‘ಅದ್ಭುತ ಅನುಭವ’; ಐಪಿಎಲ್ ನಡುವೆ ‘ಧುರಂಧರ್ 2’ ನೋಡಿ ವಿಮರ್ಶೆ ತಿಳಿಸಿದ ವಿರಾಟ್

Virat Kohli News: ವಿರಾಟ್ ಕೊಹ್ಲಿ ಅವರು 'ಧುರಂಧರ್ 2' ಚಿತ್ರ ವೀಕ್ಷಿಸಿ ಹಾಡಿಹೊಗಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನೋಡಿದ ಅದ್ಭುತ ಸಿನಿಮಾ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದಿತ್ಯ ಧಾರ್ ಅವರ ನಿರ್ದೇಶನ ಮತ್ತು ರಣವೀರ್ ಸಿಂಗ್ ಅವರ ನಟನೆಯನ್ನು ಶ್ಲಾಘಿಸಿದ್ದಾರೆ.

‘ಅದ್ಭುತ ಅನುಭವ’;  ಐಪಿಎಲ್ ನಡುವೆ ‘ಧುರಂಧರ್ 2’ ನೋಡಿ ವಿಮರ್ಶೆ ತಿಳಿಸಿದ ವಿರಾಟ್
ಧುರಂದರ್-ಕೊಹ್ಲಿ

Updated on: Apr 08, 2026 | 11:02 AM

‘ಧುರಂಧರ್ 2’ ಚಿತ್ರವನ್ನು (Dhuranadhar 2) ವೀಕ್ಷಿಸಿ ಎಲ್ಲರೂ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಆದಿತ್ಯ ಧಾರ್ ಅವರ ನಿರ್ದೇಶನ ಹಾಗೂ ರಣವೀರ್ ಸಿಂಗ್ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈಗ ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ‘ಧುರಂಧರ್ 2’ ಸಿನಿಮಾ ವೀಕ್ಷಿಸಿದ್ದಾರೆ. ಅವರು ಈ ಚಿತ್ರವನ್ನು ಹಾಡಿಹೊಗಳಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ನೋಡಿದ ಅದ್ಭುತ ಸಿನಿಮಾ ಇದು ಎಂದು ಮೆಚ್ಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್ ಸ್ಟೇಟಸ್​​ ಅಲ್ಲಿ ಕೊಹ್ಲಿ ಅವರು ಸಿನಿಮಾ ಬಗ್ಗೆ ವಿಮರ್ಶೆ ತಿಳಿಸಿದ್ದಾರೆ. ‘ನಾನು ಧುರಂಧರ್ 2’ ಸಿನಿಮಾ ವೀಕ್ಷಿಸಿದೆ. ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ.ಈ ಸಿನಿಮಾ ನನ್ನಲ್ಲಿರುವ ಎಲ್ಲಾ ರೀತಿಯ ಭಾವನೆಗಳನ್ನು ಹೊರತಂದಿತು’ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ‘ಎಲ್ಲೂ ಇಲ್ಲ ಅಂದ್ರೆ ಕೊನೆಗೆ ಸ್ಯಾಂಡಲ್​​ವುಡ್​​ನಲ್ಲಾದರೂ ಕೆಲಸ ಮಾಡಬಹುದು’; ವಿರಾಟ್ ಕೊಹ್ಲಿ

‘4 ಗಂಟೆಗಳ ಕಾಲ ನಾನು ಎಲ್ಲಿಯೂ ಬೇಸರ ಮಾಡಿಕೊಂಡಿಲ್ಲ. ಆದಿತ್ಯ ಧಾರ್ ಅವರೇ ನಿಮ್ಮ ಪ್ರತಿಭೆ ಮತ್ತು ದೃಢನಿಶ್ಚಯವು ನೀವು ಸೃಷ್ಟಿಸಿದ್ದರಲ್ಲಿ ಪ್ರತಿಫಲಿಸುತ್ತದೆ. ನಿಮಗೆ ಹ್ಯಾಟ್ಸ್ ಆಫ್. ಎಲ್ಲಾ ನಟರು ತಮ್ಮ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ರಣವೀರ್ ಸಿಂಗ್ ಈ ಸಿನಿಮಾದಲ್ಲಿ ಬೇರೆ ಹಂತ ತಲುಪಿದ್ದೀರಿ. ನಿಮ್ಮ ಅಭಿನಯ ಅದ್ಭುತವಾಗಿತ್ತು. ಖಂಡಿತವಾಗಿಯೂ ವಾವ್’ ಎಂದು ಅವರು ಬರೆದುಕೊಂಡಿದ್ದಾರೆ. ಅನುಷ್ಕಾ ಕೂಡ ಇದನ್ನು ಮೆಚ್ಚಿದ್ದಾರೆ.  ಆದಿತ್ಯ ಧಾರ್ ಅವರು ಈ ವಿಮರ್ಶೆಯಿಂದ ಖುಷಿಯಾಗಿದ್ದಾರೆ.


ವಿರಾಟ್ ಕೊಹ್ಲಿ ಅವರಿಗೆ ಇನ್​ಸ್ಟಾಗ್ರಾಮ್​ ಅಲ್ಲಿ 27 ಕೋಟಿಗೂ ಹೆಚ್ಚು ಹಿಂಬಾಲಕರು ಇದ್ದಾರೆ. ಅವರ ಸಿನಿಮಾ ವಿಮರ್ಶೆ ನೋಡಿ ಒಂದಷ್ಟು ಮಂದಿ ಸಿನಿಮಾ ನೋಡಲು ತೆರಳಬಹುದು. ಇದರಿಂದ ಸಿನಿಮಾದ ಗಳಿಕೆ ಹೆಚ್ಚಲಿದೆ.
‘ಧುರಂಧರ್ 2’ ಸಿನಿಮಾ ಭಾರತದಲ್ಲೇ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿ ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:55 am, Tue, 7 April 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us