ಅನೇಕ ಬಯೋಪಿಕ್ಗಳು ಜನರ ಮನಗೆದ್ದಿವೆ. ಸಾಧಕರ ಕಥೆಯನ್ನು ಬೆಳ್ಳಿಪರದೆ ಮೇಲೆ ನೋಡುವುದರಿಂದ ಪ್ರೇಕ್ಷಕರಿಗೆ ಸ್ಫೂರ್ತಿ ಹೆಚ್ಚುತ್ತದೆ. ಹಲವಾರು ಮಹಾನ್ ವ್ಯಕ್ತಿಗಳ ಜೀವನದ ವಿವರವನ್ನು ಇಟ್ಟುಕೊಂಡು ಈಗಾಗಲೇ ಸಿನಿಮಾ ಮಾಡಲಾಗಿದೆ. ಬಾಲಿವುಡ್ನಲ್ಲಿ ಬಯೋಪಿಕ್ ಟ್ರೆಂಡ್ ಜೋರಾಗಿದೆ. ಈಗ ‘ಕೆಫೆ ಕಾಫಿ ಡೇ’ (Cafe Coffee Day) ಸಂಸ್ಥಾಪಕ ವಿ.ಜಿ. ಸಿದ್ದಾರ್ಥ ಅವರ ಕುರಿತು ಬಯೋಪಿಕ್ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಉದ್ಯಮ ಲೋಕದಲ್ಲಿ ಸಾಧನೆ ಮಾಡಿದ ಸಿದ್ದಾರ್ಥ (VG Siddhartha) ಅವರ ಜೀವನ ದುರಂತ ಅಂತ್ಯ ಕಂಡಿದ್ದು ಮಾತ್ರ ನೋವಿನ ಸಂಗತಿ. ಆದರೆ ಅವರು ಸಾಗಿ ಬಂದ ಹಾದಿ ನಿಜಕ್ಕೂ ಕೋಟ್ಯಂತರ ಜನರಿಗೆ ಮಾದರಿ ಆಗುವಂಥದ್ದು. ಹಾಗಾಗಿ ಅವರ ಬಯೋಪಿಕ್ (VG Siddhartha Biopic) ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆಬಂದಿವೆ.
ವಿ.ಜಿ. ಸಿದ್ದಾರ್ಥ ಅವರ ಜೀವನದ ಕುರಿತು ‘ಕಾಫಿ ಕಿಂಗ್’ ಪುಸ್ತಕ ಸಿದ್ಧವಾಗುತ್ತಿದೆ. ಈ ಪುಸ್ತಕದಲ್ಲಿನ ವಿವರಗಳನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡಲು ಪ್ಲ್ಯಾನ್ ರೆಡಿಯಾಗಿದೆ. ‘ಟಿ-ಸಿರೀಸ್’ ಮತ್ತು ‘ಆಲ್ಮೈಟಿ ಮೋಷನ್ ಪಿಕ್ಚರ್’ ಸಂಸ್ಥೆಗಳು ಈ ಸಿನಿಮಾಗೆ ಬಂಡವಾಳ ಹೂಡಲಿವೆ. ಅದರ ಜೊತೆಗೆ ‘ಕರ್ಮ ಮೀಡಿಯಾ ಎಂಟರ್ಟೇನ್ಮೆಂಟ್’ ಕೂಡ ಕೈ ಜೋಡಿಸುತ್ತಿದೆ. ಈ ಕುರಿತು ಟಿ-ಸಿರೀಸ್ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.
Showcasing the life account of Coffee Mogul who brewed millions!
T-Series Films ,Prabhleen Sandhu & Almighty Motion Picture in association with Karma Media Entertainment are delighted to have acquired the AV rights to the biography of Entrepreneur par excellence,
— T-Series (@TSeries) June 17, 2022
‘ಸಾಕಷ್ಟು ಅಧ್ಯಯನ ನಡೆಸಿ ‘ಕಾಫಿ ಕಿಂಗ್’ ಪುಸ್ತಕವನ್ನು ಬರೆಯಲಾಗಿದೆ. ಮಹಾನ್ ಉದ್ಯಮಿ ಸಿದ್ದಾರ್ಥ ಬದುಕಿನ ಬಗ್ಗೆ ಗೊತ್ತಿರದ ಅನೇಕ ವಿಚಾರಗಳನ್ನು ಇದು ಒಳಗೊಂಡಿದೆ’ ಎಂದು ನಿರ್ಮಾಪಕ ಪ್ರಭಲೀನ್ ಕೌರ್ ಸಂಧು ಹೇಳಿದ್ದಾರೆ. ಈ ಸಿನಿಮಾದಲ್ಲಿ ವಿ.ಜಿ. ಸಿದ್ದಾರ್ಥ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
– Taran Adarsh (@taran_adarsh) 17 June 2022
ಸಿದ್ದಾರ್ಥ ಬದುಕಿನ ದುರಂತ ಅಂತ್ಯ:
‘ಕೆಫೆ ಕಾಫಿ ಡೇ’ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಸಿದ್ದಾರ್ಥ ಅವರು ಸಾಲದ ಸುಳಿಗೆ ಸಿಲುಕಿದ್ದರು. ಬಿಸ್ನೆಸ್ನಲ್ಲಿ ನಷ್ಟ ಆಗಿದ್ದರಿಂದ ಅವರು ಆತ್ಯಹತ್ಯೆ ಮಾಡಿಕೊಂಡರು. 2019ರ ಜುಲೈ 31ರಂದು ತಮ್ಮ 59ನೇ ವಯಸ್ಸಿನಲ್ಲಿ ಅವರು ನಿಧನರಾದರು. ಅವರ ಜೀವನದ ಏಳು-ಬೀಳಿನ ವಿವರಗಳಿಗೆ ಸಿನಿಮಾ ರೂಪ ಸಿಗುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆಗಳು ಇದಕ್ಕಾಗಿ ಕೈ ಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:06 pm, Fri, 17 June 22