The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ಐಎಂಡಿಬಿ ರೇಟಿಂಗ್​ನಲ್ಲಿ ಧಿಡೀರ್ ಕುಸಿತ; ವಿವೇಕ್ ಅಗ್ನಿಹೋತ್ರಿ ಅಸಮಾಧಾನ

IMDB | Vivek Agnihotri: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಚಿತ್ರದ ಐಎಂಡಿಬಿ ರೇಟಿಂಗ್​ನಲ್ಲಿ ಏಕಾಏಕಿ ಇಳಿಕೆಯಾಗಿದೆ. ವೋಟಿಂಗ್​ನಲ್ಲಿ ಅಸಾಮಾನ್ಯ ಬದಲಾವಣೆ ಕಂಡುಬಂದ ಕಾರಣ ಪರ್ಯಾಯ ಮಾರ್ಗದ ಮೂಲಕ ರೇಟಿಂಗ್ ನೀಡಲಾಗಿದೆ ಎಂದು ಐಎಂಡಿಬಿ ಹೇಳಿಕೊಂಡಿದೆ.

The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ಐಎಂಡಿಬಿ ರೇಟಿಂಗ್​ನಲ್ಲಿ ಧಿಡೀರ್ ಕುಸಿತ; ವಿವೇಕ್ ಅಗ್ನಿಹೋತ್ರಿ ಅಸಮಾಧಾನ
ವಿವೇಕ್ ಅಗ್ನಿಹೋತ್ರಿ (ಎಡ), ‘ದಿ ಕಾಶ್ಮೀರ್ ಫೈಲ್ಸ್’ ಪೋಸ್ಟರ್ (ಬಲ)
Follow us
TV9 Web
| Updated By: shivaprasad.hs

Updated on: Mar 14, 2022 | 4:28 PM

ಮಾರ್ಚ್ 11ರಂದು ತೆರೆ ಕಂಡಿರುವ, ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸದ್ಯ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಿನಿಮಾ ನೋಡಿದ ಜನರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮೊದಲ ದಿನ ಕಡಿಮೆ ಸಂಖ್ಯೆಯ ಸ್ಕ್ರೀನ್​ಗಳನ್ನು ಹೊಂದಿದ್ದ ಚಿತ್ರ ಇದೀಗ 2,000ಕ್ಕೂ ಹೆಚ್ಚು ಪರದೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ಮೂರು ದಿನದಲ್ಲಿ ಚಿತ್ರವು ವಿಶ್ವಾದ್ಯಂತ ಸುಮಾರು 31 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಚಿತ್ರ ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಟಿಕೆಟ್​ಗಳನ್ನು ಬುಕ್ ಮಾಡುವ ವೇದಿಕೆಗಳಾದ ‘ಬುಕ್​ ಮೈ ಶೋ’ ಹಾಗೂ ‘ಪೇಟಿಎಂ’ಗಳಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಲ್ಲದೇ ಚಲನಚಿತ್ರಗಳು ಹಾಗೂ ಸೀರೀಸ್​ಗಳಿಗೆ ರೇಟಿಂಗ್ ನೀಡುವ ‘ಐಎಂಡಿಬಿ’ಯಲ್ಲೂ ಚಿತ್ರವು ಉತ್ತಮ ರೇಟಿಂಗ್ ಪಡೆದಿತ್ತು. ಆದರೆ ಐಎಂಡಿಬಿ ರೇಟಿಂಗ್ (IMDB Rating) ಈಗ ಕುಸಿತವಾಗಿರುವುದು ಚರ್ಚೆಗೆ ಕಾರಣವಾಗಿದೆ.

ಈ ಮೊದಲು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಐಎಂಡಿಬಿಯಲ್ಲಿ ಉತ್ತಮ ರೇಟಿಂಗ್ ಇತ್ತು. ಆದರೆ ಇದೀಗ ರೇಟಿಂಗ್ 8.3/10 ಕ್ಕೆ ಕುಸಿತವಾಗಿದೆ. ಈ ಕುರಿತು ಐಎಂಡಿಬಿ ಮಾಹಿತಿ ನೀಡಿದ್ದು, ‘‘ದಿ ಕಾಶ್ಮೀರ್ ಫೈಲ್ಸ್ ಹೆಸರಿನ ಚಿತ್ರದ ರೇಟಿಂಗ್ ಪ್ರಕ್ರಿಯೆಯಲ್ಲಿ ಅಸಾಮಾನ್ಯ ವೋಟಿಂಗ್ ಪ್ರಕ್ರಿಯೆ ನಡೆದಿದೆ. ಆದ್ದರಿಂದ ಪರ್ಯಾಯ ಮಾರ್ಗಗಳ ಮೂಲಕ ರೇಟಿಂಗ್ ನೀಡಲಾಗಿದೆ’’ ಎಂದಿದೆ. ಆದರೆ ಇದಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಎಂಡಿಬಿ ರೇಟಿಂಗ್ ಕುಸಿತವಾಗಿದ್ದು ಹೇಗೆ ಮತ್ತು ಏಕೆ?

ಐಎಂಡಿಬಿಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಇದುವರೆಗೆ 1,35,000 ಜನರು ವೋಟ್ ಮಾಡಿದ್ದಾರೆ. ಅದರಲ್ಲಿ 94 ಪ್ರತಿಶತ ಜನರು 10ಕ್ಕೆ 10 ರೇಟಿಂಗ್ ನೀಡಿದ್ದಾರೆ. 4 ಪ್ರತಿಶತ ಜನರು 1 ರೇಟಿಂಗ್ ನೀಡಿದ್ದಾರೆ. ಕೆಲವು ದಿನಗಳ ಮೊದಲು ಚಿತ್ರಕ್ಕೆ ಐಎಂಡಿಬಿಯಲ್ಲಿ 10ಕ್ಕೆ 10 ರೇಟಿಂಗ್ ಕೂಡ ಕಂಡುಬಂದಿತ್ತು. ಆದರೆ ಐಎಂಡಿಬಿ ಪರ್ಯಾಯ ಮಾರ್ಗದ ಮೂಲಕ ರೇಟಿಂಗ್ ನೀಡಿದ ಪರಿಣಾಮ 8.3 ಎಂದು ತೋರಿಸುತ್ತಿದೆ. ಹಾಗಾದರೆ ಐಎಂಡಿಬಿ ರೇಟಿಂಗ್ ಕುಸಿತಕ್ಕೆ ಕಾರಣವೇನು?

ಐಎಂಡಿಬಿ ತನ್ನ ರೇಟಿಂಗ್ ಬಗ್ಗೆ ತಿಳಿಸಿರುವಂತೆ ಅದು ಜನರು ವೋಟ್ ಮಾಡಿರುವುದನ್ನು ನೇರವಾಗಿ ತೆಗೆದುಕೊಳ್ಳುವುದಿಲ್ಲ ಬದಲಾಗಿ ಪ್ರತಿ ವೋಟ್​ಗಳಿಗೆ ಅದರದ್ದೇ ಆದ ತೂಕವಿರುತ್ತದೆ. ಅರ್ಥಾತ್ ಪ್ರತಿ ವೋಟ್​ನ ಪ್ರಾಮುಖ್ಯತೆ ಬದಲಾಗಬಹುದು. ಇದನ್ನು ಐಎಂಡಿಬಿ ವ್ಯಾಖ್ಯಾನಿಸುವುದು ಹೀಗೆ. ‘‘ನಾವು ಎಲ್ಲರ ವೋಟ್​ಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಅಂತಿಮ ರೇಟಿಂಗ್ ನೀಡುವಾಗ ಎಲ್ಲರ ವೋಟ್​​ಗಳು ಸಮಾನ ಪರಿಣಾಮವನ್ನು ಹೊಂದಿರುವುದಿಲ್ಲ’’ ಎಂದಿದೆ.

ಒಂದು ವೇಳೆ ವೋಟಿಂಗ್​ನಲ್ಲಿ ಅಕ್ರಮ ನಡೆದಿರುವುದರ ಬಗ್ಗೆ ಅನುಮಾನ ಬಂದರೆ, ಮೇಲೆ ತಿಳಿಸಿದ ವಿಧಾನವನ್ನು ಬಿಟ್ಟು ಬೇರೆ ವಿಧಾನದ ಮೂಲಕ ರೇಟಿಂಗ್ ನೀಡಲಾಗುತ್ತದೆ. ಇದು ಐಎಂಡಿಬಿ ವಿಶ್ವಾಸಾರ್ಹತೆಯನ್ನು ಕಾಪಾಡುವ ಸಲುವಾಗಿ ತೆಗೆದುಕೊಳ್ಳುವ ಕ್ರಮ ಎನ್ನುತ್ತದೆ ಸಂಸ್ಥೆ. ರೇಟಿಂಗ್ ವ್ಯವಸ್ಥೆ ಖಚಿತವಾಗಿರಬೇಕಾದ ಕಾರಣ, ರೇಟಿಂಗ್ ಅಳೆಯುವ ಮತ್ತೊಂದು ವಿಧಾನವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’’ ಎಂದು ಸಂಸ್ಥೆ ಹೇಳಿದೆ.

ಇದರರ್ಥ, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಐಎಂಡಿಬಿ ರೇಟಿಂಗ್​ನಲ್ಲಿ ಅಸಾಮಾನ್ಯ ಪ್ರಕ್ರಿಯೆಗಳು ನಡೆದಿವೆ. ಇದರಿಂದಾಗಿ ಮತ್ತೊಂದು ವಿಧಾನದ ಮೂಲಕ ರೇಟಿಂಗ್ ನೀಡಲಾಗಿದ್ದು, ಅದರ ಅನ್ವಯ 8.3 ರೇಟಿಂಗ್ ‘ದಿ ಕಾಶ್ಮೀರ್ ಫೈಲ್ಸ್’ಗೆ ಲಭ್ಯವಾಗಿದೆ.

‘ದಿ ಕಾಶ್ಮೀರ್ ಫೈಲ್ಸ್’ ಐಎಂಡಿಬಿ ರೇಟಿಂಗ್:

IMDB rating of The Kashmir Files

‘ದಿ ಕಾಶ್ಮೀರ್ ಫೈಲ್ಸ್’ ಐಎಂಡಿಬಿ ರೇಟಿಂಗ್

ಐಎಂಡಿಬಿ ನಿರ್ಧಾರಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ:

ಟ್ವಿಟರ್​ನಲ್ಲಿ ಬಳಕೆದಾರರೊಬ್ಬರು ಐಎಂಡಿಬಿಯು ರೇಟಿಂಗ್ ವಿಧಾನದ ಬಗ್ಗೆ ಬರೆದಿರುವುದನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿವೇಕ್, ಐಎಂಡಿಬಿಯ ಈ ನಿರ್ಧಾರ ಸರಿಯಲ್ಲ ಮತ್ತು ನೈತಿಕವಾಗಿಲ್ಲ ಎಂದಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಟ್ವೀಟ್ ಇಲ್ಲಿದೆ:

ಇದನ್ನೂ ಓದಿ:

Fact Check: ‘ದಿ ಕಾಶ್ಮೀರ್​ ಫೈಲ್ಸ್​’ ನೋಡಿ ಅಡ್ವಾಣಿ ಅತ್ತರು ಅನ್ನೋದು ಸುಳ್ಳು; ಇಲ್ಲಿದೆ ಅಸಲಿ ವಿಷಯ

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ