ಮಗನಿಗೆ ನೋವಾಗದ ರೀತಿಯಲ್ಲಿ ಸಂಸಾರದ ಸಮಸ್ಯೆ ಪರಿಹರಿಸಿಕೊಂಡ ಆಮಿರ್​ ಖಾನ್​-ಕಿರಣ್​ ರಾವ್​

|

Updated on: Feb 27, 2024 | 6:25 PM

ಆಮಿರ್ ಖಾನ್​ ಮತ್ತು ಕಿರಣ್​ ರಾವ್​ ಅವರಿಗೆ ಆಜಾದ್​ ರಾವ್​ ಖಾನ್ ಎಂಬ ಮಗನಿದ್ದಾನೆ. ಆತನಿಗೆ ಈಗ 12 ವರ್ಷ ವಯಸ್ಸು. ಪುತ್ರನ ಮನಸ್ಸಿಗೆ ನೋವು ಆಗಬಾರದು ಎಂಬ ಕಾರಣದಿಂದ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರು ತಮ್ಮ ವಿಚ್ಛೇದನ ವಿಚಾರವನ್ನು ರಂಪಾಟ ಮಾಡಿಲ್ಲ. ‘ಲಾಪತಾ ಲೇಡೀಸ್​’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಈ ಕುರಿತು ಮಾಜಿ ದಂಪತಿ ಮಾತನಾಡಿದ್ದಾರೆ.

ಮಗನಿಗೆ ನೋವಾಗದ ರೀತಿಯಲ್ಲಿ ಸಂಸಾರದ ಸಮಸ್ಯೆ ಪರಿಹರಿಸಿಕೊಂಡ ಆಮಿರ್​ ಖಾನ್​-ಕಿರಣ್​ ರಾವ್​
ಆಜಾದ್​ ರಾವ್​ ಖಾನ್​​, ಆಮಿರ್​ ಖಾನ್​, ಕಿರಣ್​ ರಾವ್​
Follow us on

ನಟ ಆಮಿರ್​ ಖಾನ್​ (Aamir Khan) ಮತ್ತು ನಿರ್ದೇಶಕಿ ಕಿರಣ್​ ರಾವ್​ ಅವರು ವಿಚ್ಛೇದನ ಪಡೆದಾಗ ಅವರ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಯಾಕೆಂದರೆ, ಬಹಳ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದ ಅವರು ಹೀಗೆ ಡಿವೋರ್ಸ್​ ಪಡೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಾಮಾನ್ಯವಾಗಿ ಡಿವೋರ್ಸ್​ ವಿಚಾರ ಬಂದಾಗ ಪತಿ-ಪತ್ನಿ ಸಾಕಷ್ಟು ಕಿತ್ತಾಟ ನಡೆಸುತ್ತಾರೆ. ಪರಸ್ಪರ ಮುಖ ನೋಡಿಕೊಳ್ಳಲಾಗದ ಸ್ಥಿತಿಗೆ ಅವರ ಜಗಳ ತಲುಪುತ್ತದೆ. ಆದರೆ ಕಿರಣ್​ ರಾವ್​ (Kiran Rao) ಮತ್ತು ಆಮಿರ್ ಖಾನ್​ ಅವರು ಆ ರೀತಿ ಕಿತ್ತಾಡಿಲ್ಲ. ಸಂಸಾರದ ಸಮಸ್ಯೆಯನ್ನು ಅವರು ತುಂಬ ಕೂಲ್​ ಆಗಿ ಬಗೆಹರಿಸಿಕೊಂಡಿದ್ದು ಪುತ್ರ ಆಜಾದ್​ ರಾವ್​ ಖಾನ್​ (Azaad Rao Khan) ಸಲುವಾಗಿ!

ದಂಪತಿ ಡಿವೋರ್ಸ್​ ಪಡೆದಾಗ ಅದರಿಂದ ಹೆಚ್ಚು ಸಮಸ್ಯೆ ಆಗುವುದು ಮಕ್ಕಳಿಗೆ. ಅಪ್ಪ-ಅಮ್ಮ ಬೇರಾಗಿದ್ದಕ್ಕೆ ಮಕ್ಕಳಿಗೆ ಏಕಾಏಕಿ ಅನಾಥ ಪ್ರಜ್ಞೆ ಕಾಡುತ್ತದೆ. ಇನ್ನೂ ಆ ವಿಚ್ಛೇದನದ ನಡುವೆ ಜಗಳ ನಡೆದರೆ ಮಕ್ಕಳ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆ ರೀತಿ ಆಗಬಾರದು ಎಂದು ಆಮಿರ್ ಖಾನ್​ ಮತ್ತು ಕಿರಣ್​ ರಾವ್​ ಅವರು ತಮ್ಮ ನಡುವಿನ ಮನಸ್ತಾಪಗಳನ್ನು ಇಟ್ಟುಕೊಂಡು ರಂಪಾಟ ಮಾಡಿಲ್ಲ.

ಇದನ್ನೂ ಓದಿ: ‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು?’: ಮಾಜಿ ಪತ್ನಿಯ ಪ್ರತಿಕ್ರಿಯೆ ಕೇಳಿದ ಆಮಿರ್​ ಖಾನ್​

ವಿಚ್ಛೇದನ ಪಡೆದ ಸಂದರ್ಭದಲ್ಲಿ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಅಚ್ಚರಿ ಏನೆಂದರೆ, ಈಗ ಇಬ್ಬರೂ ಒಟ್ಟೊಟ್ಟಿಗೆ ಮಾಧ್ಯಮಗಳು ಎದುರು ಕುಳಿತು ತಮ್ಮ ಡಿವೋರ್ಸ್​ ವಿಚಾರವನ್ನು ಚರ್ಚೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ‘ಲಾಪತಾ ಲೇಡೀಸ್​’ ಸಿನಿಮಾ. ಮಾರ್ಚ್​ 1ರಂದು ಬಿಡುಗಡೆ ಆಗಲಿರುವ ಈ ಸಿನಿಮಾಗೆ ಕಿರಣ್​ ರಾವ್​ ನಿರ್ದೇಶನ ಮಾಡಿದ್ದಾರೆ. ಆಮಿರ್​ ಖಾನ್​ ಬಂಡವಾಳ ಹೂಡಿದ್ದಾರೆ. ಸಿನಿಮಾದ ಪ್ರಚಾರದಲ್ಲಿ ಇಬ್ಬರೂ ಒಟ್ಟಿಗೆ ಭಾಗಿ ಆಗುತ್ತಿದ್ದಾರೆ.

‘ನಮ್ಮಿಬ್ಬರ ವಿಚ್ಛೇದನದಿಂದ ಮಗನಿಗೆ ಯಾವುದೇ ರೀತಿಯಲ್ಲೂ ನೋವಾಗಬಾರದು ಎಂದು ನಾವು ನಿರ್ಧರಿಸಿದ್ದೆವು. ನಮ್ಮ ಡಿವೋರ್ಸ್​ ಆಗಿದ್ದು ಕೊವಿಡ್​ ಸಂದರ್ಭದಲ್ಲಿ. ಅದರಿಂದ ನಮಗೆ ಸಹಾಯ ಆಯಿತು. ಯಾಕೆಂದರೆ, ತುಂಬ ದಿನಗಳ ಕಾಲ ನಾವು ಒಂದೇ ಮನೆಯಲ್ಲಿ ಇದ್ದೆವು. ಹಾಗಾಗಿ ವಿಚ್ಛೇದನದ ಬಳಿಕವೂ ಹೆಚ್ಚೇನೂ ಬದಲಾವಣೆ ಎನಿಸಲಿಲ್ಲ. ಈಗಲೂ ಒಟ್ಟಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ’ ಎಂದು ಕಿರಣ್​ ರಾವ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.