ಬಾಲಿವುಡ್​ ಹಿರಿಯ ನಟ, ನಿರ್ದೇಶಕ ಮನೋಜ್ ಕುಮಾರ್ ನಿಧನ

Manoj Kumar Death: ಖ್ಯಾತ ಬಾಲಿವುಡ್ ನಟ ಮತ್ತು ನಿರ್ದೇಶಕ ಮನೋಜ್ ಕುಮಾರ್ ಅವರು 87 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರಾಷ್ಟ್ರಪ್ರೇಮಿ ಚಿತ್ರಗಳಿಗೆ ಹೆಸರಾದ ಅವರು 'ಉಪ್ಕಾರ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ .

ಬಾಲಿವುಡ್​ ಹಿರಿಯ ನಟ, ನಿರ್ದೇಶಕ ಮನೋಜ್ ಕುಮಾರ್ ನಿಧನ
ಮನೋಜ್ ಕುಮಾರ್

Updated on: Apr 04, 2025 | 8:45 AM

ಬಾಲಿವುಡ್​ಗೆ ಒಂದು ಕಹಿ ಸುದ್ದಿ ಸಿಕ್ಕಿದೆ. ಹಿರಿಯ ನಟ ಹಾಗೂ ನಿರ್ದೇಶಕ ಮನೋಜ್ ಕುಮಾರ್ (Manoj Kumar) ಅವರು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಾ ಇದ್ದರು. ಅವರು ರಾಷ್ಟ್ರ ಪ್ರೇಮದ ಸಿನಿಮಾಗಳನ್ನು ಮಾಡಿ ಹೆಸರು ವಾಸಿ ಆಗಿದ್ದರು. ಈ ಕಾರಣಕ್ಕೆ ಅವರಿಗೆ ‘ಭಾತರತ್ ಕುಮಾರ್’ ಎಂಬ ಹೆಸರನ್ನೂ ಇಡಲಾಗಿತ್ತು. ಅವರ ಸಾವಿಗೆ ಬಾಲಿವುಡ್​ ಮಂದಿ ಸಂತಾಪ ಸೂಚಿಸುತ್ತಿದ್ದಾರೆ.

ಮನೋಜ್ ಕುಮಾರ್ ಅವರಿಗೆ ಹಲವು ವಯೋ ಸಹಜ ಕಾಯಿಲೆಗಳು ಇದ್ದವು. ಅವರನ್ನು ಕೆಲ ವಾರಗಳ ಹಿಂದೆ ಮುಂಬೈನ ಕೊಕಿಲಾಬೇನ್ ಧೀರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು (ಏಪ್ರಿಲ್ 4) ಮುಂಜಾನೆ 3.30ರ ಸುಮಾರಿಗೆ ಅವರು ನಿಧನ ಹೊಂದಿದ್ದಾರೆ. ಅವರ ಸಾವಿನ ವಿಚಾರವನ್ನು ಚಿತ್ರರಂಗದವರು ಖಚಿತಪಡಿಸಿದ್ದಾರೆ.

ಚಿತ್ರರಂಗಕ್ಕೆ ಮನೋಜ್ ಕುಮಾರ್ ಅವರ ಕೊಡುಗೆ ಅಪರಾವಾದದ್ದು. ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಉಪ್ಕಾರ್’ (1967) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಸರ್ಕಾರದ ಕಡೆಯಿಂದ ಅವರಿಗೆ ಪದ್ಮಶ್ರೀ (1992) ಹಾಗೂ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್​ (2015) ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ
ಮಹೇಶ್ ಬಾಬು ಕಾರಣಕ್ಕೆ ಶಾಲೆ ಬಂಕ್ ಮಾಡ್ತಾರೆ ಸಿತಾರಾ
‘ಬಜರಂಗಿ ಭಾಯಿಜಾನ್’ ಆಫರ್ ಮೊದಲು ಹೋಗಿದ್ದು ಆಮಿರ್ ಬಳಿ
48ನೇ ವಯಸ್ಸಿಗೆ ತಂದೆಯಾದ ಖ್ಯಾತ ಹಾಸ್ಯ ನಟ; ಕಲಾವಿದನ ಬಾಳಲ್ಲಿ ಖುಷಿಯೋ ಖುಷಿ
ದೇವರ 2 ಚಿತ್ರದ ಶೂಟ್​ಗೆ ರೆಡಿ ಆಯ್ತು ಕುಮಟಾ; ಸಿದ್ಧವಾಗ್ತಿದೆ ಬೃಹತ್ ಸೆಟ್

ಮನೋಜ್ ಕುಮಾರ್ ಅವರು ಪಂಜಾಬಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. 1937ರಲ್ಲಿ ಇವರ ಜನನ ಆಯಿತು. ಅವರ ಮೂಲ ಹೆಸರು ಹರಿಕೃಷ್ಣ ಗಿರಿ ಗೋಸ್ವಾಮಿ ಎಂದು. ಅವರು 10ನೇ ವಯಸ್ಸಿಗೆ ಬಂದಾಗ ಇಡೀ ಕುಟುಂಬ ದೆಹಲಿಗೆ ಸ್ಥಳಾಂತರ ಆಯಿತು. 1957ರ ಸಮಯದಲ್ಲಿ ನಟನಾಗಿ ಮನೋಜ್ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು.

ಇದನ್ನೂ ಓದಿ: ಶೂಟ್​ಗೆ ಬರದ ಪವನ್ ಕಲ್ಯಾಣ್; ಆ ಸಿನಿಮಾ ಬಿಟ್ಟು ಸಲ್ಮಾನ್ ಖಾನ್ ಮೊರೆ ಹೋದ ನಿರ್ದೇಶಕ

1967ರಲ್ಲಿ ‘ಉಪ್ಕಾರ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದರು. ಮೊದಲ ಚಿತ್ರದಲ್ಲೇ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ‘ಕ್ರಾಂತಿ’, ‘ಶೋರ್’, ‘ಕ್ಲರ್ಕ್’, ‘ಜೈ ಹಿಂದ್’ ರೀತಿಯ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದರು. ಈ ಸಿನಿಮಾ 199ರಲ್ಲಿ ರಿಲೀಸ್ ಆಯಿತು. ಆ ಬಳಿಕ ಅವರು ಚಿತ್ರರಂಗ ತೊರೆದರು. ಇನ್ನು ಕೆಲವು ಸಿನಿಮಾಗಳಿಗೆ ಸಂಕಲನಾಕರರಾಗಿ, ಕೆಲವು ಹಾಡುಗಳಿಗೆ ಸಾಹಿತ್ಯವನ್ನು ಅವರು ಬರೆದಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.