AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್ ಕಪೂರ್ 10 ಸಾವಿರ ಕೋಟಿ ಆಸ್ತಿ ಮೇಲೆ ಮೂವರು ಪತ್ನಿಯರ ಕಣ್ಣು

ಸಂಜಯ್ ಕಪೂರ್ ಅವರ ಅಕಾಲಿಕ ನಿಧನದ ನಂತರ, ಅವರ 10,300 ಕೋಟಿ ರೂ. ಆಸ್ತಿಯ ಹಂಚಿಕೆಯ ವಿವಾದ ಭುಗಿಲೆದ್ದಿದೆ. ಕರಿಷ್ಮಾ ಕಪೂರ್ ಸೇರಿದಂತೆ ಅವರ ಮೂವರು ಪತ್ನಿಯರು ತಮ್ಮ ಹಕ್ಕುಗಳನ್ನು ಒತ್ತಾಯಿಸುತ್ತಿದ್ದಾರೆ. ಕರಿಷ್ಮಾ ಅವರು ತಮ್ಮ ಮಕ್ಕಳ ಪರವಾಗಿ ಆಸ್ತಿಯಲ್ಲಿ ಪಾಲು ಪಡೆಯಲು ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವಿವಾದದಿಂದ ಸಂಜಯ್ ಕಪೂರ್ ಅವರ ಕುಟುಂಬದಲ್ಲಿ ಭಾರಿ ಅಶಾಂತಿ ಉಂಟಾಗಿದೆ.

ಸಂಜಯ್ ಕಪೂರ್ 10 ಸಾವಿರ ಕೋಟಿ ಆಸ್ತಿ ಮೇಲೆ ಮೂವರು ಪತ್ನಿಯರ ಕಣ್ಣು
ಸಂಜಯ್-ಕರಿಷ್ಮಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 02, 2025 | 8:07 AM

Share

ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ (Sunjay Kapur) ಕಳೆದ ತಿಂಗಳು ಪೋಲೋ ಆಡುವಾಗ ಹೃದಯಾಘಾತದಿಂದ ನಿಧನರಾದರು.  ಅವರು ಜೇನು ನೊಣ ನುಂಗಿದ್ದರಿಂದ ಈ ರೀತಿ ಆಯಿತು ಎನ್ನಲಾಗಿದೆ. ಅವರಿಗೆ 53ನೇ ವಯಸ್ಸಾಗಿತ್ತು. ಸಂಜಯ್ ಅವರ ಮರಣದ ನಂತರ, ಅವರ ತಾಯಿ ಅನುಮಾನ ವ್ಯಕ್ತಪಡಿಸಿದರು. ಈಗ, ಸಂಜಯ್ ಕಪೂರ್ ಅವರ ಮರಣದ ನಂತರ, ಅವರ ಸಂಪತ್ತಿನ ಬಗ್ಗೆ ದೊಡ್ಡ ವಿವಾದವೊಂದು ಉದ್ಭವಿಸಿದೆ. ಸಂಜಯ್ ಕಪೂರ್ ಅವರ 10,300 ಸಾವಿರ ಕೋಟಿ ಸಂಪತ್ತಿನ ಮಾಲೀಕತ್ವವನ್ನು ಯಾರು ಪಡೆಯುತ್ತಾರೆ ಎಂಬ ವಿವಾದ ನಡೆಯುತ್ತಿರುವಾಗ, ಅವರ ಮೂವರು ಪತ್ನಿಯರು ಇದಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸಂಜಯ್ ಕಪೂರ್ ಪತ್ನಿ ಪ್ರಿಯಾ ಸಚ್‌ದೇವ್ ಈಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಹೆಸರನ್ನು ಪ್ರಿಯಾ ಸಚ್‌ದೇವ್ ಕಪೂರ್‌ನಿಂದ ಪ್ರಿಯಾ ಸಂಜಯ್ ಕಪೂರ್ ಎಂದು ಬದಲಾಯಿಸಿಕೊಂಡಿದ್ದಾರೆ. ಸಂಜಯ್ ಕಪೂರ್ ಅವರ ಮೊದಲ ಪತ್ನಿ ನಂದಿತಾ ಮಹತಾನಿ ಕೂಡ ಆಸ್ತಿ ವಿವಾದಕ್ಕೆ ಧುಮುಕಿದ್ದಾರೆ. ಅಷ್ಟೇ ಅಲ್ಲ, ಸಂಜಯ್ ಕಪೂರ್ ಅವರ ಎರಡನೇ ಪತ್ನಿ ಮತ್ತು ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಕೂಡ ಆಸ್ತಿ ವಿವಾದದಲ್ಲಿ ಸಿಲುಕಿ ತಮ್ಮ ಇಬ್ಬರು ಮಕ್ಕಳೊಂದಿಗೆ ದೆಹಲಿಗೆ ತೆರಳಿದ್ದಾರೆ.

ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಬಯೋದಲ್ಲಿ, ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಸೋನಾ ಕಾಮ್‌ಸ್ಟಾರ್ ಎಂದು ಉಲ್ಲೇಖಿಸಿದ್ದಾರೆ. ಅವರು ಸ್ಪಷ್ಟವಾಗಿ ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಮೂವರು ಪತ್ನಿಯರು ಸಂಜಯ್ ಕಪೂರ್ ಅವರ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಏತನ್ಮಧ್ಯೆ, ಸಂಜಯ್ ಕಪೂರ್ ಅವರ ತಾಯಿ ಕೂಡ ದೊಡ್ಡ ಆರೋಪ ಮಾಡಿದ್ದರು. ಇದು ಸಹಜ ಸಾವಲ್ಲ ಕೊಲೆ ಎಂದಿದ್ದರು.

ಇದನ್ನೂ ಓದಿ
Image
ಸಮಂತಾ ಕೈಯಲ್ಲಿ ಹೊಸ ಉಂಗುರ; ಹುಟ್ಟಿತು ನಿಶ್ಚಿತಾರ್ಥದ ಚರ್ಚೆ
Image
‘ಕೊತ್ತಲವಾಡಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?
Image
ಗಂಟೆಗೆ 11 ಸಾವಿರ ಟಿಕೆಟ್ ಮಾರಿದ ಸು ಫ್ರಮ್ ಸೋ; ಶುಕ್ರವಾರ ದಾಖಲೆ ಕಲೆಕ್ಷನ್
Image
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಇದನ್ನೂ ಓದಿ: ವಾರ ಕಳೆದರೂ ಪೂರ್ಣಗೊಂಡಿಲ್ಲ ಸಂಜಯ್ ಕಪೂರ್ ಅಂತ್ಯ ಸಂಸ್ಕಾರ

ಸಂಜಯ್ ಕಪೂರ್ ನಿಧನದ ನಂತರ ಕರಿಷ್ಮಾ ಕಪೂರ್ ಆಸ್ತಿಗಾಗಿ ಪಟ್ಟುಹಿಡಿದಿದ್ದಾರೆ ಎಂದು ತಿಳಿದುಬಂದಿದೆ  ಕರಿಷ್ಮಾ ಕಪೂರ್ ಆಸ್ತಿಯಲ್ಲಿ ನನಗಲ್ಲ ಆದರೆ ನನ್ನ ಮಕ್ಕಳಿಗೆ ಹಕ್ಕು ಇರಬೇಕೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ವಿಚ್ಛೇದನ ಪಡೆದಾಗ, ಸಂಜಯ್ ಕರಿಷ್ಮಾಗೆ ಜೀವನಾಂಶವಾಗಿ ದೊಡ್ಡ ಮೊತ್ತವನ್ನು ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.