‘ಫೋನ್ ಭೂತ್’2 ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
ಕತ್ರಿನಾ ಕೈಫ್, ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ನಟಿಸಿರುವ ಪೋನ್ ಭೂತ್ ಸಿನಿಮಾವು ಎರಡನೇ ದಿನದಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಕಾಣದೆ 2.50-3.50 ಕೋಟಿ ರೂಪಾಯಿ ಗಳಿಸಿಕೊಂಡಿದೆ.

ಶುಕ್ರವಾರ(ನವೆಂಬರ್ 4) ಹಿಂದಿಯಲ್ಲಿ ಒಂದೇ ದಿನ ಮೂರು ಸಿನಿಮಾಗಳು ರಿಲೀಸ್ ಆಗಿದ್ದು ಫೋನ್ ಭೂತ್(phone bhoot) ಸಿನಿಮಾವು 1400 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಹೊಂದಿದ್ದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರೊಟ್ಟಿಗೆ ಬಾರಿ ವಿಮರ್ಶೆಯೊಂದಿಗೆ ಬಂದಿದ್ದ “ಮಿಲಿ” ಸಿನಿಮಾವು 40-50 ಲಕ್ಷ ರೂಪಾಯಿ ಗಳಿಸಿಕೊಂಡಿದೆ. ಸೋನಾಕ್ಷಿ ಸಿನ್ಹಾ-ಹುಮಾ ಖುರೇಷಿ ಅಭಿನಯದ ‘ಡಬಲ್ ಎಕ್ಸ್ಎಲ್’ ಚಿತ್ರವು ಹೇಳಿಕೊಳ್ಳುವಷ್ಟು ಕಮಾಲ್ ಮಾಡಿಲ್ಲ. 20-30 ಲಕ್ಷ ರೂಪಾಯಿ ಗಳಿಸುವಲ್ಲಿಯೇ ಸಿಮೀತವಾಯಿತು.
ಫೋನ್ ಭೂತ್ ಹಾರರ್ ಕಾಮಿಡಿ ಚಿತ್ರವಾಗಿದೆ. ಗುರ್ಮಿತ್ ಸಿಂಗ್ ನಿರ್ದೇಶಿಸಿದ್ದು ಫರ್ಹಾನ್ ಮತ್ತು ರಿತೇಶ್ ಸಿಧ್ವಾನಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೊದಲ ದಿನದ ಕಲೆಕ್ಷನ್ ವಿಚಾರಕ್ಕೆ ಬಂದರೆ ಫೋನ್ ಭೂತ್ 2.5 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಎರಡನೇ ದಿನದ ಕಲೆಕ್ಷನ್ಲ್ಲಿ ದೊಡ್ಡ ಜಿಗಿತ ಕಾಣುವಲ್ಲಿ ವಿಫಲವಾಗಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ.
ಇದನ್ನು ಓದಿ: Breaking: ನಟ ರಣ್ಬೀರ್ ಕಪೂರ್ ಆಲಿಯಾ ದಂಪತಿಗೆ ಹೆಣ್ಣು ಮಗು ಜನನ
ಇನ್ನು ಒಂದೇ ದಿನ 3 ಸಿನಿಮಾ ರಿಲೀಸ್ ಆದ್ದರಿಂದ ಮಿಲಿ ಮತ್ತು ಡಬಲ್ ಎಕ್ಸ್ಎಲ್ ಚಿತ್ರವು ಪ್ರೇಕ್ಷಕರನ್ನ ಸೆಳೆಯಲು ಹರಸಾಹಸ ಪಡುತ್ತಿವೆ. ಇದರ ಮಧ್ಯೆ ಹಿಂದಿಯಲ್ಲಿ ಕಾಂತಾರ ಸಿನಿಮಾವು ಉತ್ತಮ ಪ್ರದರ್ಶನ ಕಾಣುತ್ತಿದೆ. ಫೋನ್ ಭೂತ್ ಸಿನಿಮಾವು ಗಳಿಕೆಯಲ್ಲಿ ಮುಂದಿದ್ದು ಮೊದಲ ವಾರ 10 ಕೋಟಿ ರೂಪಾಯಿ ಗಳಿಸುವ ಭರವಸೆಯಲ್ಲಿದ್ದಾರೆ ಚಿತ್ರತಂಡ.
ಕತ್ರಿನಾ ಕೈಫ್ ಸೂರ್ಯವಂಶಿ ಸಿನಿಮಾವು ಸೂಪರ್ ಹಿಟ್ ಆಗಿತ್ತು ಆದರೆ ಫೋನ್ ಭೂತ್ ಸಿನಿಮಾವು ಅಷ್ಟೋಂದು ದೊಡ್ಡ ಗಳಿಕೆ ಕಾಣುತ್ತಿಲ್ಲ. ತಮ್ಮ ಮುಂದಿನ ಸಿನಿಮಾ ಟೈಗರ್-3 ಯಲ್ಲಿ ಸಲ್ಮಾನ್ ಖಾನ್ ಜೊತೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾವು ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದ್ದು 2023ಎಪ್ರಿಲ್ನಲ್ಲಿ ಬರುವ ನಿರೀಕ್ಷೆಯಿದೆ.
ಮತ್ತಷ್ಟು ಮನರಂಜನಾ ಸುದ್ಧಿ ನೋಡಲು ಇಲ್ಲಿ ಕ್ಲಿಕ್ ಮಾಡಿ