಟ್ಟಿ, ‘ಎಲ್ಲೇ ದಾಳಿ ನಡೆದರೂ, ಹಲವಾರು ಜನರು ಸಿಕ್ಕಿಬೀಳುತ್ತಾರೆ. ಆದರೆ, ಎಲ್ಲರೂ ತಪ್ಪಿತಸ್ಥರಲ್ಲ. ಈ ಮಗು ಕೂಡ ಡ್ರಗ್ಸ್​ ಸೇವಿಸಿರಬೇಕು ಅಥವಾ ಈ ಮಗು ಕೂಡ ಅದನ್ನು ಮಾಡಿರಬೇಕು ಎಂದು ನಾವು ಊಹಿಸುತ್ತೇವೆ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಆ ಮಗುವಿಗೆ ಉಸಿರಾಡಲು ಅವಕಾಶ ನೀಡಿ’ ಎಂದು ಸುನೀಲ್​ ಶೆಟ್ಟಿ ಕೋರಿದ್ದಾರೆ.

‘ಬಾಲಿವುಡ್​ನಲ್ಲಿ ಏನೇ ಆದರೂ ಮಾಧ್ಯಮದವರು ನಾನಾ ರೀತಿಯ ಸುದ್ದಿ ಬಿತ್ತರ ಮಾಡುತ್ತಾರೆ ಮತ್ತು ಒಂದು ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಆ ಮಗುವಿಗೂ ಒಂದು ಅವಕಾಶ ನೀಡಿ. ಸತ್ಯ ಹೊರಬರಲಿ. ಮಗುವಿನ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ನಮ್ಮ ಕರ್ತವ್ಯ’ ಎಂದಿದ್ದಾರೆ ಸುನೀಲ್​ ಶೆಟ್ಟಿ.

ಈ ಬಗ್ಗೆ ಸಾಕಷ್ಟು ಜನರು ಆಕ್ರೋಶ ಹೊರಹಾಕಿದ್ದಾರೆ. ‘ಪಾರ್ಟಿ ಮಾಡುವಲ್ಲಿ ಡ್ರಗ್​ ಸಿಕ್ಕಿತ್ತು. ಈಗ ಎನ್​ಸಿಬಿ ಆರ್ಯನ್​​ರನ್ನು ಬಂಧಿಸಿದೆ. ಹೀಗಿರುವಾಗ ಅವರಿಗೆ ಮಗು ಎನ್ನುವುದರಲ್ಲಿ ಅರ್ಥವಿಲ್ಲ. ಸ್ಟಾರ್​ ನಟನ ಮಗ ಎಂಬ ಕಾರಣಕ್ಕೆ ಈ ರೀತಿ ಹೇಳಬಾರದು’ ಎಂದು ಕೆಲವರು ಸುನೀಲ್​ ಶೆಟ್ಟಿಗೆ ಬುದ್ಧಿವಾದ ಹೇಳಿದ್ದಾರೆ.

ಇದನ್ನೂ ಓದಿ: ಡ್ರಗ್ಸ್​ ಕೇಸ್​: ಎನ್​ಸಿಬಿ ಕಚೇರಿಯಲ್ಲಿ ಗಪ್​ಚುಪ್​ ಆಗಿ ಕುಳಿತ ಶಾರುಖ್​ ಪುತ್ರ ಆರ್ಯನ್​ ಖಾನ್​; ಇಲ್ಲಿದೆ ವಿಡಿಯೋ