‘ಹನುಮಾನ್ ಅಂಶ್’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಣೆ

ನೀಮ್ ಕರೋಲಿ ಬಾಬಾ ಜೀವನ ಆಧರಿತ ಈ ಸಿನಿಮಾ ಈಗಾಗಲೇ ಈ ವರ್ಷದ ಅತಿ ಹೆಚ್ಚು ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ. ಬಿಡುಗಡೆ ಆದಾಗ ಕೆಲ ಶೋಗಳನ್ನು ಧಕ್ಕಿಸಿಕೊಳ್ಳಲು ಕಷ್ಟಪಡುತ್ತಿದ್ದ ಈ ಸಿನಿಮಾ ಇದೀಗ ಭಾರತದ ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲಿಯೂ 50ಕ್ಕೂ ಹೆಚ್ಚು ಶೋಗಳ ಪ್ರದರ್ಶನ ಕಾಣುತ್ತಿದೆ. ವಿದೇಶಗಳಲ್ಲಿಯೂ ರಿಲೀಸ್ ಆಗುತ್ತಿದೆ. ಇದೀಗ ಈ ಸಿನಿಮಾಕ್ಕೆ ಈ ಸಿನಿಮಾ ತೆರಿಗೆ ವಿನಾಯಿತಿಯೂ ಸಹ ದೊರೆತಿದೆ.

‘ಹನುಮಾನ್ ಅಂಶ್’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಣೆ
Uttarakhand

Updated on: Sep 05, 2026 | 8:35 PM

ಮುಖ್ಯಾಂಶಗಳು

  • ಹನುಮಾನ್ ಅಂಶ್, ಭರ್ಜರಿ ಗಳಿಕೆ ಮಾಡುತ್ತಿರುವ ಸಿನಿಮಾ
  • ಹನುಮಾನ್ ಅಂಶ್ ಸಿನಿಮಾಕ್ಕೆ ಈಗ ತೆರಿಗೆ ವಿನಾಯಿತಿ
  • ಉತ್ತರಾಖಂಡ ಸಿಎಂ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

ಹನುಮಾನ್ ಅಂಶ್’ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿರುವ ಹೊಸ ಸಿನಿಮಾ. ಕೇವಲ ಸುಮಾರು 2 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆಗಿರುವ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 80 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ನೀಮ್ ಕರೋಲಿ ಬಾಬಾ ಜೀವನ ಆಧರಿತ ಈ ಸಿನಿಮಾ ಈಗಾಗಲೇ ಈ ವರ್ಷದ ಅತಿ ಹೆಚ್ಚು ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ. ಬಿಡುಗಡೆ ಆದಾಗ ಕೆಲ ಶೋಗಳನ್ನು ಧಕ್ಕಿಸಿಕೊಳ್ಳಲು ಕಷ್ಟಪಡುತ್ತಿದ್ದ ಈ ಸಿನಿಮಾ ಇದೀಗ ಭಾರತದ ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲಿಯೂ 50ಕ್ಕೂ ಹೆಚ್ಚು ಶೋಗಳ ಪ್ರದರ್ಶನ ಕಾಣುತ್ತಿದೆ. ವಿದೇಶಗಳಲ್ಲಿಯೂ ರಿಲೀಸ್ ಆಗುತ್ತಿದೆ. ಇದೀಗ ಈ ಸಿನಿಮಾಕ್ಕೆ ಈ ಸಿನಿಮಾ ತೆರಿಗೆ ವಿನಾಯಿತಿಯೂ ಸಹ ದೊರೆತಿದೆ.

ಈ ಹಿಂದೆ ‘ದಿ ಕಶ್ಮೀರ್ ಫೈಲ್ಸ್’, ‘ಕೇರಳ ಸ್ಟೋರಿ’ ಅಂಥಹಾ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ದೊರೆತಿತ್ತು. ಇದೀಗ ಕರೋಲಿ ಬಾಬಾ ಕುರಿತ ಕತೆಯುಳ್ಳ ‘ಹನುಮಾನ್ ಅಂಶ್’ ಸಿನಿಮಾಕ್ಕೆ ಉತ್ತರಾಖಂಡದಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ. ಉತ್ತರಕಾಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು, ‘‘ಆಧ್ಯಾತ್ಮಿಕ ನಾಯಕ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳ ಆಧಾರಿತವಾದ ‘ಹನುಮಾನ್ ಅಂಶ್’ ಚಲನಚಿತ್ರವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸುವುದಾಗಿ ಘೋಷಿಸಿದ್ದಾರೆ.

‘ಹನುಮಾನ್ ಅಂಶ್’ ಚಲನಚಿತ್ರವನ್ನು ಉತ್ತರಕಾಂಡ ಸಿಎಂ ಧಾಮಿ ಅವರು ಶುಕ್ರವಾರ ಡೆಹ್ರಾಡೂನ್‌ನ ಸಿನೆಮಾ ಹಾಲ್‌ನಲ್ಲಿ ತಮ್ಮ ಪತ್ನಿ ಗೀತಾ ಧಾಮಿ, ಸಂಪುಟ ಸಹೋದ್ಯೋಗಿಗಳಾದ ಗಣೇಶ್ ಜೋಶಿ ಮತ್ತು ಪ್ರದೀಪ್ ಬಾತ್ರಾ ಹಾಗೂ ಹಲವು ಶಾಸಕರೊಂದಿಗೆ ವೀಕ್ಷಿಸಿದರು. ರಾಜ್ಯದ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದೇಶ ಹಾಗೂ ಜಗತ್ತಿಗೆ ಪರಿಚಯಿಸುವಲ್ಲಿ ‘ಹನುಮಾನ್ ಅಂಶ್’ ನಂತಹ ಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಒಟಿಟಿ ಸಂಸ್ಥೆಯಿಂದ ರಿಜೆಕ್ಟ್ ಆಗಿತ್ತು ‘ಹನುಮಾನ್ ಅಂಶ್’ ಸಿನಿಮಾ: ಕಹಿ ಅನುಭವ ತೆರೆದಿಟ್ಟ ನಿರ್ದೇಶಕ

‘ಈ ಚಿತ್ರದ ಮೂಲಕ ಬಾಬಾ ನೀಮ್ ಕರೋಲಿ ಮಹಾರಾಜ್ ಜಿ ಅವರ ತಪಸ್ಸು, ತ್ಯಾಗ, ಸೇವೆ ಮತ್ತು ಭಗವಾನ್ ಹನುಮಂತನ ಮೇಲಿನ ಅಚಲ ನಂಬಿಕೆಯನ್ನು ತಿಳಿದುಕೊಂಡು ಅರ್ಥಮಾಡಿಕೊಳ್ಳುವ ಅವಕಾಶ ನಮಗೆ ಸಿಕ್ಕಿತು. ಅವರ ಇಡೀ ಜೀವನವು ಮಾನವಕುಲದ ಸೇವೆ, ಆಧ್ಯಾತ್ಮಿಕ ಸಾಧನೆ ಮತ್ತು ಸಮಾಜದ ಕಲ್ಯಾಣಕ್ಕಾಗಿ ಮೀಸಲಾಗಿತ್ತು. ಬಾಬಾ ನೀಮ್ ಕರೋಲಿ ಮಹಾರಾಜ್ ಜಿ ಅವರ ಜೀವನವು, ಭಕ್ತಿಯು ಕೇವಲ ಆಚರಣೆಯಲ್ಲ, ಬದಲಿಗೆ ಅದು ಸೇವೆ, ಶರಣಾಗತಿ ಮತ್ತು ಮಾನವ ಕಲ್ಯಾಣದ ಮಾರ್ಗವೂ ಹೌದು ಎಂಬ ಸಂದೇಶವನ್ನು ನಮಗೆ ನೀಡುತ್ತದೆ’ ಎಂದು ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

‘ಹನುಮಾನ್ ಅಂಶ್’ ಸಿನಿಮಾವು ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿಸಿದ ಸಿನಿಮಾ ಆಗಿದೆ. ಕೇವಲ 2 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಇದೀಗ ಬಾಕ್ಸ್ ಆಫೀಸ್​​ನಲ್ಲಿ 80 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, 100 ಕೋಟಿ ಗಳಿಕೆ ಮಾಡುವ ಹಾದಿಯಲ್ಲಿದೆ. ಹೊಂಬಾಳೆ ಫಿಲಮ್ಸ್ ಅವರು ಸಿನಿಮಾದ ವಿದೇಶಿ ಬಿಡುಗಡೆ ಹಕ್ಕನ್ನು ಖರೀದಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us