ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಅವರ ಖಾಸಗಿ ವಿಚಾರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ಬ್ಯಾಡ್ಮಿಂಟನ್ ಆಟಗಾರ ಮಥಾಯಿಸ್ ಬೋ ಜೊತೆ ತಾಪ್ಸಿ ಪನ್ನು ಅವರು ಮದುವೆ ಆಗಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಆದರೆ ಆ ವಿಚಾರವನ್ನು ತಾಪ್ಸಿ ಪನ್ನು ಅವರಾಗಲಿ, ಮಥಾಯಿಸ್ ಬೋ (Mathias Boe) ಅವರಾಗಲಿ ಒಪ್ಪಿಕೊಂಡಿಲ್ಲ. ಮದುವೆ ಬಗ್ಗೆ ಅವರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಅವರ ಶಾದಿ ರಹಸ್ಯ ಈಗ ಬಯಲಾಗಿದೆ. ತಾಪ್ಸಿ ಪನ್ನು ಹಾಗೂ ಮಥಾಯಿಸ್ ಬೋ ಅವರ ಮದುವೆ ವಿಡಿಯೋ ಲೀಕ್ (Taapsee Pannu Wedding Video Leak) ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ತಾಪ್ಸಿ ಪನ್ನು ಅವರು ಮದುಮಗಳಾಗಿ ಸಿಕ್ಕಾಪಟ್ಟೆ ಸಿಂಗಾರ ಮಾಡಿಕೊಂಡಿದ್ದಾರೆ. ಮೈ ತುಂಬ ಆಭರಣ ಧರಿಸಿ ಮಿಂಚಿದ್ದಾರೆ. ಕೆಂಪು ಬಣ್ಣದ ಅವರ ಕಾಸ್ಟ್ಯೂಮ್ ಗಮನ ಸೆಳೆಯುತ್ತಿದೆ. ತಾಪ್ಸಿ ಪತಿ ಮಥಾಯಿಸ್ ಬೋ ಅವರು ಶೇರ್ವಾನಿ ಧರಿಸಿ ಕಂಗೊಳಿಸಿದ್ದಾರೆ. ಆಪ್ತರ ಸಮ್ಮುಖದಲ್ಲಿ ಅವರಿಬ್ಬರ ಮದುವೆ ನಡೆದಿದೆ.
ವರದಿಗಳ ಪ್ರಕಾರ ಮಾರ್ಚ್ 23ರಂದು ತಾಪ್ಸಿ ಪನ್ನು ಹಾಗೂ ಮಥಾಯಿಸ್ ಬೋ ಅವರ ಮದುವೆ ನಡೆದಿದೆ. ಉದಯಪುರದಲ್ಲಿ ನಡೆದ ಸೆಲೆಬ್ರಿಟಿ ವಿವಾಹದಲ್ಲಿ ತಾಪ್ಸಿ ಪನ್ನು ಅವರು ಹಾಡುತ್ತಾ, ಕುಣಿಯುತ್ತಾ ವೇದಿಕೆಗೆ ಬಂದು ಮಥಾಯಿಸ್ ಬೋ ಅವರನ್ನು ತಬ್ಬಿಕೊಂಡಿದ್ದಾರೆ. ಅತಿಥಿಯೊಬ್ಬರ ಮೊಬೈಲ್ನಲ್ಲಿ ಈ ಸಂದರ್ಭದ ವಿಡಿಯೋ ಸೆರೆಯಾಗಿದೆ. ಅದೇ ಈಗ ಸೋರಿಕೆ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Taapse Pannu Wedding Video
byu/PinPitiful inBollyBlindsNGossip
ಹಲವು ವರ್ಷಗಳಿಂದ ತಾಪ್ಸಿ ಪನ್ನು ಮತ್ತು ಮಥಾಯಿಸ್ ಬೋ ಅವರು ಪ್ರೀತಿಸುತ್ತಿದ್ದರು. ಇಬ್ಬರೂ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದು ಕಡಿಮೆ. ಅವರ ವಿವಾಹ ಸಮಾರಂಭಕ್ಕೆ ಕೆಲವೇ ಮಂದಿಗೆ ಆಹ್ವಾನ ನೀಡಲಾಗಿತ್ತು. ಅನುರಾಗ್ ಕಶ್ಯಪ್, ಕನ್ನಿಕಾ ದಿಲೋನ್, ಪವೈಲ್ ಗುಲಾಟಿ ಮುಂತಾದವರು ಈ ಮದುವೆಗೆ ಸಾಕ್ಷಿ ಆಗಿದ್ದಾರೆ. ಒಟ್ಟಿನಲ್ಲಿ ತಾಪ್ಸಿ ಪನ್ನು ಅವರು ತಮ್ಮ ಮದುವೆಯ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರೂ ಕೂಡ ವಿಡಿಯೋ ಲೀಕ್ನಿಂದ ಎಲ್ಲವೂ ಬಯಲಾದಂತೆ ಆಗಿದೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ರಾತ್ರಿ 10 ಗಂಟೆ ನಂತರ ಏನೆಲ್ಲ ಆಗುತ್ತದೆ ಎಂಬುದನ್ನು ವಿವರಿಸಿದ ತಾಪ್ಸಿ ಪನ್ನು
ತಾಪ್ಸಿ ಪನ್ನು ಅವರಿಗೆ ಈಗ 36 ವರ್ಷ ವಯಸ್ಸು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬಹುಭಾಷೆಯಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ‘ಡಂಕಿ’ ‘ತಪ್ಪಡ್’, ‘ಮುಲ್ಕ್’, ‘ಪಿಂಕ್’, ‘ಮಿಷನ್ ಮಂಗಲ್’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಗಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.