90ರ ದಶಕದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು ನಟ ಗೋವಿಂದ. ಬಾಲಿವುಡ್ನಲ್ಲಿ ಅವರ ಕಾಮಿಡಿ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಆ ಮೂಲಕ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತು. ಅದಕ್ಕೆ ತಕ್ಕಂತೆ ಫ್ಯಾನ್ ಫಾಲೋಯಿಂಗ್ ಕೂಡ ಬೆಳೆಯಿತು. ಅಪಾರ ಅಭಿಮಾನಿಗಳನ್ನು ಗೋವಿಂದ ಹೊಂದಿದ್ದಾರೆ. ಆ ಕುರಿತು ಒಂದು ಇಂಟರೆಸ್ಟಿಂಗ್ ವಿಚಾರವನ್ನು ಗೋವಿಂದ ಪತ್ನಿ ಸುನಿತಾ ಅಹುಜಾ ಅವರು ಹಂಚಿಕೊಂಡಿದ್ದಾರೆ. ಮಂತ್ರಿಯ ಮಗಳೊಬ್ಬಳು ಗೋವಿಂದ ಸಲುವಾಗಿ ಮನೆಕೆಲಸದವಳ ರೀತಿ ನಾಟಕ ಮಾಡಿದ್ದಳು ಎಂಬುದನ್ನು ಸುನಿತಾ ಅಹುಜಾ ತಿಳಿದಿದ್ದಾರೆ.
‘ಟೌಮ್ಓಟ್ ವಿತ್ ಅಂಕಿತ್’ ಪಾಡ್ಕಾಸ್ಟ್ಗೆ ನೀಡಿದ ಸಂದರ್ಶನದಲ್ಲಿ ಸುನಿತಾ ಅಹುಜಾ ಅವರು ಈ ವಿಚಾರನ್ನು ನೆನಪಿಸಿಕೊಂಡಿದ್ದಾರೆ. ಅದು ಬಹಳ ಹಿಂದಿನ ಘಟನೆ. ‘ಮನೆ ಕೆಲಸದವಳು ಅಂತ ಹೇಳಿಕೊಂಡು ಓರ್ವ ಹುಡುಗಿ ಬಂದಿದ್ದಳು. ಆಕೆ ಗೋವಿಂದ ಫ್ಯಾನ್ ಎಂಬುದು ನಮಗೆ ಗೊತ್ತಿರಲಿಲ್ಲ. ಆಕೆ ಕೆಲಸದವಳ ರೀತಿ ಕಾಣುತ್ತಿರಲಿಲ್ಲ. ಆಕೆಗೆ ಅಡುಗೆ ಮಾಡಲು ಕೂಡ ಬರುತ್ತಿರಲಿಲ್ಲ. ಅದರ ಬಗ್ಗೆ ನಾನು ನಮ್ಮ ಅತ್ತೆಯ ಬಳಿ ಹೇಳಿದೆ. ಅವಳ ಬಗ್ಗೆ ವಿಚಾರಿಸಿದಾಗ ನಿಜವಾದ ವಿಚಾರ ತಿಳಿಯಿತು. ಆಕೆ ಮಂತ್ರಿಯ ಮಗಳಾಗಿದ್ದಳು’ ಎಂದಿದ್ದಾರೆ ಸುನಿತಾ ಅಹುಜಾ.
‘ಗೋವಿಂದ ಮೇಲಿನ ಅಭಿಮಾನಕ್ಕಾಗಿ ಆ ಹುಡುಗಿಯು ಮನೆ ಕೆಲಸದವಳು ಅಂತ ಸುಳ್ಳು ಹೇಳಿಕೊಂಡು ನಮ್ಮ ಮನೆಯಲ್ಲಿ 20 ದಿನ ಕೆಲಸಕ್ಕೆ ಇದ್ದಳು. ವಿಷಯ ಬಹಿರಂಗ ಆದಾಗ ಆಕೆ ಅಳಲು ಶುರು ಮಾಡಿದಳು. ತಾನು ಗೋವಿಂದ ಅಭಿಮಾನಿ ಅಂತ ಒಪ್ಪಿಕೊಂಡಳು. ಕೂಡಲೇ ಅವರ ಅಪ್ಪ ಬಂದರು. ಅವರು ಜೊತೆ ನಾಲ್ಕು ಕಾರಿನಲ್ಲಿ ರಾಜಕಾರಣಿಗಳು ಕೂಡ ಬಂದರು. ಗೋವಿಂದಗೆ ಇರುವ ಅಭಿಮಾನಿ ಬಳಗ ಈ ರೀತಿಯದ್ದು. ಆಗ ನನಗೆ ವಯಸ್ಸು ಚಿಕ್ಕದು. ವಿದೇಶ ಪ್ರವಾಸಕ್ಕೆ ಹೋದಾಗ ಅಲ್ಲಿ ಮಹಿಳಾ ಅಭಿಮಾನಿಗಳು ಗೋವಿಂದ ಅವರನ್ನು ನೋಡಿ ಕುಸಿದು ಬೀಳುತ್ತಿದ್ದರು’ ಎಂದು ಆ ದಿನಗಳನ್ನು ಸುನಿತಾ ಅಹುಜಾ ಅವರು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ನಾನು ಟಾಯ್ಲೆಟ್ ಕ್ಲೀನ್ ಮಾಡಬೇಕಾ? ಸ್ಟಾರ್ ನಟನ ಪತ್ನಿಯ ತಿರುಗೇಟು
ಬಾಲಿವುಡ್ನಲ್ಲಿ ಬಹುಬೇಡಿಕೆಯ ಹೀರೋ ಆಗಿ ಗೋವಿಂದ ಮಿಂಚಿದರು. ‘ಕೂಲಿ ನಂ.1’, ‘ರಾಜಾ ಬಾಬು’, ‘ಬಡೇ ಮಿಯಾ ಚೋಟೆ ಮಿಯಾ’, ‘ಅನಾರಿ ನಂಬರ್ 1’, ‘ಪಾರ್ಟ್ನರ್’, ‘ಲೈಫ್ ಪಾರ್ಟ್ನರ್’, ‘ಜೋಡಿ ನಂ.1’ ಮುಂತಾದ ಸಿನಿಮಾಗಳಲ್ಲಿ ಗೋವಿಂದ ಅವರು ನಟಿಸಿದ್ದಾರೆ. ಇತ್ತೀಚೆಗೆ ಸುನಿತಾ ನೀಡಿದ ಸಂದರ್ಶನದಲ್ಲಿ ಬಿಗ್ ಬಾಸ್ ಬಗ್ಗೆ ಕೂಡ ಪ್ರಸ್ತಾಪ ಆಯಿತು. ಆ ಶೋಗೆ ತಾವು ಸ್ಪರ್ಧಿಯಾಗಿ ಹೋಗುವುದಿಲ್ಲ, ನಿರೂಪಕಿಯಾಗಿ ಬೇಕಿದ್ದರೆ ಹೋಗುವುದಾಗಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.