ಸೆಲೆಬ್ರಿಟಿಗಳು ಪ್ರಿತಿ ವಿಚಾರವನ್ನು ಖಾಸಗಿಯಾಗಿ ಏಕೆ ಇಡ್ತಾರೆ? ಪ್ರಿಯಾಂಕಾ ಹೇಳಿದ್ದಿಷ್ಟು

ಬಾಲಿವುಡ್ ನಟಿಯರು ತಮ್ಮ ಸಂಬಂಧಗಳನ್ನು ಗುಟ್ಟಾಗಿಡುವ ಕಾರಣಗಳ ಬಗ್ಗೆ ಹೇಳಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರು ‘ಕಾಫಿ ವಿತ್ ಕರಣ್’ ವೇದಿಕೆ ಏರಿದ್ದರು. ಈ ಸಂದರ್ಭದಲ್ಲಿ ಅವರು ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.

ಸೆಲೆಬ್ರಿಟಿಗಳು ಪ್ರಿತಿ ವಿಚಾರವನ್ನು ಖಾಸಗಿಯಾಗಿ ಏಕೆ ಇಡ್ತಾರೆ? ಪ್ರಿಯಾಂಕಾ ಹೇಳಿದ್ದಿಷ್ಟು
ದೀಪಿಕಾ-ಪ್ರಿಯಾಂಕ
Edited By:

Updated on: Mar 18, 2025 | 8:06 AM

ಸೆಲೆಬ್ರಿಟಿಗಳು ಬಹುತೇಕ ವಿಚಾರಗಳನ್ನು ಗುಟ್ಟಾಗಿ ಇಡುತ್ತಾರೆ. ಕಿಯಾರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತಮ್ಮ ಮದುವೆ ವಿಚಾರವನ್ನು ಅವರು ನೇರವಾಗಿ ಒಪ್ಪಿಕೊಂಡೇ ಇಲ್ಲ. ಸೆಲೆಬ್ರಿಟಿಗಳು ಪ್ರೀತಿ ವಿಚಾರದಲ್ಲಿ ಸಾಕಷ್ಟು ಗುಟ್ಟು ಕಾಯ್ದುಕೊಳ್ಳುತ್ತಾರೆ. ಈ ವಿಚಾರದಲ್ಲಿ ಯಾಕೆ ಇಷ್ಟು ಗುಟ್ಟು ಎಂಬ ಬಗ್ಗೆ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಈ ಮೊದಲು ಮಾತನಾಡಿದ್ದರು. ಇದಕ್ಕೆ ಸರಿಯಾದ ಕಾರಣವನ್ನು ಅವರು ನೀಡಿದ್ದರು. ಇದನ್ನು ಅನೇಕರು ಒಪ್ಪಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರು ಒಮ್ಮೆ ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಆಗ ಇವರಿಗೆ ಕೇಳಲಾದ ಒಂದು ಪ್ರಶ್ನೆ ಗಮನ ಸೆಳೆದಿತ್ತು. ಆಗಿನ್ನೂ ದೀಪಿಕಾ ಅವರು ರಣವೀರ್ ಸಿಂಗ್ ಜೊತೆ ಸುತ್ತಾಟ ನಡೆಸುತ್ತಾ ಇದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದನ್ನು ಕರಣ್ ಜೋಹರ್ ಅವರು ನೇರವಾಗಿ ದೀಪಿಕಾಗೆ ಕೇಳಿದ್ದರು.

ಇದನ್ನೂ ಓದಿ
ವಿಜಯ್ ದೇವರಕೊಂಡಗೆ ರಶ್ಮಿಕಾ ಪ್ರೀತಿಯಿಂದ ಏನೆಂದು ಕರೆಯುತ್ತಾರೆ?
ಖಾನ್, ಕಪೂರ್​ಗಳೇ ಒಜಿ​ಗಳು, ಹೊಸಬರು ಬಂದು ಫ್ರಾಂಚೈಸಿ ಕದಿಯುತ್ತಾರೆ; ಕರಣ್
ಪುನೀತ್ ನಟನೆಯ ಯಾವ ಸಿನಿಮಾ ನೋಡಬೇಕು? ಅಭಿಮಾನಿಗಳಲ್ಲಿ ಕೇಳಿದ DK
ಲೋಹಿತ್ ಎಂದಿದ್ದ ಹೆಸರನ್ನು ಪುನೀತ್ ಆಗಿ ಬದಲಿಸಿದ್ದೇಕೆ ರಾಜ್​ಕುಮಾರ್?

ಆದರೆ, ದೀಪಿಕಾ ಅವರು ಇದನ್ನು ಒಪ್ಪಿಕೊಳ್ಳಲು ರೆಡಿ ಇರಲೇ ಇಲ್ಲ. ‘ನಾನು ರಣವೀರ್ ಜೊತೆ ಡೇಟ್ ಮಾಡುತ್ತಾ ಇದ್ದೀನಾ’ ಎಂದು ಮರು ಪ್ರಶ್ನೆ ಮಾಡಿದ್ದರು. ‘ರಿಲೇಶನ್​ಶಿಪ್​ನ ಯಾಕೆ ಒಪ್ಪಿಕೊಳ್ಳಲ್ಲ’ ಎಂದು ಪ್ರಶ್ನೆ ಮಾಡಿದ್ದರು ಕರಣ್ ಜೋಹರ್. ಇದಕ್ಕೆ ಪ್ರಿಯಾಂಕಾ ಚೋಪ್ರಾ ಅವರು ನೇರ ಮಾತುಗಳಲ್ಲಿ ಉತ್ತರ ಕೊಟ್ಟಿದ್ದರು.

‘ಕೆಲವರು ಪ್ರೀತಿ ವಿಚಾರವನ್ನು ಸೀಕ್ರೆಟ್ ಆಗಿ ಇಡೋಕೆ ಬಯಸುತ್ತಾರೆ. ಬೇರೆಯವರ ಬಾಯಿಗೆ ಆಹಾರ ಆಗೋದು ಅವರಿಗೆ ಇಷ್ಟ ಇಲ್ಲ. ಅವರ 90 ಪರ್ಸೆಂಟ್ ಜೀವನ ಸಾರ್ವಜನಿಕವಾಗಿದೆ. 10 ಪರ್ಸೆಂಟ್ ಆದರೂ ಅವರಿಗೆ ಇರಬೇಕು’ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದರು. ಇವರ ಗೆಳೆತನವನ್ನು ಅನೇಕರು ಕೊಂಡಾಡಿದ್ದಾರೆ.

ಇದನ್ನೂ ಓದಿ: ಮಾಧುರಿ ದೀಕ್ಷಿತ್ ಮದುವೆ ಆದಾಗ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಆಗಿತ್ತು ಹಾರ್ಟ್​ಬ್ರೇಕ್

ಈ ಮೊದಲು ಪ್ರಿಯಾಂಕಾ ನಟಿಸಬೇಕಿದ್ದ ಸಿನಿಮಾ ಒಂದು ದೀಪಿಕಾ ಪಾಲಾಗಿತ್ತು. ಇದರಿಂದ ಇವರ ಮಧ್ಯೆ ಕಿರಿಕ್ ಉಂಟಾಗಿದೆ ಎಂದು ಹೇಳಲಾಗಿತ್ತು. ಆದರೆ, ಇಬ್ಬರ ಮಧ್ಯೆ ಯಾವುದೇ ಕಿರಿಕ್ ಇಲ್ಲ ಎಂದು ಹೇಳಲಾಗುತ್ತಿದೆ. ದೀಪಿಕಾಗೆ ಮಗು ಜನಿಸಿದ್ದು, ಬ್ರೇಕ್​ನಲ್ಲಿ ಇದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಮಹೇಶ್ ಬಾಬು ನಟನೆಯ ಸಿನಿಮಾದಲ್ಲಿ ನಟಿಸುತ್ತಾ ಇದ್ದಾರೆ. ಇದರ ಶೂಟ್ ಇತ್ತೀಚೆಗೆ ಒಡಿಶಾದಲ್ಲಿ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.