ಸಲ್ಮಾನ್​ ಖಾನ್​ ಚಿತ್ರವೂ ಮಾಡಿರದ ಸಾಧನೆ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್​’; ಬಾಕ್ಸ್​ ಆಫೀಸ್​ನಲ್ಲಿ ಸುನಾಮಿ

1990ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆ ಮತ್ತು ಕಾಶ್ಮೀರಿ ಪಂಡಿತರ ಹತ್ಯೆ ಆಧರಿಸಿ ‘ದಿ ಕಾಶ್ಮೀರ್​ ಫೈಲ್ಸ್​’ ತೆರೆಗೆ ಬಂದಿದೆ. ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪ್ರಯತ್ನಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಲ್ಮಾನ್​ ಖಾನ್​ ಚಿತ್ರವೂ ಮಾಡಿರದ ಸಾಧನೆ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್​’; ಬಾಕ್ಸ್​ ಆಫೀಸ್​ನಲ್ಲಿ ಸುನಾಮಿ
ದಿ ಕಾಶ್ಮೀರ್ ಫೈಲ್ಸ್ ಪೋಸ್ಟರ್-ಸಲ್ಮಾನ್​ ಖಾನ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Mar 21, 2022 | 6:15 PM

ಸಲ್ಮಾನ್​ ಖಾನ್ (Salman Khan)​ ನಟನೆಯ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತವೆ. ಸಲ್ಲು ನಟಿಸಿದ ಅನೇಕ ಚಿತ್ರಗಳು 200 ಕೋಟಿ ರೂಪಾಯಿ, 300 ಕೋಟಿ ರೂಪಾಯಿ ಗಳಿಸಿದೆ. ಆದರೆ, ಬಹುತೇಕ ಸ್ಟಾರ್ ನಟರ ಸಿನಿಮಾ ಅಬ್ಬರ ಮೊದಲ ವಾರ ಮಾತ್ರ. ಆ ಬಳಿಕ ಚಿತ್ರದ ಕಲೆಕ್ಷನ್​ ಕುಗ್ಗುತ್ತದೆ. ಮಾರ್ಚ್​ 11ರಂದು ತೆರೆಗೆ ಬಂದ ‘ದಿ ಕಾಶ್ಮೀರ್ ಫೈಲ್ಸ್​’ (The Kashmir Files)ಈ ನಂಬಿಕೆಯನ್ನು ಹುಸಿ ಮಾಡಿದೆ. ಸಿನಿಮಾ ತೆರೆಕಂಡ 10ನೇ ದಿನ ಬರೋಬ್ಬರಿ 26 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಬಾಕ್ಸ್​ ಆಫೀಸ್​ನಲ್ಲಿ (Box Office) ಒಂದು ಸಿನಿಮಾ 10ನೇ ದಿನ ಇಷ್ಟು ದೊಡ್ಡ ಕಲೆಕ್ಷನ್ ಮಾಡಿದ್ದು ಇದೇ ಮೊದಲು ಅನ್ನೋದು ವಿಶೇಷ.

1990ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆ ಮತ್ತು ಕಾಶ್ಮೀರಿ ಪಂಡಿತರ ಹತ್ಯೆ ಆಧರಿಸಿ ‘ದಿ ಕಾಶ್ಮೀರ್​ ಫೈಲ್ಸ್​’ ತೆರೆಗೆ ಬಂದಿದೆ. ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪ್ರಯತ್ನಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ.

ಈ ಚಿತ್ರ ಮೊದಲ ದಿನ 3.55 ಕೋಟಿ ರೂಪಾಯಿ, ಎರಡನೇ ದಿನ 8.50 ಕೋಟಿ, ಮೂರನೇ ದಿನ 15.10 ಕೋಟಿ, ನಾಲ್ಕನೇ ದಿನ 15.05 ಕೋಟಿ, ಐದನೇ ದಿನ 18 ಕೋಟಿ, ಆರನೇ ದಿನ 19.05 ಕೋಟಿ, ಏಳನೇ ದಿನ 18.05 ಕೋಟಿ, ಎಂಟನೇ ದಿನ 19.15 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರ (ಮಾರ್ಚ್​ 19) ಈ ಚಿತ್ರಕ್ಕೆ 24.80 ಕೋಟಿ ರೂಪಾಯಿ ಸಂದಾಯವಾಗಿತ್ತು. ಭಾನುವಾರವೂ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದೆ. ಈ ಮೂಲಕ ಒಟ್ಟೂ ಕಲೆಕ್ಷನ್​ 167.45  ಕೋಟಿ ರೂಪಾಯಿ ಆಗಿದೆ.

ಭಾನುವಾರ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ 26.20 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ 10ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಸಿನಿಮಾ ಎಂಬ ಖ್ಯಾತಿ ‘ದಿ ಕಾಶ್ಮೀರ್​ ಫೈಲ್ಸ್​’ಗೆ ಸಿಕ್ಕಿದೆ. ಯಾವ ಸ್ಟಾರ್ ನಟರ ಸಿನಿಮಾಗಳು ಕೂಡ ಈ ದಾಖಲೆ ಬರೆದಿಲ್ಲ. ಅಕ್ಷಯ್​ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ ಸಿನಿಮಾ ಕಳೆದ ವಾರ ತೆರೆಗೆ ಬಂದಿದೆ. ಈ ಚಿತ್ರ ರಿಲೀಸ್​ ಆಗದೆ ಇದ್ದಿದ್ದರೆ, ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ 10ನೇ ದಿನದ ಕಲೆಕ್ಷನ್​ 30 ಕೋಟಿ ದಾಟುತ್ತಿತ್ತು ಎಂದು ಸಿನಿಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್​​​ನಲ್ಲಿ ತುಂಬ ಸುಳ್ಳುಗಳಿವೆ, 1990ರಲ್ಲಿ ಎನ್​​ಸಿ ಸರ್ಕಾರವಿರಲಿಲ್ಲ: ಒಮರ್​ ಅಬ್ದುಲ್ಲಾ

‘ದಿ ಕಾಶ್ಮೀರ್ ಫೈಲ್ಸ್​ ಚಿತ್ರವನ್ನು ಹೇಟ್​ ಮಾಡ್ತೀನಿ’: ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ ಆರ್​ಜಿವಿ

Published On - 5:05 pm, Mon, 21 March 22