AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಸಿನಿಮಾದಿಂದ ವಿದ್ಯಾ ಬಾಲನ್​ಗೆ ಹಿಡಿಯಿತು ಸಿಗರೇಟ್ ಸೇದುವ ಚಟ 

‘ದಿ ಡರ್ಟಿ ಪಿಕ್ಚರ್' ನನ್ನನ್ನು ಸಿಗರೇಟ್ ಸೇದುವುದನ್ನು ಚಟವನ್ನಾಗಿ ಮಾಡಿತು ಎಂದು ವಿದ್ಯಾ ಹೇಳಿದ್ದಾರೆ. ನಾನು ದಿನಕ್ಕೆ 2 ರಿಂದ 3 ಸಿಗರೇಟ್ ಸೇದುತ್ತಿದ್ದೆ ಎಂದೂ ವಿದ್ಯಾ ಹೇಳಿದ್ದಾರೆ. ಸದ್ಯ ಎಲ್ಲೆಲ್ಲೂ ವಿದ್ಯಾ ಬಾಲನ್ ಹೇಳಿಕೆ ಚರ್ಚೆಯಾಗುತ್ತಿದೆ.

ಆ ಸಿನಿಮಾದಿಂದ ವಿದ್ಯಾ ಬಾಲನ್​ಗೆ ಹಿಡಿಯಿತು ಸಿಗರೇಟ್ ಸೇದುವ ಚಟ 
ವಿದ್ಯಾ ಬಾಲನ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Apr 26, 2024 | 2:49 PM

Share

ಕೆಲವು ಪಾತ್ರಗಳಲ್ಲಿ ನಟಿಸೋದು ತುಂಬಾನೇ ಕಷ್ಟ. ಈ ರೀತಿಯ ಪಾತ್ರಗಳಿಗಾಗಿ ಕಲಾವಿದರು ಬೇರೆ ಬೇರೆ ಚಟಗಳನ್ನು ಕಲಿಯಬೇಕಾದ ಪರಿಸ್ಥಿತಿ ಬರುತ್ತದೆ. ನಟಿ ವಿದ್ಯಾ ಬಾಲನ್ ಅವರಿಗೂ ಹಾಗೆಯೇ ಆಗಿತ್ತು. ‘ದಿ ಡರ್ಟಿ ಪಿಕ್ಚರ್​’ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಪಾತ್ರ ಮಾಡಲು ವಿದ್ಯಾ ಬಾಲನ್ (Vudya Balan) ಅವರು ಸಿಗರೇಟು ಸೇದುವುದನ್ನು ಕಲಿಯಬೇಕಾಯಿತು. ಆ ಬಳಿಕ ಇದು ಅವರಿಗೆ ಚಟವಾಗಿ ಪರಿಣಮಿಸಿತು. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಸಿಗರೇಟು ಸೇದುವುದು ಕೆಟ್ಟ ಹವ್ಯಾಸ. ಕೆಲವು ಬಾರಿ ಸೇದಿದರೆ ಅದು ಹವ್ಯಾಸ ಆಗುತ್ತದೆ. ವಿದ್ಯಾ ಬಾಲನ್​ಗೂ ಹಾಗೆಯೇ ಆಗಿದೆ. ‘ಆ ಸಿನಿಮಾ ಶೂಟ್​ಗೂ ಮೊದಲು ಕೆಲವು ಬಾರಿ ನಾನು ಸಿಗರೇಟ್ ಸೇದಿದ್ದೆ. ಸಿಗರೇಟ್ ಸೇದುವುದು ಹೇಗೆ ಎಂಬುದು ನನಗೆ ಗೊತ್ತಿತ್ತು. ಹುಡುಗಿಯರು ಸಿಗರೇಟ್ ಸೇದುವ ಬಗ್ಗೆ ಜನರು ತಮ್ಮ ಮನಸ್ಸಿನಲ್ಲಿ ಒಂದು ಗ್ರಹಿಕೆಯನ್ನು ಹುಟ್ಟುಹಾಕಿದ್ದರಿಂದ ಮೊದಲಿಗೆ ನನಗೆ ಅಹಿತಕರವಾಗಿತ್ತು. ಆದರೆ, ಈಗ ಜನರು ಮೊದಲಿನಷ್ಟು ಜಡ್ಜ್ ಮಾಡುವುದಿಲ್ಲ’ ಎಂದಿದ್ದಾರೆ ವಿದ್ಯಾ ಬಾಲನ್.

ವಿದ್ಯಾ ಇನ್ನೂ ಸಿಗರೇಟ್ ಸೇದುತ್ತಾರಾ? ಈ ಪ್ರಶ್ನೆಗೆ ಉತ್ತರಿಸಿದ ನಟಿ, ‘ಈ ಬಗ್ಗೆ ಕ್ಯಾಮೆರಾ ಮುಂದೆ ಮಾತನಾಡುವುದು ಸರಿ ಅಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಸಿಗರೇಟ್ ಸೇದುವುದನ್ನು ಆನಂದಿಸುತ್ತೇನೆ. ಸಿಗರೇಟು ಸೇದುವುದರಿಂದ ಏನೂ ತೊಂದರೆ ಇಲ್ಲ ಎಂದಾಗಿದ್ದರೆ ನಾನು ಸ್ಮೋಕರ್ ಆಗುತ್ತಿದ್ದೆ. ಕಾಲೇಜು ದಿನಗಳಲ್ಲಿ ಯಾರಾದರೂ ಅಂಗಡಿಯಲ್ಲಿ ಸಿಗರೇಟ್ ಸೇದುತ್ತಿದ್ದರೆ ಅವರ ಬಳಿ ಹೋಗಿ ಕುಳಿತುಕೊಳ್ಳುತ್ತಿದ್ದೆ’ ಎಂದಿದ್ದಾರೆ ವಿದ್ಯಾ.

‘ದಿ ಡರ್ಟಿ ಪಿಕ್ಚರ್’ ನನ್ನನ್ನು ಸಿಗರೇಟ್ ಸೇದುವುದನ್ನು ಚಟವನ್ನಾಗಿ ಮಾಡಿತು ಎಂದು ವಿದ್ಯಾ ಹೇಳಿದ್ದಾರೆ. ನಾನು ದಿನಕ್ಕೆ 2 ರಿಂದ 3 ಸಿಗರೇಟ್ ಸೇದುತ್ತಿದ್ದೆ ಎಂದೂ ನಟಿ ಹೇಳಿದ್ದಾರೆ. ಸದ್ಯ ಎಲ್ಲೆಲ್ಲೂ ವಿದ್ಯಾ ಬಾಲನ್ ಹೇಳಿಕೆ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ವಿದ್ಯಾ ಬಾಲನ್ ಜೊತೆ ನಟಿಸೋಕೆ ಹೀರೋಗಳಿಗೆ ಇಷ್ಟವೇ ಇಲ್ಲ; ಸತ್ಯ ಹೇಳಿದ ನಟಿ

ವಿದ್ಯಾ ಬಾಲನ್ ನಟನೆಯ ‘ದೋ ಔರ್ ದೋ ಪ್ಯಾರ್’ ಸಿನಿಮಾ ಥಿಯೇಟರ್​ನಲ್ಲಿ ಓಡುತ್ತಿದೆ. ಈ ಸಿನಿಮಾದಲ್ಲಿ ಪ್ರತಿಕ್ ಗಾಂಧಿ ಕೂಡ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಏಳು ದಿನಗಳಲ್ಲಿ ಈ ಚಿತ್ರ ಕೇವಲ 3 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:08 pm, Fri, 26 April 24

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ