ಆಸ್ಕರ್​ಗೆ ‘ಧುರಂಧರ್’ ಏಕೆ ಆಯ್ಕೆ ಆಗಿಲ್ಲ? ಸಿಕ್ಕಿದ್ದು 4 ವೋಟ್ ಮಾತ್ರ

99ನೇ ಆಸ್ಕರ್ ರೇಸ್‌ಗೆ ಭಾರತದಿಂದ ಮರಾಠಿಯ 'ಗೊಂದಳ್' ಚಿತ್ರ ಆಯ್ಕೆಯಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಸಿದ್ದ ರಣ್‌ವೀರ್ ಸಿಂಗ್‌ರ 'ಧುರಂಧರ್' ಚಿತ್ರಕ್ಕೆ 14 ಜ್ಯೂರಿಗಳ ಪೈಕಿ 4 ವೋಟ್ ಮಾತ್ರ ಸಿಕ್ಕಿದೆ. ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸದ ಕಾರಣ 'ಧುರಂಧರ್' ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ ಎಂದು ಜ್ಯೂರಿ ಸ್ಪಷ್ಟಪಡಿಸಿದೆ.

ಆಸ್ಕರ್​ಗೆ ಧುರಂಧರ್ ಏಕೆ ಆಯ್ಕೆ ಆಗಿಲ್ಲ? ಸಿಕ್ಕಿದ್ದು 4 ವೋಟ್ ಮಾತ್ರ
ರಣವೀರ್

Updated on: Sep 19, 2026 | 11:05 AM

ಮುಖ್ಯಾಂಶಗಳು

  • ಆಸ್ಕರ್ ಅಖಡದಲ್ಲಿ 'ಧುರಂಧರ್' ಪತನ
  • 3,000 ಕೋಟಿ ಗಳಿಸಿದ್ರೂ ಸಿಗಲಿಲ್ಲ ಆಸ್ಕರ್ ಟಿಕೆಟ್
  • 14ರಲ್ಲಿ ಬಿದ್ದಿದ್ದು ಬರಿ 4 ವೋಟ್ 

99ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್) ರೇಸ್‌ಗೆ ಭಾರತದಿಂದ ಮರಾಠಿಯ ‘ಗೋಂಧಲ್’ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿದೆ. ರಣ್‌ವೀರ್ ಸಿಂಗ್ ಅಭಿನಯದ ಸೂಪರ್ ಹಿಟ್ ‘ಧುರಂಧರ್’ ಚಿತ್ರವನ್ನು ಹಿಂದಿಕ್ಕಿ ‘ಗೋಂಧಲ್’ ಈ ಮೈಲಿಗಲ್ಲು ಸಾಧಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಸಿದ್ದ ‘ಧುರಂಧರ್’ ಆಸ್ಕರ್‌ಗೆ ಯಾಕೆ ಆಯ್ಕೆಯಾಗಲಿಲ್ಲ ಎಂಬ ಚರ್ಚೆ ಶುರುವಾಗಿತ್ತು. ಇದೀಗ ಚಲನಚಿತ್ರ ಫೆಡರೇಶನ್ ಸದಸ್ಯ ವಿವೇಕ್ ವಾಸ್ವಾನಿ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

‘ಧುರಂಧರ್’ ಸಿನಿಮಾ ಆಸ್ಕರ್ ಅರ್ಹತೆಗೆ ಸೂಕ್ತವಾಗಿರಲಿಲ್ಲ ಎಂದು ಜ್ಯೂರಿ ಸದಸ್ಯ ವಿವೇಕ್ ವಾಸ್ವಾನಿ ತಿಳಿಸಿದ್ದಾರೆ. ಆಯ್ಕೆ ಮಂಡಳಿಯಲ್ಲಿದ್ದ ಕೆಲವರಿಗೆ ಈ ಸಿನಿಮಾ ಇಷ್ಟವಾಗಿತ್ತು. ಆದರೆ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿಷಯದಲ್ಲಿ ಚಿತ್ರ ಹಿಂದುಳಿದಿತ್ತು. ಹೀಗಾಗಿ ಅಂತಿಮ ನಿರ್ಧಾರದಲ್ಲಿ ಈ ಚಿತ್ರಕ್ಕೆ ಆಸ್ಕರ್ ಟಿಕೆಟ್ ಸಿಗಲಿಲ್ಲ.

ಒಟ್ಟು 14 ಜನರಿದ್ದ ಜ್ಯೂರಿ ತಂಡದಲ್ಲಿ ‘ಧುರಂಧರ್’ ಪರವಾಗಿ ಮತ ಹಾಕಿದ್ದು ನಾಲ್ವರು ಮಾತ್ರ. ಭಾರತದಿಂದ ಸಲ್ಲಿಕೆಯಾಗಿದ್ದ ಒಟ್ಟು 33 ಸಿನಿಮಾಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಮರಾಠಿಯ ‘ಗೋಂಧಲ್’, ‘ಅಂಗ್’ ಮತ್ತು ‘ಮೈನೆ ವಾಪಸ್ ಆಯೇಗಾ’ ಚಿತ್ರಗಳು ಕೊನೆ ಹಂತ ತಲುಪಿದ್ದವು. ಇವುಗಳಲ್ಲಿ ‘ಗೋಂಧಲ್’ ಅಂತಿಮವಾಗಿ ಆಯ್ಕೆಯಾಯಿತು.

ಸಂತೋಷ್ ದವಾಖರ್ ನಿರ್ದೇಶನದ ‘ಗೋಂಧಲ್’ ಸಿನಿಮಾ ಮಹಾರಾಷ್ಟ್ರದ ಸಾಂಪ್ರದಾಯಿಕ ಜಾನಪದ ಸಂಸ್ಕೃತಿಯ ಹಿನ್ನೆಲೆ ಹೊಂದಿದೆ. ಈ ಚಿತ್ರದ ಸಾಂಸ್ಕೃತಿಕ ಹಿನ್ನೆಲೆ ಜ್ಯೂರಿ ಸದಸ್ಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಈ ಸಿನಿಮಾ ಈಗಾಗಲೇ ಪ್ರಶಸ್ತಿ ಬಾಚಿಕೊಂಡಿದೆ. ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:  ‘ಧುರಂಧರ್’ ಸಿನಿಮಾದಲ್ಲಿ ಕಥೆಯೇ ಇಲ್ಲ: ಸೂಪರ್ ಹಿಟ್ ಚಿತ್ರವನ್ನು ಟೀಕಿಸಿದ ನಿರ್ದೇಶಕ

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸರಣಿಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 3,000 ಕೋಟಿ ರೂಪಾಯಿ ಗಳಿಸಿದ್ದವು. ರಣ್‌ವೀರ್ ಸಿಂಗ್ ಜೊತೆಗೆ ಸಂಜಯ್ ದತ್ ಹಾಗೂ ಮಾಧವನ್ ಅಂತಹ ದೊಡ್ಡ ತಾರಾಗಣವೇ ಚಿತ್ರದಲ್ಲಿತ್ತು. ಆದರೆ ಆಸ್ಕರ್ ತಲುಪಲು ಕೇವಲ ಕಮರ್ಷಿಯಲ್ ಗೆಲುವು ಸಾಲದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us