ಹಿರಿಯ ನಟ ಧರ್ಮೇಂದ್ರಗೆ ಅನಾರೋಗ್ಯ; ತಂದೆಗೆ ಚಿಕಿತ್ಸೆ ಕೊಡಿಸಲು ಅಮೆರಿಕ ತೆರಳಿದ ಸನ್ನಿ ಡಿಯೋಲ್

ಧರ್ಮೇಂದ್ರ ಅವರಿಗೆ ಈಗ 87 ವರ್ಷ ವಯಸ್ಸು. ಸೂಪರ್ ಸ್ಟಾರ್ ಆಗಿ ಮೆರೆದ ಅವರಿಗೆ ವಯೋ ಸಹಜ ಕಾಯಿಲೆಗಳು ಕಾಣಿಸುತ್ತಿವೆ. ಇದಕ್ಕೆ ತುರ್ತಾಗಿ ಚಿಕಿತ್ಸೆ ಕೊಡಿಸಲೇಬೇಕಿದೆ. ಈ ಕಾರಣದಿಂದ ಅವರು ತಂದೆಯ ಜೊತೆ ಅಮೆರಿಕಕ್ಕೆ ತೆರಳಿದ್ದಾರೆ.

ಹಿರಿಯ ನಟ ಧರ್ಮೇಂದ್ರಗೆ ಅನಾರೋಗ್ಯ; ತಂದೆಗೆ ಚಿಕಿತ್ಸೆ ಕೊಡಿಸಲು ಅಮೆರಿಕ ತೆರಳಿದ ಸನ್ನಿ ಡಿಯೋಲ್
ಸನ್ನಿ ಡಿಯೋಲ್-ಧರ್ಮೇಂದ್ರ
Follow us
ರಾಜೇಶ್ ದುಗ್ಗುಮನೆ
|

Updated on: Sep 12, 2023 | 2:21 PM

ನಟ ಸನ್ನಿ ಡಿಯೋಲ್ (Sunny Deol) ಅವರು ‘ಗದರ್ 2’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸಿನಿಮಾ ರಿಲೀಸ್ ಆಗಿ ಒಳ್ಳೆಯ ಕಲೆಕ್ಷನ್ ಮಾಡಿದ ಬಳಿಕವೂ ಅವರು ಅನೇಕ ಕಡೆಗಳಲ್ಲಿ ತೆರಳಿ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದರು. ಸಿನಿಮಾ ಸಕ್ಸಸ್ ಆದ ಬಳಿಕ ವಿವಿಧ ಕಡೆಗಳಲ್ಲಿ ತೆರಳಿ ಪ್ರಚಾರ ಮಾಡುವವರು ತುಂಬಾನೇ ಕಡಿಮೆ ಎನ್ನಬಹುದು. ಈ ಕಾರಣಕ್ಕೆ ಸನ್ನಿ ಅವರನ್ನು ಅನೇಕರು ಶ್ಲಾಘಿಸಿದ್ದರು. ಈಗ ಅವರು ತುರ್ತಾಗಿ ಅಮೆರಿಕಕ್ಕೆ ಹಾರಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ತಂದೆ ಧರ್ಮೇಂದ್ರ ಅನಾರೋಗ್ಯ.

ಧರ್ಮೇಂದ್ರ ಅವರಿಗೆ ಈಗ 87 ವರ್ಷ ವಯಸ್ಸು. ಸೂಪರ್ ಸ್ಟಾರ್ ಆಗಿ ಮೆರೆದ ಅವರಿಗೆ ವಯೋ ಸಹಜ ಕಾಯಿಲೆಗಳು ಕಾಣಿಸುತ್ತಿವೆ. ಇದಕ್ಕೆ ತುರ್ತಾಗಿ ಚಿಕಿತ್ಸೆ ಕೊಡಿಸಲೇಬೇಕಿದೆ. ಈ ಕಾರಣದಿಂದ ಅವರು ತಂದೆಯ ಜೊತೆ ಅಮೆರಿಕಕ್ಕೆ ತೆರಳಿದ್ದಾರೆ. 20-25 ದಿನ ಅಮೆರಿಕದಲ್ಲೇ ಇದ್ದು ಅವರು ತಂದೆಯ ಆರೈಕೆ ಮಾಡಲಿದ್ದಾರೆ.

ಧರ್ಮೇಂದ್ರ ಅವರು ಬಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹಲವು ವರ್ಷಗಳ ಕಾಲ ಅವರು ಬಾಲಿವುಡ್​ನಲ್ಲಿ ಮೆರೆದಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ರಣವೀರ್ ಸಿಂಗ್ ತಾತನ ಪಾತ್ರ ಮಾಡಿದ್ದಾರೆ. ‘ಡಂಕಿ’ ಚಿತ್ರದಲ್ಲೂ ಪ್ರಮುಖ ಪಾತ್ರ ಒಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಕೆಲಸಗಳನ್ನು ಅವರು ಪೂರ್ಣಗೊಳಿಸಿಕೊಟ್ಟಿದ್ದಾರೆ. ಈ ಕಾರಣದಿಂದಲೇ ಧರ್ಮೇಂದ್ರ ಅವರು ಚಿಕಿತ್ಸೆ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ವಿದೇಶದಲ್ಲಿ ಚಿಕಿತ್ಸೆ ಎಂದಾಗ ಅಭಿಮಾನಿಗಳಲ್ಲಿ ಆತಂಕ ಎದುರಾಗೋದು ಸಹಜ. ಆದರೆ, ಈ ವಿಚಾರದಲ್ಲಿ ಆತಂಕಗೊಳ್ಳೋದು ಬೇಡ ಎನ್ನುತ್ತಿವೆ ಮೂಲಗಳು. ಇದು ಸಾಮಾನ್ಯ ಪರೀಕ್ಷೆ ಆಗಿದ್ದು, ಆ ಬಳಿಕ ಅವರು ಮರಳಲಿದ್ದಾರೆ. ಹೀಗಾಗಿ ಅಭಿಮಾನಿಗಳು ಈ ವಿಚಾರದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ‘ಇದು ನನ್ನ ಜಗತ್ತಲ್ಲ ಅನ್ನೋದು ಅರಿವಾಗಿದೆ’; ರಾಜಕೀಯ ತೊರೆಯುವ ಸೂಚನೆ ಕೊಟ್ಟ ಸನ್ನಿ ಡಿಯೋಲ್

ಸನ್ನಿ ಡಿಯೋಲ್ ಅವರು ಸಂಸದ ಕೂಡ ಹೌದು. ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಅವರು ಎಂಪಿ ಆಗಿದ್ದಾರೆ. ಆದರೆ, ರಾಜಕೀಯ ಅವರಿಗೆ ಸಾಕಾಗಿದೆ. ಹೀಗಾಗಿ, ಮುಂದಿನ ಎಲೆಕ್ಷನ್​ನಲ್ಲಿ ಸ್ಪರ್ಧಿಸದೇ ಇರುವ ನಿರ್ಧಾರಕ್ಕೆ ಅವರು ಬಂದಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಅವರು ಮಾತನಾಡಿದ್ದರು. ‘ಗದರ್ 2’ ಯಶಸ್ಸಿನ ಬಳಿಕ ಅವರು ಮತ್ತಷ್ಟು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ