The Kerala Story: ಸೋಮವಾರದ ಪರೀಕ್ಷೆಯಲ್ಲೂ ‘ದಿ ಕೇರಳ ಸ್ಟೋರಿ’ ಚಿತ್ರ ಪಾಸ್​; 4 ದಿನಕ್ಕೆ 45 ಕೋಟಿ ರೂ. ಕಲೆಕ್ಷನ್​

|

Updated on: May 09, 2023 | 2:46 PM

The Kerala Story Box Office Collection: ಎಲ್ಲ ಸಿನಿಮಾಗಳಿಗೆ ಸೋಮವಾರದ ಕಲೆಕ್ಷನ್​ ತುಂಬ ಮಹತ್ವದ್ದಾಗುತ್ತದೆ. ಈ ವಿಚಾರದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಪಾಸ್​ ಆಗಿದೆ.

The Kerala Story: ಸೋಮವಾರದ ಪರೀಕ್ಷೆಯಲ್ಲೂ ‘ದಿ ಕೇರಳ ಸ್ಟೋರಿ’ ಚಿತ್ರ ಪಾಸ್​; 4 ದಿನಕ್ಕೆ 45 ಕೋಟಿ ರೂ. ಕಲೆಕ್ಷನ್​
ದಿ ಕೇರಳ ಸ್ಟೋರಿ ಸಿನಿಮಾ ಪೋಸ್ಟರ್​
Follow us on

ನಿರೀಕ್ಷೆಯಂತೆಯೇ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಕಲೆಕ್ಷನ್​ ಹೆಚ್ಚುತ್ತಿದೆ. ಬಿಡುಗಡೆಗೂ ಮುನ್ನವೇ ವಿವಾದ ಎಬ್ಬಿಸಿದ್ದರಿಂದ ಸಹಜವಾಗಿಯೇ ಪ್ರೇಕ್ಷಕರ ಗಮನ ಈ ಚಿತ್ರದ ಮೇಲಿತ್ತು. ಮೇ 5ರಂದು ಬಿಡುಗಡೆ ಆದ ಈ ಸಿನಿಮಾ ಈಗ ಸತತ ನಾಲ್ಕು ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಮೊದಲ ದಿನ ಈ ಚಿತ್ರಕ್ಕೆ 8.3 ಕೋಟಿ ರೂಪಾಯಿ ಕಲೆಕ್ಷನ್​ (Box Office Collection) ಆಗಿತ್ತು. ಎರಡನೇ ದಿನ ಕಲೆಕ್ಷನ್​ ಹೆಚ್ಚಾಯಿತು. ಶನಿವಾರ ಈ ಸಿನಿಮಾ ಬರೋಬ್ಬರಿ 11.22 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನವಾದ ಭಾನುವಾರ 16.40 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸದ್ದು ಮಾಡಿತು. ಸೋಮವಾರ ಬಾಕ್ಸ್​ ಆಫೀಸ್​ ಹಣೆಬರಹ ಏನಾಗಬಹುದು ಎಂಬ ಕೌತುಕ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ನಾಲ್ಕನೇ ದಿನವಾದ ಮೇ 8ರಂದು ‘ದಿ ಕೇರಳ ಸ್ಟೋರಿ’ ಸಿನಿಮಾ 10 ಕೋಟಿ ರೂಪಾಯಿ ಗಳಿಸಿದೆ ಎಂಬುದು ವಿಶೇಷ.

ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಸುದೀಪ್ತೋ ಸೇನ್​ ಅವರು ನಿರ್ದೇಶನ ಮಾಡಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್​ ಜಿಹಾದ್​ ಮತ್ತು ಮತಾಂತರದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ವಿವಾದಾತ್ಮಕ ಕಥಾಹಂದರ ಇರುವುದರಿಂದ ಅನೇಕ ಕಡೆಗಳಲ್ಲಿ ಈ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಹಾಗಿದ್ದರೂ ಕೂಡ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ.

ಇದನ್ನೂ ಓದಿ
‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ
The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿರೋದು ನಿಜವೋ ಸುಳ್ಳೋ? ಟ್ವಿಟರ್​ನಲ್ಲಿ ಜೋರಾಗಿದೆ ಚರ್ಚೆ
Adah Sharma: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಗಮನ ಸೆಳೆದ ಅದಾ ಶರ್ಮಾ ನಟನೆ; ಪ್ರೇಕ್ಷಕರಿಂದ ಸಿಕ್ತು ಮೆಚ್ಚುಗೆ
The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

ಶುಕ್ರವಾರ ಬಿಡುಗಡೆಯಾದ ಚಿತ್ರವು ಸೋಮವಾರದ ತನಕ ಒಳ್ಳೆಯ ರೀತಿಯಲ್ಲಿ ಫಾರ್ಮ್​ ಕಾಯ್ದುಕೊಂಡರೆ ಮುಂದಿನ ದಿನಗಳಲ್ಲೂ ಉತ್ತಮ ಕಲೆಕ್ಷನ್​ ಆಗುವುದು ಖಚಿತ. ಹಾಗಾಗಿ ಎಲ್ಲ ಸಿನಿಮಾಗಳಿಗೆ ಸೋಮವಾರದ ಕಲೆಕ್ಷನ್​ ತುಂಬ ಮಹತ್ವದ್ದಾಗುತ್ತದೆ. ಈ ವಿಚಾರದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಪಾಸ್​ ಆಗಿದೆ. 4 ದಿನಕ್ಕೆ ಈ ಸಿನಿಮಾದ ಒಟ್ಟು ಕಲೆಕ್ಷನ್​ 45.72 ಕೋಟಿ ರೂಪಾಯಿ ಆಗಿದೆ. ಮಂಗಳವಾರದ ಕಲೆಕ್ಷನ್​ ಕೂಡ ಸೇರಿದರೆ ಹಾಫ್​ ಸೆಂಚುರಿ ಬಾರಿಸುವುದು ಗ್ಯಾರಂಟಿ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಮಿಂಚಿದ ಅದಾ ಶರ್ಮಾ

ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಚಿತ್ರವನ್ನು ಬ್ಯಾನ್​ ಮಾಡಲಾಗಿದೆ. ಕಾರಣಾಂತರಗಳಿಂದ ತಮಿಳುನಾಡಿನಲ್ಲೂ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ಅಡ್ಡಿ ಉಂಟಾಗಿದೆ. ಹಾಗಿದ್ದರೂ ಕೂಡ ಇನ್ನುಳಿದ ರಾಜ್ಯಗಳಲ್ಲಿ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ಕರ್ನಾಟಕದಲ್ಲಿ ಚುನಾವಣೆಯ​ ಕಾವು ಜೋರಾಗಿದೆ. ಇದರ ನಡುವೆ ದೇಶದೆಲ್ಲೆಡೆ ಐಪಿಎಲ್​ ಕ್ರೇಜ್​ ಹೆಚ್ಚಿದೆ. ಅದರ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಗಮನ ಸೆಳೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.