‘ಅದಾನಿ ಬಂದರು ಡ್ರಗ್ಸ್​ ಮತ್ತು ರೈತರ ಕೊಲೆ ಮರೆಮಾಚಲು ಶಾರುಖ್​ ಮಗ ಟಾರ್ಗೆಟ್​’: ವಿಶಾಲ್​ ದದ್ಲಾನಿ

| Updated By: ಮದನ್​ ಕುಮಾರ್​

Updated on: Oct 11, 2021 | 9:52 AM

ಗಾಯಕ ವಿಶಾಲ್​ ದದ್ಲಾನಿ ಅವರು ಕೊಂಚ ಖಾರವಾಗಿ ಟ್ವೀಟ್​ ಮಾಡಿದ್ದಾರೆ. ಶಾರುಖ್​ ಪುತ್ರನನ್ನು ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಸಿದ್ದರ ಹಿಂದೆ ದೊಡ್ಡ ಹುನ್ನಾರ ಇದೆ ಎಂಬುದು ವಿಶಾಲ್​ ಆರೋಪ. ಸದ್ಯ ಈ ಟ್ವೀಟ್​ ವೈರಲ್​ ಆಗುತ್ತಿದೆ.

‘ಅದಾನಿ ಬಂದರು ಡ್ರಗ್ಸ್​ ಮತ್ತು ರೈತರ ಕೊಲೆ ಮರೆಮಾಚಲು ಶಾರುಖ್​ ಮಗ ಟಾರ್ಗೆಟ್​’: ವಿಶಾಲ್​ ದದ್ಲಾನಿ
ವಿಶಾಲ್​ ದದ್ಲಾನಿ, ಆರ್ಯನ್​ ಖಾನ್​, ಶಾರುಖ್​ ಖಾನ್​
Follow us on

ಡ್ರಗ್ಸ್​ ಪಾರ್ಟಿ ಮಾಡಿ ಎನ್​ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇಂಥ ಕೆಲಸ ಮಾಡಿದ್ದಕ್ಕೆ ಜನರು ಆರ್ಯನ್​ ಖಾನ್​ಗೆ ಛೀಮಾರಿ ಹಾಕುತ್ತಿದ್ದಾರೆ. ಆದರೆ ಇನ್ನೂ ಕೆಲವರು ಶಾರುಖ್​ ಮತ್ತು ಅವರ ಕುಟುಂಬದ ಪರವಾಗಿ ಧ್ವನಿ ಎತ್ತಿದ್ದಾರೆ. ಸಲ್ಮಾನ್​ ಖಾನ್​ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಎಸ್​ಆರ್​ಕೆಗೆ ಬೆಂಬಲ ಸೂಚಿಸಿದ್ದಾರೆ. ಈಗ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ವಿಶಾಲ್​ ದದ್ಲಾನಿ ಅವರು ಶಾರುಖ್​ ಪರ ಬ್ಯಾಟ್​ ಬೀಸಿದ್ದಾರೆ. ಅಲ್ಲದೇ, ಆರ್ಯನ್​ ಖಾನ್​ ಬಂಧನ ಒಂದು ಸಂಚು ಎಂದು ಅವರು ಆರೋಪಿಸಿದ್ದಾರೆ.

ಶಾರುಖ್​ ಖಾನ್​ ಜೊತೆ ಕೆಲಸ ಮಾಡಿದ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಈಗ ಅವರ ಪರ ನಿಂತಿದ್ದಾರೆ. ಫರ್ಹಾ ಖಾನ್​, ಶೇಖರ್​ ಸುಮನ್​, ಹೃತಿಕ್​ ರೋಷನ್​ ಸೇರಿದಂತೆ ಅನೇಕರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಜನಪ್ರಿಯ ಗಾಯಕ ಮತ್ತು ಸಂಗೀತ ಸಂಯೋಜಕ ವಿಶಾಲ್​ ದದ್ಲಾನಿ ಅವರು ಕೊಂಚ ಖಾರವಾಗಿ ಟ್ವೀಟ್​ ಮಾಡಿದ್ದಾರೆ. ಶಾರುಖ್​ ಪುತ್ರನನ್ನು ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಸಿದ್ದರ ಹಿಂದೆ ದೊಡ್ಡ ಹುನ್ನಾರ ಇದೆ ಎಂಬುದು ವಿಶಾಲ್​ ಆರೋಪ. ಸದ್ಯ ಈ ಟ್ವೀಟ್​ ವೈರಲ್​ ಆಗುತ್ತಿದೆ.

‘ಅದಾನಿ ಬಂದರಿನಲ್ಲಿ ಸಿಕ್ಕ 3 ಸಾವಿರ ಕೆಜಿ ತಾಲಿಬಾನಿ ಡ್ರಗ್ಸ್​ ಮತ್ತು ಬಿಜೆಪಿ ಶಾಸಕನ ಮಗ ಮಾಡಿದ ರೈತರ ಕೊಲೆ ಪ್ರಕರಣವನ್ನು ಮರೆಮಾಚಲು ಶಾರುಖ್​ ಖಾನ್​ ಮತ್ತು ಅವರ ಕುಟುಂಬವನ್ನು ಟಾರ್ಗೆಟ್​ ಮಾಡಲಾಗಿದೆ’ ಎಂದು ವಿಶಾಲ್​ ದದ್ಲಾನಿ ನೇರವಾಗಿ ಆರೋಪ ಮಾಡಿದ್ದಾರೆ. ‘ಕಳೆದ 30 ವರ್ಷದಲ್ಲಿ ಶಾರುಖ್​ ಖಾನ್​ ಜೊತೆ ಕೆಲಸ ಮಾಡಿದವರಲ್ಲಿ ಎಷ್ಟು ಜನರು ಈಗ ಅವರ ಪರವಾಗಿ ಇದ್ದೀರಿ’ ಎಂದು ಕೂಡ ಅವರು ಪ್ರಶ್ನೆ ಮಾಡಿದ್ದಾರೆ.

ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ (ಅ.8) ಮುಂಬೈನ ನ್ಯಾಯಾಲಯದಲ್ಲಿ ನಡೆಯಿತು. 23 ವರ್ಷದ ಆರ್ಯನ್ ಪರ ಸತೀಶ್ ಮಾನೆಶಿಂಧೆ ವಾದ ಮಂಡಿಸಿದರು. ಈ ಕುರಿತು ತೀರ್ಪು ನೀಡಿರುವ ನ್ಯಾಯಾಲಯವು ಆರ್ಯನ್​ಗೆ ಜಾಮೀನು ನೀಡಿಲ್ಲ. ಗುರುವಾರ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಾಲಯವು ಆರ್ಯನ್ ಖಾನ್​ಗೆ ಎನ್​ಸಿಬಿ ಕಸ್ಟಡಿಯನ್ನು ವಿಸ್ತರಿಸಲು ನಿರಾಕರಿಸಿತ್ತು. ಈಗಾಗಲೇ ಅಗತ್ಯವಿದ್ದಷ್ಟು ಸಮಯವನ್ನು ಎನ್​ಸಿಬಿಗೆ ನೀಡಲಾಗಿದೆ ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಆರ್​.ಎಂ .ನಿರ್ಲೇಕರ್ ತಿಳಿಸಿದ್ದರು. ನಂತರ ಅವರು ಆರ್ಯನ್ ಖಾನ್ ಸೇರಿದಂತೆ 8 ಜನರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು. ಪ್ರಕರಣದ 8 ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಸೆಷನ್ ಕೋರ್ಟ್ ಮೊರೆ ಹೋಗಲು ಆರ್ಯನ್ ಖಾನ್ ಪರ ವಕೀಲರು ಈಗ ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ:

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ

‘ಪ್ರೀತಿಯ ಆರ್ಯನ್​ ಖಾನ್​..’: ಶಾರುಖ್​ ಪುತ್ರನಿಗೆ ಹೃತಿಕ್​ ರೋಷನ್​ ಬಹಿರಂಗ ಪತ್ರ