ಸಂಜಯ್ ಕಪೂರ್ ಸತ್ತ ಮೇಲೆ ಆಸ್ತಿ ವಿವಾದ; ನಮಗೂ ಪಾಲು ಕೊಡಿ ಎಂದು ಕೋರ್ಟ್​ಗೆ ಹೋದ ಕರೀಶ್ಮಾ ಮಕ್ಕಳು

ಸಂಜಯ್ ಕಪೂರ್ ಅವರ ನಿಧನದ ನಂತರ ಅವರ 30,000 ಕೋಟಿ ರೂಪಾಯಿ ಆಸ್ತಿಯ ಮೇಲೆ ವಿವಾದ ಉದ್ಭವಿಸಿದೆ. ಮಾಜಿ ಪತ್ನಿ ಕರೀಶ್ಮಾ ಕಪೂರ್ ಅವರ ಮಕ್ಕಳು ತಮ್ಮ ಪಾಲಿನ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಜಯ್ ಕಪೂರ್ ಅವರ ವಿಲ್ ನಕಲಿ ಎಂದು ಕರೀಶ್ಮಾ ಆರೋಪಿಸಿದ್ದಾರೆ.

ಸಂಜಯ್ ಕಪೂರ್ ಸತ್ತ ಮೇಲೆ ಆಸ್ತಿ ವಿವಾದ; ನಮಗೂ ಪಾಲು ಕೊಡಿ ಎಂದು ಕೋರ್ಟ್​ಗೆ ಹೋದ ಕರೀಶ್ಮಾ ಮಕ್ಕಳು
ಸಂಜಯ್ ಕಪೂರ್
Updated By: ರಾಜೇಶ್ ದುಗ್ಗುಮನೆ

Updated on: Sep 10, 2025 | 9:35 AM

ಸಂಜಯ್ ಕಪೂರ್ (Sanjay Kapoor) ಅವರು ಇತ್ತೀಚೆಗೆ ನಿಧನ ಹೊಂದಿದರು. ಲಂಡನ್​ನಲ್ಲಿ ಪೊಲೋ ಆಟ ಆಡುವಾಗ ಹೃದಯಾಘಾತ ಆಯಿತು. ಜೇನು ನೊಣ ನುಂಗಿದ್ದು ಅವರ ಸಾವಿಗೆ ಕಾರಣ ಎಂದೆಲ್ಲ ವರದಿಗಳಾದರೂ ಅದು ಸುಳ್ಳು ಎಂಬುದು ಆ ಬಳಿಕ ಗೊತ್ತಾಯಿತು. ಹೃದಯಾಘಾತವೇ ಅವರ ಸಾವಿಗೆ ಕಾರಣ ಆಗಿದೆ. ಈಗ ಸಂಜಯ್ ಕಪೂರ್ ಅವರ ಆಸ್ತಿಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಮಾಜಿ ನಟಿ ಕರೀಶ್ಮಾ ಕಪೂರ್ ಮತ್ತು ಸಂಜಯ್ ವಿವಾಹ ಆಗಿ ವಿಚ್ಛೇದನ ಪಡೆದಿದ್ದರು. ಈಗ ಕರೀಶ್ಮಾ ಮಕ್ಕಳು ಈಗ ಸಂಜಯ್ ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಳಿದ್ದಾರೆ. ಇದಕ್ಕಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ.

ಸಂಜಯ್  ಕಪೂರ್ ವಿಲ್ ಬರೆದಿಟ್ಟಿದ್ದರು ಎನ್ನಲಾಗಿದೆ. ಈ ವಿಲ್​ ಫೇಕ್ ಎಂಬುದು ಕರೀಶ್ಮಾ ಆರೋಪ. ಈ ಕಾರಣದಿಂದಲೇ ಚಿಕ್ಕ ಮಕ್ಕಳನ್ನು ಮುಂದೆ ಬಿಟ್ಟು ಕೋರ್ಟ್​ನಲ್ಲಿ ಕೇಸ್ ಹಾಕಿಸಿದ್ದಾರೆ. ‘ನಿಜವಾದ ವಿಲ್​ನ ಅವರು ತೋರಿಸಿಲ್ಲ. ಈಗ ತೋರಿಸಿರುವ ವಿಲ್ ಫೋರ್ಜರಿ ಆಗಿದೆ’ ಎಂದು ಆರೋಪಿಸಲಾಗಿದೆ. ಕರೀಶ್ಮಾ ಕಪೂರ್ ಮಕ್ಕಳು ಕೋರ್ಟ್​ ಬಳಿ ಒಂದು ಮನವಿ ಮಾಡಿದ್ದಾರೆ. ಸಂಜಯ್ ಕಪೂರ್ ಪತ್ನಿ ಪ್ರಿಯಾ ಸಚ್​​ದೇವ್ ಅವರು ಆಸ್ತಿ ಬಳಕೆ ಮಾಡದಂತೆ ಕೋರಿದ್ದಾರೆ. ಕರೀಶ್ಮಾಗೆ ಇಬ್ಬರು ಮಕ್ಕಳು. ಸಮೀರಾಗೆ 20 ವರ್ಷ ಹಾಗೂ ಕಿಯಾನ್​ಗೆ 12 ವರ್ಷ.

ಸಂಜಯ್ ಕಪೂರ್ ಜೂನ್ 11ರಂದು ನಿಧನ ಹೊಂದದಿರು. ಅವರು 30 ಸಾವಿರ ಕೋಟಿ ರೂಪಾಯಿ ಆಸ್ತಿ. ಈ ಮೊದಲು ಕರೀಶ್ಮಾ ಅವರು ಆಸ್ತಿಯಲ್ಲಿ ಪಾಲು ಪಡೆಯಲು ಮಾರ್ಗ ಹುಡುಕುತ್ತಿದ್ದಾರೆ ಎಂದು ವರದಿ ಆಗಿತ್ತು. ಇನ್ನು, ಸಂಜಯ್ ಮೂರನೇ ಪತ್ನಿ ಪ್ರಿಯಾ ಸಚ್​ದೇವ್ ಕೂಡ ಆಸ್ತಿ ಎಲ್ಲ ತಮ್ಮದೇ ಎನ್ನುತ್ತಿದ್ದಾರೆ.

ಇದನ್ನೂ ಓದಿ
Video: ‘ತಡ ಮಾಡದೇ ಮಗು ಮಾಡಿಕೊಳ್ಳಿ’ ಎಂದು ಸಲಹೆ; ಓಕೆ ಎಂದ ಅನುಶ್ರೀ
ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್​​ಗೆ ಪಾಠ ಮಾಡಿದ ನೆಟ್ಟಿಗರು
‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್
ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದವರಿಗೆ ಉತ್ತರಿಸಿದ ನಟಿ

ಇದನ್ನೂ ಓದಿ: ಸಂಜಯ್ ಕಪೂರ್  ಆಸ್ತಿ ಮೇಲೆ ಮೂವರು ಪತ್ನಿಯರ ಕಣ್ಣು

ಸಂಜಯ್ ಕಪೂರ್ ಸಹೋದರಿ ಮಂದಿರಾ ಕಪೂರ್ ಅವರು ಒಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಿಯಾ ಸಚ್​ದೇವ್ ಅವರು ತಮ್ಮ ತಾಯಿ ಬಳಿ ಒತ್ತಾಯ ಪೂರ್ವಕವಾಗಿ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರ ಕೂಡ ಚರ್ಚೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.