ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ಗೌರಿ ಖಾನ್​ಗೆ ಶಾರುಖ್ ನೀಡಿದ್ದ ಮೊದಲ ಗಿಫ್ಟ್​ ಏನು?

|

Updated on: Feb 11, 2024 | 7:49 AM

ಗೌರಿ ಖಾನ್​ ಮತ್ತು ಶಾರುಖ್​ ಖಾನ್​ ಅವರದ್ದು ಲವ್​ ಮ್ಯಾರೇಜ್​. ಪ್ರೀತಿಸಿ ಮದುವೆ ಆಗುವಾಗ ಶಾರುಖ್​ ಖಾನ್​ ಇನ್ನೂ ಸ್ಟಾರ್​ ಆಗಿರಲಿಲ್ಲ. ಆ ಸಂದರ್ಭದಲ್ಲಿ ತಾವು ನೀಡಿದ್ದ ಗಿಫ್ಟ್​ ಏನು ಎಂಬುದನ್ನು ಅವರು ಈಗಲೂ ಮರೆತಿಲ್ಲ. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಶಾರುಖ್​ ಖಾನ್​ ಅವರು ಈ ವಿಷಯವನ್ನು ಮೆಲುಕು ಹಾಕಿದ್ದರು. ಈ ಬಗ್ಗೆ ಇಲ್ಲಿದೆ ಮಾಹಿತಿ..

ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ಗೌರಿ ಖಾನ್​ಗೆ ಶಾರುಖ್ ನೀಡಿದ್ದ ಮೊದಲ ಗಿಫ್ಟ್​ ಏನು?
ಶಾರುಖ್​ ಖಾನ್​, ಗೌರಿ ಖಾನ್​
Follow us on

ನಟ ಶಾರುಖ್​ ಖಾನ್​ (Shah Rukh Khan) ಅವರು ಫ್ಯಾಮಿಲಿ ಮ್ಯಾನ್​. ಕುಟುಂಬಕ್ಕೆ ಅವರು ಹೆಚ್ಚು ಸಮಯ ನೀಡುತ್ತಾರೆ. ಅವರ ವೃತ್ತಿಜೀವನಕ್ಕೆ ಪತ್ನಿ ಗೌರಿ ಖಾನ್​ (Gauri Khan) ಬೆಂಬಲವಾಗಿ ನಿಂತಿದ್ದಾರೆ. ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ಅವರದ್ದು ಲವ್​ ಮ್ಯಾರೇಜ್​. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಈಗ ಶಾರುಖ್​ ಖಾನ್​ ಅವರು ಸೂಪರ್​ ಸ್ಟಾರ್​. ಆದರೆ ಮದುವೆ ಆಗುವಾಗ ಅವರು ಅಷ್ಟೆಲ್ಲ ಖ್ಯಾತಿ ಗಳಿಸಿರಲಿಲ್ಲ. ಆ ಸಮಯದಲ್ಲಿ ವ್ಯಾಲೆಂಟೈನ್ಸ್​ ಡೇ (Valentine’s Day) ಪ್ರಯುಕ್ತ ಗೌರಿಗೆ ನೀಡಿದ್ದ ಮೊದಲ ಗಿಫ್ಟ್​ ಏನಿರಬಹುದು ಎಂಬ ಕುತೂಹಲ ಅನೇಕರಿಗೆ ಇದೆ. ಆ ಬಗ್ಗೆ ಸ್ವತಃ ಶಾರುಖ್​ ಖಾನ್​ ನೀಡಿದ ಉತ್ತರ ಇಂಟರೆಸ್ಟಿಂಗ್ ಆಗಿತ್ತು.

ಶಾರುಖ್​ ಖಾನ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಆಗಾಗ ಪ್ರಶ್ನೋತ್ತರ ನಡೆಸುತ್ತಾರೆ. ಆಗ ಅಭಿಮಾನಿಗಳು ಅವರಿಗೆ ಹಲವು ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ. 2023ರಲ್ಲಿ ಇದೇ ರೀತಿ ಪ್ರಶ್ನೋತ್ತರ ನಡೆಸಿದಾಗ ಅಭಿಮಾನಿಯೊಬ್ಬರಿಂದ ಈ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ಗೌರಿ ಮೇಡಂ ಅವರಿಗೆ ನೀವು ನೀಡಿದ ಮೊದಲ ವ್ಯಾಲೆಂಟೈನ್ಸ್​ ಡೇ ಉಡುಗೊರೆ ಏನು’ ಎಂದು ಕೇಳಿದ ಪ್ರಶ್ನೆಗೆ ಶಾರುಖ್​ ಉತ್ತರ ನೀಡಿದ್ದರು.

ಇದನ್ನೂ ಓದಿ: ಶಾರುಖ್​ ಖಾನ್​ ಬಗ್ಗೆ ‘ಅನಿಮಲ್​’ ನಿರ್ದೇಶಕನಿಗೆ ಇರುವ ಅಪಾರ ಗೌರವಕ್ಕೆ ಈ ಮಾತು ಸಾಕ್ಷಿ

‘ನನಗೆ ಸರಿಯಾಗಿ ನೆನಪಿರುವುದಾದರೆ.. ಈಗಾಗಲೇ 34 ವರ್ಷಗಳು ಕಳೆದಿವೆ. ನನಗೆ ಅನಿಸಿದ ಹಾಗೆ, ಒಂದು ಜೊತೆ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಇಯರ್​ ರಿಂಗ್ಸ್​ ನೀಡಿದ್ದೆ’ ಎಂದು ಶಾರುಖ್​ ಖಾನ್​ ಹೇಳಿದ್ದರು. ಅದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದರು. ‘ವಾವ್ ತುಂಬ ಕ್ಯೂಟ್​ ಆಗಿದೆ ಸರ್. ನೀವು ನೀಡಿದ್ದು ಪ್ಲಾಸ್ಟಿಕ್​ ಗಿಫ್ಟ್​ ಆಗಿದ್ದರೂ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈಗ ಬೇಕಿದ್ದರೆ ನೀವು ಡೈಮಂಡ್​ ರಿಂಗ್​ ನೀಡಬಲ್ಲಿರಿ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದರು.

ಶಾರುಖ್​ ಖಾನ್​ ಅವರು ವೃತ್ತಿಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಆ ಎಲ್ಲ ಸಂದರ್ಭಗಳಲ್ಲೂ ಅವರಿಗೆ ಗೌರಿ ಖಾನ್​ ಬೆಂಬಲವಾಗಿ ನಿಂತಿದ್ದಾರೆ. ನಿರ್ಮಾಪಕಿಯಾಗಿ, ಇಂಟೀರಿಯರ್​ ಡಿಸೈನರ್​ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಶಾರುಖ್​ ಖಾನ್​ ಅವರು 2023ರಲ್ಲಿ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದರು. ಅವರು ನಟಿಸಿದ ‘ಜವಾನ್​’, ‘ಪಠಾಣ್​’ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದವು. ‘ಡಂಕಿ’ ಸಿನಿಮಾ ಉತ್ತಮ ವಿಮರ್ಶೆ ಪಡೆದುಕೊಂಡಿತು. ಶಾರುಖ್​ ಮಕ್ಕಳಾದ ಸುಹಾನಾ ಖಾನ್​ ಮತ್ತು ಆರ್ಯನ್​ ಖಾನ್​ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಮಗಳು ನಟನೆಯಲ್ಲಿ ಆಸಕ್ತಿ ಹೊಂದಿದ್ದರೆ, ಪುತ್ರ ಆರ್ಯನ್​ ಖಾನ್​ಗೆ ನಿರ್ದೇಶನದಲ್ಲಿ ಆಸಕ್ತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ