ಬಾಲಿವುಡ್ನ ಇಮ್ರಾನ್ ಖಾನ್ ಅವರು ಸಾಕಷ್ಟು ಹೆಸರು ಮಾಡಿದವರು. ಅವರು ಆಮಿರ್ ಖಾನ್ ಅವರ ಸಂಬಂಧಿ ಕೂಡ. ಆದರೆ, ಅವರು ಏಕಾಏಕಿ ಚಿತ್ರರಂಗ ತೊರೆದೇ ಬಿಟ್ಟರು. ಅವರು ಈಗ ಗುರುತು ಸಿಗದಷ್ಟು ಬದಲಾಗಿದ್ದಾರೆ. ಆಮಿರ್ ಖಾನ್ ಮಗಳು ಇರಾ ಖಾನ್ ಮದುವೆಯಲ್ಲಿ ಮಿಂಚಿದ್ದರು. ಅವರನ್ನು ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದರು. ಇಂದು (ಜನವರಿ 13) ಅವರ ಜನ್ಮದಿನ. ಅವರು ನಟನೆಯಿಂದ ಬ್ರೇಕ್ ಪಡೆದಿದ್ದು ಏಕೆ ಎಂಬುದನ್ನು ಹೇಳಿದ್ದರು.
‘2016ರ ಸಂದರ್ಭದಲ್ಲಿ ನಾನು ಸಾಕಷ್ಟು ಕುಗ್ಗಿದ್ದೆ. ನಾನು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೆ. ಆರ್ಥಿಕವಾಗಿ ಅದು ನನಗೆ ಸಹಾಯ ಮಾಡಿತು. 30ನೇ ವಯಸ್ಸಿಗೆ ನಾನು ಹಣದ ಬಗ್ಗೆ ಆಲೋಚಿಸುವ ಅಗತ್ಯವೇ ಇರಲಿಲ್ಲ. ಆ ಸಮಯದಲ್ಲಿ ಅದು ನನ್ನ ಕರಿಯರ್ ಆಗಿರಲಿಲ್ಲ. ನನಗೆ ಕಷ್ಟ ಪಟ್ಟು ಕೆಲಸ ಮಾಡಬೇಕು ಎಂದಿರಲಿಲ್ಲ. ಮಗು ಜನಿಸಿದ ಬಳಿಕ ಮಕ್ಕಳ ಬಗ್ಗೆ ಆಲೋಚಿಸಬೇಕು ಎಂಬ ಆಲೋಚನೆ ಬಂತು. ನಟನಾಗಿ ಇರಲು ಸಾಧ್ಯವಿಲ್ಲ ಎನಿಸಿತು’ ಎಂದಿದ್ದಾರೆ ಅವರು.
‘ಕತ್ತಿ ಬತ್ತಿ ಫ್ಲಾಪ್ ಆದಾಗ ನಾನು ಕೆಲವು ವಿಚಾರಗಳನ್ನು ಅರ್ಥೈಸಿಕೊಳ್ಳಬೇಕಿತ್ತು. ಆದ್ದರಿಂದ ನಾನು ಹಿಂಬಂದಿಯಿಂದ ಕೆಲಸ ಮಾಡಲು ಪ್ರಾರಂಭಿಸಿದೆ. ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ಅತಿ ದೊಡ್ಡ ಹಿಟ್‌ಗಳು ಯಾವುವು? ನನ್ನ ಸಮಕಾಲೀನರಿಗೆ ಯಶಸ್ಸನ್ನು ತಂದುಕೊಟ್ಟ ಚಿತ್ರಗಳು ಯಾವುವು? ನಾನು ಆ ಚಲನಚಿತ್ರಗಳನ್ನು ಇಷ್ಟಪಡುತ್ತೇನೆಯೇ? ಅವುಗಳನ್ನು ನನಗೆ ನೀಡಿದ್ದರೆ ನಾನು ಆಫರ್ನ ಒಪ್ಪಿಕೊಳ್ಳುತ್ತಿದ್ದೇನೆಯೇ? ಉತ್ತರ ಯಾವಾಗಲೂ ಇಲ್ಲ. ನನಗೆ ಅದು ಸ್ಪಷ್ಟಪಡಿಸಿತು. ನಾನು ನಟಿಸಿದ ಚಿತ್ರಗಳು ಯಶಸ್ವಿಯಾಗಬೇಕೆಂದು ನಾನು ನಿಜವಾಗಿಯೂ ಬಯಸಿದ್ದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಈಗಿರುವ ಬಿಗ್ ಬಾಸ್ ಸ್ಪರ್ಧಿಗಳನ್ನೇ ಇಟ್ಟುಕೊಂಡು ಹೊಸ ರಿಯಾಲಿಟಿ ಶೋ; ಸುದೀಪ್ ಕೊಟ್ಟರು ಹಿಂಟ್
ಇಮ್ರಾನ್ ಖಾನ್ ಅವರು ಅವಂತಿಕಾ ಮಲಿಕ್ನ ಮದುವೆ ಆದರು. 2011ರಲ್ಲಿ ಮದುವೆ ಆದರು. 2019ರಲ್ಲಿ ಇವರು ಬೇರೆ ಆದರು. ಇವರಿಗೆ ಒಂದು ಮಗು ಇದೆ. ಸದ್ಯ ಅವರು ಬಣ್ಣದ ಲೋಕದಿಂದ ದೂರವೇ ಇದ್ದಾರೆ. ಅವರು ಮೊದಲಿನಷ್ಟು ಚಾರ್ಮ್ ಕೂಡ ಹೊಂದಿಲ್ಲ. ಅವರ ನಟನೆಯ ‘ಜಾನೆ ತು ಯಾ ಜಾನೇ ನಾ’ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:00 am, Mon, 13 January 25