ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ‘ದಿ ವ್ಯಾಕ್ಸಿನ್​ ವಾರ್​’ ಇಲ್ಲ; ಅಚ್ಚರಿ ವಿಷಯ ತಿಳಿಸಿದ ವಿವೇಕ್​ ಅಗ್ನಿಹೋತ್ರಿ

|

Updated on: Sep 13, 2023 | 11:35 AM

ಕಡಿಮೆ ಬಜೆಟ್​ನಲ್ಲಿ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ತಯಾರಾಗಿದೆ. ವಿವೇಕ್​ ಅಗ್ನಿಹೋತ್ರಿ ಅವರೇ ಹೇಳಿಕೊಂಡಂತೆ ಈ ಸಿನಿಮಾಗೆ 10 ಕೋಟಿ ರೂಪಾಯಿ ಖರ್ಚಾಗಿದೆ. ಈ ಚಿತ್ರದಲ್ಲಿ ನಾನಾ ಪಾಟೇಕರ್​, ಸಪ್ತಮಿ ಗೌಡ, ಪಲ್ಲವಿ ಜೋಶಿ, ಅನುಪಮ್​ ಖೇರ್​ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಟ್ರೇಲರ್​ ಬಿಡುಗಡೆ ಆಗಿದ್ದು, ಸಿನಿಪ್ರಿಯರ ಗಮನ ಸೆಳೆದಿದೆ.

ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ‘ದಿ ವ್ಯಾಕ್ಸಿನ್​ ವಾರ್​’ ಇಲ್ಲ; ಅಚ್ಚರಿ ವಿಷಯ ತಿಳಿಸಿದ ವಿವೇಕ್​ ಅಗ್ನಿಹೋತ್ರಿ
‘ದಿ ವ್ಯಾಕ್ಸಿನ್ ವಾರ್​’ ಚಿತ್ರತಂಡ
Follow us on

ಖ್ಯಾತ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ‘ದಿ ಕಾಶ್ಮೀರ್​ ಫೈಲ್ಸ್’ ಸಿನಿಮಾ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು. ಈಗ ಅವರು ‘ದಿ ವ್ಯಾಕ್ಸಿನ್​ ವಾರ್​’ (The Vaccine War) ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರ ಪತ್ನಿ ಪಲ್ಲವಿ ಜೋಶಿ ನಿರ್ಮಾಪಕಿ. ಸೆಪ್ಟೆಂಬರ್​ 28ರಂದು ‘ದಿ ವ್ಯಾಕ್ಸಿನ್​ ವಾರ್’ ಸಿನಿಮಾ ಬಿಡುಗಡೆ ಆಗಲಿದೆ. ಅಚ್ಚರಿ ವಿಚಾರ ಏನೆಂದರೆ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರದ ಹೆಸರೇ ಕಾಣಿಸುತ್ತಿಲ್ಲ. ಇದು ವಿವೇಕ್ ಅಗ್ನಿಹೋತ್ರಿ ಅವರಿಗೆ ಬೇಸರ ಮೂಡಿಸಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ಭಾರತವು ಕೊರೊನಾ (Corona) ವೈರಸ್​ಗೆ ಲಸಿಕೆ ಕಂಡುಹಿಡಿದ ಘಟನೆಗಳನ್ನು ಆಧರಿಸಿದ ಈ ಸಿನಿಮಾ ಸಿದ್ಧವಾಗಿದೆ.

‘ಮಾಧ್ಯಮದವರು ಪ್ರಕಟ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ನಮ್ಮ ದಿ ವ್ಯಾಕ್ಸಿನ್ ವಾರ್​ ಚಿತ್ರ ಇಲ್ಲವೇ ಇಲ್ಲ. ನಾವು ಈ ಸಿನಿಮಾ ಮಾಡುತ್ತಿದ್ದೇವೆ ಎಂಬುದು ಕಳೆದ 9 ತಿಂಗಳಿಂದ ಜನರಿಗೆ ಗೊತ್ತು. ಇಂದು ಬೆಳಗ್ಗೆ ಪ್ರಮುಖ ಟ್ರೇಡ್​ ವಿಶ್ಲೇಷಕರೊಬ್ಬರು ಈ ತಿಂಗಳ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ನನಗೆ ಕಳಿಸಿದರು. ಇದೇ 28ರಂದು ತೆರೆಕಾಣಲಿರುವ ಇನ್ನೊಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಲಿದೆ ಎಂದು ಅವರು ಹೇಳುತ್ತಾರೆ’ ಎಂದಿದ್ದಾರೆ ವಿವೇಕ್​ ಅಗ್ನಿಹೋತ್ರಿ.

ಇದನ್ನೂ ಓದಿ: ಮತ್ತೊಂದು ‘ಕಾಶ್ಮೀರ್ ಫೈಲ್ಸ್’ ಜೊತೆ ಬಂದ ವಿವೇಕ್ ಅಗ್ನಿಹೋತ್ರಿ; ಈ ಬಾರಿ ನೇರವಾಗಿ ಒಟಿಟಿಗೆ ಎಂಟ್ರಿ

ದೊಡ್ಡ ಸ್ಟಾರ್​ ಹೀರೋಗಳನ್ನು ಇಟ್ಟುಕೊಂಡು ವಿವೇಕ್​ ಅಗ್ನಿಹೋತ್ರಿ ಸಿನಿಮಾ ಮಾಡಿಲ್ಲ. ಈ ಹಿಂದೆ ಅವರು ನಿರ್ದೇಶಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದಲ್ಲೂ ಟಾಪ್​ ಹೀರೋಗಳು ಇರಲಿಲ್ಲ. ಆರಂಭದಲ್ಲಿ ಆ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ನಂತರದ ದಿನಗಳಲ್ಲಿ ಕಲೆಕ್ಷನ್​ ಹೆಚ್ಚಾಯಿತು. ಭಾರತದ ಬಾಕ್ಸ್​ ಆಫೀಸ್​ನಲ್ಲಿ 252 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವಲ್ಲಿ ಆ ಸಿನಿಮಾ ಯಶಸ್ವಿ ಆಗಿತ್ತು. ಈಗ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಕಲೆಕ್ಷನ್​ ಎಷ್ಟಾಗಲಿದೆ ಎಂಬ ಕೌತುಕ ಮೂಡಿದೆ.

ಇದನ್ನೂ ಓದಿ: ‘ಕೊರೊನಾ ವ್ಯಾಕ್ಸಿನ್​ ಪಡೆದ ಬಳಿಕ 1 ಕಿ.ಮೀ. ನಡೆಯೋಕೂ ಆಗ್ತಿಲ್ಲ, ಎದೆನೋವು ಬರ್ತಿದೆ’: ಆತಂಕದಲ್ಲಿ ಟ್ವೀಟ್​ ಮಾಡಿದ ಕೆಆರ್​ಕೆ

ಕಡಿಮೆ ಬಜೆಟ್​ನಲ್ಲಿ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ತಯಾರಾಗಿದೆ. ವಿವೇಕ್​ ಅಗ್ನಿಹೋತ್ರಿ ಅವರೇ ಹೇಳಿಕೊಂಡಂತೆ ಈ ಸಿನಿಮಾಗೆ 10 ಕೋಟಿ ರೂಪಾಯಿ ಖರ್ಚಾಗಿದೆ. ಈ ಚಿತ್ರದಲ್ಲಿ ನಾನಾ ಪಾಟೇಕರ್​, ಸಪ್ತಮಿ ಗೌಡ, ಪಲ್ಲವಿ ಜೋಶಿ, ಅನುಪಮ್​ ಖೇರ್​ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಟ್ರೇಲರ್​ ಬಿಡುಗಡೆ ಆಗಿದ್ದು, ಸಿನಿಪ್ರಿಯರ ಗಮನ ಸೆಳೆದಿದೆ. ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಜೊತೆ ಕಂಗನಾ ರಣಾವತ್​ ನಟನೆಯ ‘ಚಂದ್ರಮುಖಿ 2’ ಸಿನಿಮಾ ಪೈಪೋಟಿ ನೀಡಲಿದೆ. ಆ ಚಿತ್ರ ಕೂಡ ಸೆಪ್ಟೆಂಬರ್​ 28ರಂದು ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.