‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files Movie) ಬಾಕ್ಸ್ಆಫೀಸ್ನಲ್ಲಿ ಕಮಾಲ್ ಮಾಡುತ್ತಿದೆ. ಈ ಚಿತ್ರ ನೋಡೋಕೆ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಚಿತ್ರಮಂದಿರಕ್ಕೆ ಹೆಜ್ಜೆ ಹಾಕದೆ ಇರುವ ಅನೇಕರು ಈ ಸಿನಿಮಾ ನೋಡೋಕೆ ಥಿಯೇಟರ್ಗೆ ಆಗಮಿಸುತ್ತಿದ್ದಾರೆ. ಹೀಗಾಗಿ, 10ನೇ ದಿನಕ್ಕೆ ಈ ಸಿನಿಮಾದ ಕಲೆಕ್ಷನ್ 167 ಕೋಟಿ ರೂಪಾಯಿ (The Kashmir Files Box Office Collection) ಆಗಿದೆ. ಈ ಮಧ್ಯೆ ಕರ್ನಾಟಕ ಸೇರಿ ಅನೇಕ ರಾಜ್ಯದ ರಾಜಕಾರಣಿಗಳು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಪೈರಸಿ ಕಾಪಿಯನ್ನು ಜನರಿಗೆ ಉಚಿತವಾಗಿ ತೋರಿಸುತ್ತಿದ್ದಾರೆ. ಇದೊಂದು ಅಪರಾಧ ಎಂದು ವಿವೇಕ್ ಅಗ್ನಿಹೋತ್ರಿ (Vivek Agnihotri) ಅಭಿಪ್ರಾಯಪಟ್ಟಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಹೇಳಲಾಗಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಎಮೋಷನಲ್ ಆಗಿ ಚಿತ್ರಮಂದಿರದಿಂದ ಹೊರಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕಾರಣಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ. ಕರ್ನಾಕಟದ ಶಾಸಕರು ಮತ್ತು ಸಚಿವರಿಗೆ ಕೆಲವೇ ದಿನಗಳ ಹಿಂದೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಮಧ್ಯೆ, ಹರಿಯಾಣದ ಶಾಸಕರೊಬ್ಬರು ಪೈರಸಿ ಕಾಪಿಯನ್ನು ಪಾರ್ಕ್ನಲ್ಲಿ ಎಲ್ಇಡಿ ಸ್ಕ್ರೀನ್ ಹಾಕಿ ತೋರಿಸೋಕೆ ಮುಂದಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿವೇಕ್, ‘ಎಚ್ಚರಿಕೆ: ಈ ರೀತಿ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಓಪನ್ ಆಗಿ, ಉಚಿತವಾಗಿ ತೋರಿಸುವುದು ಅಪರಾಧ. ಇದನ್ನು ನಿಲ್ಲಿಸಬೇಕು ಎಂದು ನಾನು ವಿನಂತಿಸುತ್ತೇನೆ. ಜನರು ಹಣಕೊಟ್ಟು ಸಿನಿಮಾ ನೋಡಲಿ’ ಎಂದು ಕೋರಿದ್ದಾರೆ. ಈ ಮೂಲಕ ಪೈರಸಿ ತಡೆಯಲು ಮನವಿ ಮಾಡಿದ್ದಾರೆ.
WARNING:
Showing #TheKashmirFiles like this in open and free is a CRIMINAL OFFENCE. Dear @mlkhattar ji, I’d request you to stop this. Political leaders must respect creative business and true Nationalism and Social service means buying tickets in a legal and peaceful manner. ? pic.twitter.com/b8yGqdrmUh— Vivek Ranjan Agnihotri (@vivekagnihotri) March 20, 2022
ಬಾಕ್ಸ್ ಆಫೀಸ್ನಲ್ಲಿ ಕಮಾಲ್
ಈ ಚಿತ್ರ ಮೊದಲ ದಿನ 3.55 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನ 8.50 ಕೋಟಿ, ಮೂರನೇ ದಿನ 15.10 ಕೋಟಿ, ನಾಲ್ಕನೇ ದಿನ 15.05 ಕೋಟಿ, ಐದನೇ ದಿನ 18 ಕೋಟಿ, ಆರನೇ ದಿನ 19.05 ಕೋಟಿ, ಏಳನೇ ದಿನ 18.05 ಕೋಟಿ, ಎಂಟನೇ ದಿನ 19.15 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರ (ಮಾರ್ಚ್ 19) ಈ ಚಿತ್ರಕ್ಕೆ 24.80 ಕೋಟಿ ರೂಪಾಯಿ ಸಂದಾಯವಾಗಿತ್ತು. ಭಾನುವಾರವೂ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ಈ ಮೂಲಕ ಒಟ್ಟೂ ಕಲೆಕ್ಷನ್ 167.45 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹೇಟ್ ಮಾಡ್ತೀನಿ’: ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ ಆರ್ಜಿವಿ
ಸಲ್ಮಾನ್ ಖಾನ್ ಚಿತ್ರವೂ ಮಾಡಿರದ ಸಾಧನೆ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’; ಬಾಕ್ಸ್ ಆಫೀಸ್ನಲ್ಲಿ ಸುನಾಮಿ
Published On - 6:50 pm, Mon, 21 March 22