ಬಾಲಿವುಡ್ ನಟಿ ತೃಪ್ತಿ ದಿಮ್ರಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕಾಗಿ ಅವರು ‘ಅನಿಮಲ್’ ಸಿನಿಮಾಗೆ ಧನ್ಯವಾದ ಹೇಳಲೇಬೇಕು. ಆ ಸಿನಿಮಾದಲ್ಲಿ ಅವರು ಬೋಲ್ಡ್ ಪಾತ್ರ ಮಾಡಿ ಸೈ ಎನಿಸಿಕೊಂಡರು. ಆ ಬಳಿಕ ಅವರಿಗೆ ಸಿಗುವ ಅವಕಾಶಗಳು ಕೂಡ ಜಾಸ್ತಿ ಆದವು. ತೃಪ್ತಿ ದಿಮ್ರಿ ಹವಾ ಎಷ್ಟರಮಟ್ಟಿಗೆ ಇದೆ ಎಂದರೆ, ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅವರು ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಅನೇಕ ಘಟಾನುಘಟಿ ಸೆಲೆಬ್ರಿಟಿಗಳನ್ನು ಕೂಡ ತೃಪ್ತಿ ಹಿಂದಿಕ್ಕಿದ್ದಾರೆ.
2024ರ ವರ್ಷ ಮುಗಿಯುತ್ತಾ ಬಂದಿದೆ. ಈ ವರ್ಷ ಯಾವ ಸೆಲೆಬ್ರಿಟಿಗಳಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದೆ ಎಂಬ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ. ಐಎಂಡಿಬಿ ವೆಬ್ಸೈಟ್ಗೆ ವಿಶ್ವಾದ್ಯಂತ ಮನ್ನಣೆ ಇದೆ. ಸಿನಿಮಾ, ಸೀರಿಯಲ್, ವೆಬ್ ಸಿರೀಸ್, ಡಾಕ್ಯುಮೆಂಟರಿ ಹಾಗೂ ಸೆಲೆಬ್ರಿಟಿಗಳ ಬಗ್ಗೆ ಇದರಲ್ಲಿ ಮಾಹಿತಿ ಸಿಗುತ್ತದೆ. ಈ ವೆಬ್ಸೈಟ್ಗೆ ಭೇಟಿ ನೀಡಿದ ಓದುಗರ ಸಂಖ್ಯೆಯ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬಾಲಿವುಡ್ನಲ್ಲಿ ದೀಪಿಕಾ ಪಡುಕೋಣೆ, ಶಾರುಖ್ ಖಾನ್, ಆಲಿಯಾ ಭಟ್, ಐಶ್ವರ್ಯಾ ರೈ, ಸಲ್ಮಾನ್ ಖಾನ್, ಆಮಿರ್ ಖಾನ್ ಮುಂತಾದವರು ಘಟಾನುಘಟಿಗಳಾಗಿ ಗುರುತಿಸಿಕೊಂಡಿದ್ದಾರೆ. ಅವರೆಲ್ಲರನ್ನೂ ಹಿಂದಿಕ್ಕಿ ತೃಪ್ತಿ ದಿಮ್ರಿ ಅವರು ಟಾಪ್ 10 ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮನ್ನಣೆ ಸಿಕ್ಕಿದ್ದಕ್ಕೆ ಅವರು ಸೋಶಿಯಲ್ ಮೀಡಿಯಾ ಮೂಲಕ ಐಎಂಡಿಬಿಗೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ತೃಪ್ತಿ ದಿಮ್ರಿಗೆ ಖುಲಾಯಿಸಿದ ಅದೃಷ್ಟ, ಸ್ಟಾರ್ ನಟ, ನಿರ್ದೇಶಕನ ಸಿನಿಮಾದಲ್ಲಿ ಅವಕಾಶ
ಐಎಂಡಿಬಿ ಪ್ರಕಟಿಸಿದ 2024ರ ಅತಿ ಹೆಚ್ಚು ಜನಪ್ರಿಯ ಸೆಲೆಬ್ರಿಟಿಗಳ ಟಾಪ್ 10 ಪಟ್ಟಿ:
ಟಾಪ್ 10 ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಯಾವುದೇ ಸೆಲೆಬ್ರಿಟಿಗಳು ಕೂಡ ಸ್ಥಾನ ಪಡೆದಿಲ್ಲ ಎಂಬುದು ಅಚ್ಚರಿಯ ಸಂಗತಿ. ಅಷ್ಟೇ ಅಲ್ಲದೇ, ನಟಿ ರಶ್ಮಿಕಾ ಮಂದಣ್ಣ ಅವರ ಹೆಸರು ಕೂಡ ಪಟ್ಟಿಯಲ್ಲಿ ಇಲ್ಲ. ತೃಪ್ತಿ ದಿಮ್ರಿ ಅವರು ಈ ವರ್ಷ ‘ಬ್ಯಾಡ್ ನ್ಯೂಸ್’, ‘ವಿಕ್ಕಿ ವಿದ್ಯಾ ಕ ವೋ ವಾಲ ವಿಡಿಯೋ’, ‘ಭೂಲ್ ಭುಲಯ್ಯ 3’ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:36 pm, Thu, 5 December 24