ಖ್ಯಾತ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಇತ್ತೀಚೆಗಷ್ಟೇ ಗುಡ್ ನ್ಯೂಸ್ ನೀಡಿದ್ದರು. ಮೊದಲ ಮಗುವಿನ ಆಗಮನದಲ್ಲಿ ತಾವು ಇರುವುದಾಗಿ ತಿಳಿಸಿದ್ದರು. ಕಿಯಾರಾ ಅಡ್ವಾಣಿ ಪ್ರೆಗ್ನೆಂಟ್ ಎಂಬ ವಿಷಯ ತಿಳಿಯುತ್ತಿದಂತೆಯೇ ಅಭಿಮಾನಿಗಳು ಸಂಭ್ರಮಿಸಿದರು. ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಈ ನಡುವೆ ಇನ್ನೊಂದು ಸುದ್ದಿ ಕೇಳಿಬರುತ್ತಿದೆ. ಪ್ರೆಗ್ನೆಂಟ್ ಆದ ನಂತರ ಕಿಯಾರಾ ಅಡ್ವಾಣಿ ಅವರಿಗೆ ‘ಡಾನ್ 3’ ಸಿನಿಮಾದ ಅವಕಾಶ ಕೈತಪ್ಪಿದೆ ಎನ್ನಲಾಗಿದೆ.
ಕಿಯಾರಾ ಅಡ್ವಾಣಿ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈಗಾಗಲೇ ಅವರು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಮಹತ್ವದ ಪ್ರಾಜೆಕ್ಟ್ಗಳು ಇವೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೂ ಕಿಯಾರಾ ಅಡ್ವಾಣಿ ನಾಯಕಿ ಆಗಿದ್ದಾರೆ. ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ನಟನೆಯ ‘ವಾರ್ 2’ ಸಿನಿಮಾ ಕೂಡ ಕಿಯಾರಾ ಅಡ್ವಾಣಿ ಕೈಯಲ್ಲಿದೆ. ಆದರೆ ‘ಡಾನ್ 3’ ಚಿತ್ರ ಕೈತಪ್ಪುತ್ತಿದೆ ಎಂಬ ಸುದ್ದಿ ಹರಡಿದೆ.
ಫರ್ಹಾನ್ ಅಖ್ತರ್ ಅವರು ‘ಡಾನ್ 3’ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ರಣವೀರ್ ಸಿಂಗ್ ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಪ್ರೆಗ್ನೆಂಟ್ ಆದ ಬಳಿಕ ಶೂಟಿಂಗ್ನಲ್ಲಿ ಭಾಗಿಯಾಗುವುದು ಕಷ್ಟ ಎಂಬ ಕಾರಣಕ್ಕೆ ಕಿಯಾರಾ ಅಡ್ವಾಣಿ ಅವರು ‘ಡಾನ್ 3’ ಪಾತ್ರವರ್ಗದಿಂದ ಹೊರನಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ.
ಇದನ್ನೂ ಓದಿ: ಸಿದ್ದಾರ್ಥ್-ಕಿಯಾರಾ ಕಡೆಯಿಂದ ಹೊಸ ಸುದ್ದಿ; ದಂಪತಿಯ ಒಟ್ಟೂ ಆಸ್ತಿ ಎಷ್ಟು?
ಕಿಯಾರಾ ಅಡ್ವಾನಿ ಅವರು ‘ಡಾನ್ 3’ ಸಿನಿಮಾ ತಂಡದಿಂದ ಹೊರಗೆ ನಡೆದಿದ್ದರಿಂದ ಈಗ ಬೇರೆ ನಟಿಯ ಆಯ್ಕೆ ಆಗಬೇಕಿದೆ. ಆದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚಿತ್ರತಂಡದವರಾಗಲಿ, ಕಿಯಾರಾ ಅಡ್ವಾಣಿ ಅವರಾಗಲಿ ಏನನ್ನೂ ಹೇಳಿಲ್ಲ. ಚಿತ್ರತಂಡದಿಂದ ಅಧಿಕೃತ ಹೇಳಿಕೆ ಬಂದರಷ್ಟೇ ಖಚಿತ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇದಲ್ಲದೇ ಇನ್ನೂ ಅನೇಕ ಸಿನಿಮಾಗಳಿಗೆ ಕಿಯಾರಾ ಅವರು ನಾಯಕಿ ಆಗಿದ್ದಾರೆ. ಆ ಸಿನಿಮಾಗಳ ಬಗ್ಗೆ ಎಲ್ಲ ಸುದ್ದಿಯೂ ಸದ್ಯಕ್ಕೆ ಅಂತೆ-ಕಂತೆಗಳ ಹಂತದಲ್ಲಿ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.