ವರುಣ್ ಧವನ್ ಜೊತೆ ಓಡಿ ಹೋಗಲು ಬಂದಿದ್ದ ಪ್ರಭಾವಿ ವ್ಯಕ್ತಿಯ ಪತ್ನಿ

|

Updated on: Dec 22, 2024 | 3:09 PM

ಕ್ರಿಸ್​ಮಸ್​ ಪ್ರಯುಕ್ತ ಡಿಸೆಂಬರ್​ 25ರಂದು ‘ಬೇಬಿ ಜಾನ್’ ಸಿನಿಮಾ ರಿಲೀಸ್​ ಆಗುತ್ತಿದೆ. ಈ ಸಿನಿಮಾದಲ್ಲಿ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಅವರು ಜೋಡಿಯಾಗಿ ನಟಿಸಿದ್ದಾರೆ. ಮಾಸ್ ಪಾತ್ರದಲ್ಲಿ ವರುಣ್ ಧವನ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ವರುಣ್ ಧವನ್ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು, ಕೆಲವು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವರುಣ್ ಧವನ್ ಜೊತೆ ಓಡಿ ಹೋಗಲು ಬಂದಿದ್ದ ಪ್ರಭಾವಿ ವ್ಯಕ್ತಿಯ ಪತ್ನಿ
Varun Dhawan
Follow us on

ಬಾಲಿವುಡ್​ ನಟ ವರುಣ್ ಧವನ್ ಅಭಿನಯದ ‘ಬೇಬಿ ಜಾನ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್​ 25ರಂದು ಈ ಸಿನಿಮಾ ತೆರೆಕಾಣಲಿದೆ. ಈ ಪ್ರಯುಕ್ತ ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ವರುಣ್​ ಧವನ್ ಅವರು ಒಂದು ಭಯಾನಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಪ್ರಭಾವಿ ವ್ಯಕ್ತಿಯ ಹೆಂಡತಿ ಬಂದು ವರುಣ್ ಧವನ್ ಜೊತೆ ಓಡಿಹೋಗಲು ಸಿದ್ಧವಾಗಿದ್ದರು. ನಟನನ್ನು ಫಾಲೋ ಮಾಡಿಕೊಂಡು ಬಂದಿದ್ದ ಆ ಮಹಿಳೆ, ಬಲವಂತವಾಗಿ ಮನೆಯ ಒಳಗೆ ಪ್ರವೇಶಿಸಿದ್ದರು. ಆ ಸಂದರ್ಭ ತುಂಬಾ ಭಯಾನಕವಾಗಿತ್ತು ಎಂದು ವರುಣ್ ಧವನ್ ಹೇಳಿದ್ದಾರೆ.

‘ಆ ಮಹಿಳೆ ಓರ್ವ ಪ್ರಭಾವಿ ವ್ಯಕ್ತಿಯ ಹೆಂಡತಿ ಆಗಿದ್ದರು. ಆ ವ್ಯಕ್ತಿಯ ಸ್ಥಾನ ಏನು ಎಂಬುದನ್ನು ನಾನು ಹೇಳುವುದಿಲ್ಲ. ಆದರೆ ಆತ ತುಂಬಾ ದೊಡ್ಡ ಮನುಷ್ಯ ಅಂತೂ ಹೌದು. ಅವರ ಹೆಂಡತಿಯನ್ನು ಯಾರೋ ದಾರಿ ತಪ್ಪಿಸಿದ್ದರು. ನನ್ನ ಹೆಸರು ಹೇಳಿಕೊಂಡು ಆಕೆಯ ಜೊತೆ ಯಾರೋ ಮಾತನಾಡಿದ್ದರು. ನನ್ನ ಮನೆಯ ಬಗ್ಗೆ ಆಕೆಗೆ ಎಲ್ಲವೂ ತಿಳಿದಿತ್ತು’ ಎಂದಿದ್ದಾರೆ ವರುಣ್ ಧವನ್.

‘ನಾನು ಆಕೆಯೊಂದಿಗೆ ಓಡಿಹೋಗಲು ಸಿದ್ಧವಾಗಿದ್ದೇನೆ ಎಂದು ಆ ಮಹಿಳೆ ಭಾವಿಸಿದ್ದರು. ಆ ಕ್ಷಣ ಭಯಾನಕವಾಗಿತ್ತು. ಆಗ ನಾನು ಪೊಲೀಸರಿಗೆ ಮಾಹಿತಿ ನೀಡಬೇಕಾಯಿತು. ಮಹಿಳಾ ಕಾನ್ಸ್​ಟೇಬಲ್​ ಬಂದು ಪರಿಸ್ಥಿತಿ ನಿಯಂತ್ರಿಸಿದ್ದರು’ ಎಂದು ವರುಣ್ ಧವನ್ ಅವರು ಹೇಳಿದ್ದಾರೆ. ಪುರುಷರಿಗೆ ಇಷ್ಟೆಲ್ಲ ತೊಂದರೆ ಆಗುತ್ತದೆ ಎಂದರೆ ಮಹಿಳೆಯರ ಪರಿಸ್ಥಿತಿ ಯಾವ ರೀತಿ ಇರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಾರ್ಟಿಯಲ್ಲಿ ವರುಣ್ ಧವನ್ ಜೊತೆ ಸಮಂತಾ ಮಸ್ತ್ ಡ್ಯಾನ್ಸ್

ಸಾರ್ವಜನಿಕ ಸ್ಥಳಗಳಲ್ಲಿ ವರುಣ್​ ಧವನ್ ಜೊತೆ ಕೆಲವು ಅಭಿಮಾನಿಗಳು ಕೆಟ್ಟದಾಗಿ ನಡೆದುಕೊಂಡಿದ್ದುಂಟು. ಮಹಿಳಾ ಅಭಿಮಾನಿಯೊಬ್ಬರು ವರುಣ್ ಧವನ್​ಗೆ ಬಲವಂತವಾಗಿ ಕಿಸ್ ಮಾಡಿದ್ದರು. ಕೆಲವರು ನಟನ ಹಿಂಬದಿಗೆ ಚಿವುಟಿದ್ದರಂತೆ. ‘ನನಗೇ ಈ ರೀತಿ ಆಗುತ್ತಿದೆ ಎಂದರೆ, ಮಹಿಳೆಯರ ಸ್ಥಿತಿ ಇನ್ನೂ ಶೋಚನೀಯ ಆಗಿರುತ್ತದೆ’ ಎಂದು ವರುಣ್ ಧವನ್ ಅವರು ಹೇಳಿದ್ದಾರೆ. ಹಲವು ಸಿನಿಮಾಗಳು ವರುಣ್ ಧವನ್ ಕೈಯಲ್ಲಿ ಇವೆ. ‘ಬೇಬಿ ಜಾನ್’ ಸಿನಿಮಾಗೆ ಜನರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯಲು ಅವರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.