AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಧುರಿ ದೀಕ್ಷಿತ್ ಮದುವೆ ಆದಾಗ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಆಗಿತ್ತು ಹಾರ್ಟ್​ಬ್ರೇಕ್

ಮಾಧುರಿ ದೀಕ್ಷಿತ್ ಅವರ 1999ರ ವಿವಾಹವು ಅನೇಕರಿಗೆ ಆಘಾತಕಾರಿಯಾಗಿತ್ತು. ವಿಶೇಷವಾಗಿ ಚಲನಚಿತ್ರರಂಗದ ಸೆಲೆಬ್ರಿಟಿಗಳಿಗೆ. ರಣಬೀರ್ ಮತ್ತು ಅನಿಲ್ ಕಪೂರ್ ಸೇರಿದಂತೆ ಹಲವರು ತಮ್ಮ ಹೃದಯವೇದನೆಯನ್ನು ವ್ಯಕ್ತಪಡಿಸಿದ್ದರು. ಶ್ರೀರಾಮ್ ನೆನೆ ಅವರೊಂದಿಗಿ ಮಾಧುರಿ ವಿವಾಹ ಆಗಿದ್ದಾರೆ. ಅವರು ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿ ಇಲ್ಲ.

ಮಾಧುರಿ ದೀಕ್ಷಿತ್ ಮದುವೆ ಆದಾಗ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಆಗಿತ್ತು ಹಾರ್ಟ್​ಬ್ರೇಕ್
ಮಾಧುರಿ ದೀಕ್ಷಿತ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 27, 2025 | 7:47 AM

Share

ಮಾಧುರಿ ದೀಕ್ಷಿತ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಡ್ಯಾನ್ಸ್ ಮೂಲಕ ಎಲ್ಲರ ಮನ ಗೆದ್ದಿದ್ದ ಅವರು ನಂತರ ನಟನೆಯಲ್ಲೂ ಕಮಾಲ್ ಮಾಡಿದರು. ಮಾಧುರಿ ದೀಕ್ಷಿತ್ ಅಂದಕ್ಕೆ, ನೃತ್ಯಕ್ಕೆ ಫಿದಾ ಆಗದವರೇ ಇಲ್ಲ. ವಿಶೇಷ ಎಂದರೆ ಮಾಧುರಿ ದೀಕ್ಷಿತ್ ವಿವಾಹ ಆದಾಗ ಅನೇಕರಿಗೆ ಹಾರ್ಟ್​ಬ್ರೇಕ್ ಆಗಿತ್ತು. ಜನ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳಿಗೂ ಈ ಅನುಭವ ಆಯಿತು. ಈ ಬಗ್ಗೆ ಅನೇಕರು ಈ ಮೊದಲು ಹೇಳಿಕೊಂಡಿದ್ದರು.

ಮಾಧುರಿ ದೀಕ್ಷಿತ್ ಅವರು 1999ರಲ್ಲಿ ಶ್ರೀರಾಮ್ ಮಾಧವ್ ನೆನೆ ಅವರನ್ನು ವಿವಾಹ ಆದರು. ಅವರು ಅಮೆರಿಕದಲ್ಲಿ ಸರ್ಜನ್ ಆಗಿದ್ದಾರೆ. ಮಾಧುರಿ ಹಾಗೂ ಶ್ರೀರಾಮ್ ವಿವಾಹ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿತು. ಚಿತ್ರರಂಗದವರನ್ನೇ ಅವರು ಮದುವೆ ಆಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಹಾಗಾಗಿಲ್ಲ. ಅವರು ಅಚ್ಚರಿ ಎಂಬಂತೆ ವೈದ್ಯನನ್ನು ವಿವಾಹ ಆದರು.

ರಣಬೀರ್ ಕಪೂರ್ ಅವರಿಗೆ ಮಾಧುರಿ ದೀಕ್ಷಿತ್ ಮೇಲೆ ಕ್ರಶ್ ಇತ್ತು. ‘ಮಾಧುರಿ ದೀಕ್ಷಿತ್ ಮದುವೆ ಆದಾಗ ನನಗೆ ಹಾರ್ಟ್​ಬ್ರೇಕ್ ಆಯಿತು’ ಎಂದು ರಣಬೀರ್ ಕಪೂರ್ ಹೇಳಿದ್ದರು. ‘ಮಾಧುರಿ ದೀಕ್ಷಿತ್ ಮದುವೆ ಆದಾಗ ನನಗೂ ಹಾರ್ಟ್ ಬ್ರೇಕ್ ಆಯಿತು’ ಎಂದು ಅನಿಲ್​ ಕಪೂರ್ ಹೇಳಿದ್ದರು. ಜಾಕಿ ಶ್ರಾಫ್ ಕೂಡ ಅವರು ಈ ಮಾತನ್ನು ಹೇಳಿದ್ದರು.

ಮಾಧುರಿ ದೀಕ್ಷಿತ್ ಅವರು ವಿವಾಹ ಆಗಿ ಸುಖ ಸಂಸಾರ ನಡೆಸುತ್ತಾ ಇದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಇವರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಎಂದು ಅನೇಕರು ಕೋರಿಕೊಂಡಿದ್ದಾರೆ. ಈ ದಂಪತಿಗೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇರುತ್ತದೆ.

ಇದನ್ನೂ ಓದಿ: ಮಾಧುರಿ ದೀಕ್ಷಿತ್ಗೆ ಇತ್ತು ‘ಲತ್ತೆ’ ಪಟ್ಟ; ಇದು ತೊಳೆದು ಹೋಗಿದ್ದು ಹೇಗೆ?

1984ರಲ್ಲಿ ಬಂದ ‘ಅಬೋದ್’ ಚಿತ್ರದ ಮೂಲಕ ಮಾಧುರಿ ದೀಕ್ಷಿತ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಅವಾರಾ ಬಾಪ್’ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಆಗಿನ ಕಾಲದಲ್ಲಿ ಶ್ರೀದೇವಿ ಅವರಿಗೆ ಸರಿಸಾಟಿ ಆಗಿ ಅವರು ನಿಂತರು. ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಅವರ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?