
ನಟ ಸಲ್ಮಾನ್ ಖಾನ್ (Salman Khan) ಅವರು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಆ ಖುಷಿಗೆ ಕಾರಣ ಆಗಿರುವುದು ‘ಟೈಗರ್ 3’ (Tiger 3) ಸಿನಿಮಾದ ಗೆಲುವು. ನವೆಂಬರ್ 12ರಂದು ಬಿಡುಗಡೆ ಆದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ. ಅದರ ಪರಿಣಾಮವಾಗಿ ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಂಡಿದೆ. ಮೊದಲ ಮೂರು ದಿನಗಳ ಕಾಲ ಉತ್ತಮವಾಗಿ ಪ್ರದರ್ಶನ ಕಂಡ ‘ಟೈಗರ್ 3’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ (Tiger 3 Box Office Collection) 150 ಕೋಟಿ ರೂಪಾಯಿಯ ಸನಿಹದಲ್ಲಿದೆ. ಮುಂದಿನ ದಿನಗಳಲ್ಲೂ ಭರ್ಜರಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.
ಸಲ್ಮಾನ್ ಖಾನ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಹಾಗಾಗಿ ಮೊದಲ ದಿನ ‘ಟೈಗರ್ 3’ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಕ್ಕಿತು. ನ.12ರಂದು ಈ ಸಿನಿಮಾ ಮಾಡಿದ್ದು ಬರೋಬ್ಬರಿ 44.50 ಕೋಟಿ ರೂಪಾಯಿ. ನಂತರ ಎರಡನೇ ದಿನ 59 ಕೋಟಿ ರೂಪಾಯಿ ಆದಾಯ ಹರಿದುಬಂತು. ಮೂರನೇ ದಿನ 42.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಈ ಸಿನಿಮಾದ ಒಟ್ಟು ಕಲೆಕ್ಷನ್ ಮೂರೇ ದಿನದಲ್ಲಿ 145 ಕೋಟಿ ರೂಪಾಯಿ ಮೀರಿದೆ. 150 ಕೋಟಿ ರೂಪಾಯಿ ಗಡಿಮುಟ್ಟಲು ‘ಟೈಗರ್ 3’ ಚಿತ್ರ ಸಜ್ಜಾಗಿದೆ.
ಇದನ್ನೂ ಓದಿ: Salman Khan: ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದವರಿಗೆ ಸಲ್ಮಾನ್ ಖಾನ್ ಹೇಳಿದ ಬುದ್ಧಿಮಾತು ಏನು?
ಸಲ್ಮಾನ್ ಖಾನ್, ಕತ್ರಿನಾ ಕೈಫ್, ಶಾರುಖ್ ಖಾನ್, ಇಮ್ರಾನ್ ಹಷ್ಮಿ, ಹೃತಿಕ್ ರೋಷನ್ ಮುಂತಾದವರು ‘ಟೈಗರ್ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಮನೀಶ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಮೂಲಕ ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ. ಬೇರೆ ಬೇರೆ ದೇಶಗಳ ಹಲವು ಲೊಕೇಷನ್ಗಳಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ರಿಚ್ ಆಗಿರುವ ಮೇಕಿಂಗ್ ಕಂಡು ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ಈ ಸಿನಿಮಾದಿಂದ ಸಲ್ಮಾನ್ ಖಾನ್ ಅವರ ಜನಪ್ರಿಯತೆ ಹೆಚ್ಚಾಗಿದೆ.
ಇದನ್ನೂ ಓದಿ: Tiger 3: ಸಲ್ಮಾನ್ ಖಾನ್ ಮೇಲಿನ ಭಯಕ್ಕೆ ಕದ್ದುಮುಚ್ಚಿ ‘ಟೈಗರ್ 3’ ನೋಡಿದ ಅರ್ಜುನ್ ಕಪೂರ್?
‘ಟೈಗರ್ 3’ ಸಿನಿಮಾವನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದಾರೆ. ಮೊದಲ ದಿನ ಚಿತ್ರಮಂದಿರದಲ್ಲಿ ಪಟಾಕಿ ಹೊಡೆದ ಘಟನೆ ಕೂಡ ನಡೆದಿತ್ತು. ಅದನ್ನು ಸಲ್ಮಾನ್ ಖಾನ್ ಅವರು ಖಂಡಿಸಿದ್ದರು. 2023ರಲ್ಲಿ ಬಾಲಿವುಡ್ ಹೀರೋಗಳು ಬಾಕ್ಸ್ ಆಫೀಸ್ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ‘ಜವಾನ್’, ‘ಪಠಾಣ್’ ಚಿತ್ರಗಳು ವಿಶ್ವ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿವೆ. ‘ಟೈಗರ್ 3’ ಕೂಡ ಅದೇ ರೀತಿ ಮೈಲಿಗಲ್ಲು ಸಾಧಿಸಲಿ ಎಂದು ಸಲ್ಮಾನ್ ಖಾನ್ ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.