ಕತ್ರಿನಾ ರೀತಿ ಕಾಣೋದೇ ಮುಳುವಾಯ್ತು; ನಟಿಯ ವೃತ್ತಿಜೀವನವೇ ಕೊನೆ ಆಯ್ತು

| Updated By: ಮಂಜುನಾಥ ಸಿ.

Updated on: Aug 01, 2024 | 4:01 PM

ಸಲ್ಮಾನ್ ಖಾನ್, ತೆರೆಗೆ ಪರಿಚಯಿಸಿದ ನಟಿ ಜರೀನಾ ಖಾನ್ ಆರಂಭದಲ್ಲಿ ಸಖತ್ ಸದ್ದು ಮಾಡಿದರು. ಕತ್ರಿನಾ ಕೈಫ್ ರೀತಿ ಕಾಣುತ್ತಾರೆಂಬ ಕಾರಣಕ್ಕೆ ಸಖತ್ ಸುದ್ದಿಯಾದರು. ಆದರೆ ಮುಂದೆ ಅದೇ ಆಕೆಗೆ ಮುಳುವಾಯ್ತು. ಹೇಗೆ?

ಕತ್ರಿನಾ ರೀತಿ ಕಾಣೋದೇ ಮುಳುವಾಯ್ತು; ನಟಿಯ ವೃತ್ತಿಜೀವನವೇ ಕೊನೆ ಆಯ್ತು
Follow us on

ಪ್ರಪಂಚದಲ್ಲಿ ಒಬ್ಬರಂತೆ ಏಳು ಜನರಿರುತ್ತಾರೆ ಎಂಬ ನಂಬಿಕೆ ಇದೆ. ಆದರೆ ಸಿನಿಮಾ ನಟ-ನಟಿಯರ ವಿಷಯದಲ್ಲಿ ಇದು ಸುಳ್ಳು, ಅವರಂತೆ ಹೇರ್​ಸ್ಟೈಲ್, ಮುಖಚಹರೆ ಬದಲಿಸಿಕೊಳ್ಳುವವರು ಬಹಳಷ್ಟು ಜನರು ಇದ್ದಾರೆ. ಭಾರತದಲ್ಲೇ ಹುಡುಕಿದರೆ ಜೂನಿಯರ್ ಐಶ್ವರ್ಯಾ ರೈಗಳು 50 ಕ್ಕೂ ಹೆಚ್ಚು ಮಂದಿ ಸಿಗುತ್ತಾರೇನೋ. ಸ್ಟಾರ್ ನಟಿಯರಂತೆ ಕಾಣುವವರನ್ನು ಹುಡುಕಿ ತಂದು ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಸಹ ನೀಡಲಾಗುತ್ತದೆ. ಆದರೆ ಹೀಗೆ ಮತ್ತೊಬ್ಬರಂತೆ ಅದರಲ್ಲೂ ಸ್ಟಾರ್ ನಟ-ನಟಿಯರಂತೆ ಕಾಣುವುದು ಮುಳುವು ಸಹ ಆಗುತ್ತದೆ. ಕತ್ರಿನಾ ಕೈಫ್ ರೀತಿ ಕಾಣುತ್ತಾರೆ ಎಂಬ ಕಾರಣಕ್ಕೆ ಒಬ್ಬ ನಟಿಯ ವೃತ್ತಿ ಜೀವನವೇ ಕೊನೆಯಾಗಿದೆ. ಆ ನಟಿಯ ಪರಿಚಯ ಇಲ್ಲಿದೆ.

2010ರಲ್ಲಿ ಸಲ್ಮಾನ್ ಖಾನ್ ಅವರು ಝರೀನಾ ಖಾನ್ ಅವರನ್ನು ಬಾಲಿವುಡ್​ಗೆ ಪರಿಚಯಿಸಿದರು. ಝರೀನಾಗೆ ಹಾಗೂ ಬಾಲಿವುಡ್ ನಟಿ ಕತ್ರಿನಾ ಕೈಫ್​ಗೆ ಹೋಲಿಕೆ ಇತ್ತು. ಅವರು ಕತ್ರಿನಾ ಕೈಫ್ ಸಹೋದರಿ ಎಂಬ ರೀತಿಯಲ್ಲಿ ಎಲ್ಲರೂ ಬಿಂಬಿಸಿದರು. ಝರೀನಾ ನಟಿಸಿದ ಮೊದಲ ಸಿನಿಮಾ ‘ವೀರ್’. ಈ ಚಿತ್ರಕ್ಕೆ ಭರ್ಜರಿ ಹೈಪ್ ಏನೋ ಸಿಕ್ಕಿತ್ತು. ಆದರೆ, ಸಿನಿಮಾ ಅಂದುಕೊಂಡ ರೀತಿಯಲ್ಲಿ ಯಶಸ್ಸು ಕಂಡಿಲ್ಲ. ಝರೀನಾ ಬದುಕು ಆ ಬಳಿಕ ಅಂದುಕೊಂಡಂತೆ ಸಾಗಲಿಲ್ಲ. ಅವರು ಈಗ ಈ ಬಗ್ಗೆ ಮಾತನಾಡಿದ್ದಾರೆ. ಕತ್ರಿನಾ ಜೊತೆ ಹೋಲಿಕೆ ಮಾಡಿದ್ದೇ ಅವರಿಗೆ ತೊಂದರೆ ಆಯಿತು ಎಂದಿದ್ದಾರೆ.

‘ವೀರ್ ಸಿನಿಮಾ ಬಳಿಕ ನನ್ನ ಜೀವನ ಕಷ್ಟ ಆಯಿತು. ನಾನು ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ನನ್ನನ್ನು ಕತ್ರಿನಾ ಜೊತೆ ಹೋಲಿಕೆ ಮಾಡುತ್ತಿದ್ದಾರೆ ಎಂಬ ವಿಚಾರ ನನಗೆ ಆರಂಭದಲ್ಲಿ ಖುಷಿ ನೀಡುತ್ತಿತ್ತು. ಆದರೆ, ದಿನ ಕಳೆದಂತೆ ಈ ವಿಚಾರದಿಂದ ತೊಂದರೆ ಆಗುತ್ತಾ ಬಂತು. ನನ್ನನ್ನು ಕತ್ರಿನಾ ಜೊತೆ ಹೋಲಿಕೆ ಮಾಡಿ ಟೀಕಿಸಲು ಆರಂಭಿಸಿದರು. ಇದು ನನಗೆ ಮುಳುವಾಯಿತು. ನಾನು ಇಂಡಸ್ಟ್ರಿಯಲ್ಲಿ ಕಳೆದ ಹೋದ ಮಗುವಿನಂತೆ ಭಾಸವಾಯಿತು. ಸಲ್ಮಾನ್ ಖಾನ್ ನನ್ನನ್ನು ಲಾಂಚ್ ಮಾಡಿದ್ದಾರೆ ಎಂಬ ಕಾರಣಕ್ಕೆ ನನಗೆ ಧಿಮಾಕು ಎಂದೆಲ್ಲ ಜನರು ಮಾತನಾಡಿಕೊಂಡರು’ ಎಂದಿದ್ದಾರೆ ಝರೀನಾ.

ಇದನ್ನೂ ಓದಿ:ಸಲ್ಮಾನ್ ಖಾನ್​ನ ಭೇಟಿಯಾದ್ರಾ ಯಶ್? ವೈರಲ್ ಫೋಟೋದ ಹಿಂದಿನ ಅಸಲಿಯತ್ತಿದು..

‘ನಾನು ನನ್ನ ಮನೆಯಿಂದ ಹೊರಗೆ ಹೋಗಲು ಭಯಪಡುತ್ತಿದ್ದೆ. ನನ್ನ ಬಟ್ಟೆ ಬಗ್ಗೆ, ನನ್ನ ಬಗ್ಗೆ ಜನರು ಕೆಟ್ಟ ಕಮೆಂಟ್ ಮಾಡುತ್ತಿದ್ದರು. ದಿನ ಕಳೆದಂತೆ ಕತ್ರಿನಾ ಜೊತೆಗಿನ ಹೋಲಿಕೆ ನೆಗೆಟಿವ್ ಆಯಿತು. ನನಗೆ ಸಾಕಷ್ಟು ಹೆಸರುಗಳನ್ನು ನೀಡಲಾಯಿತು. ನನಗೆ ಮನೆಯಲ್ಲಿ ಕುಳಿತರೆ ಸಾಕು ಎಂಬ ರೀತಿ ಆಯಿತು. ನಾನು ಸೋತು ಹೋದೆ’ ಎಂದಿದ್ದಾರೆ ಅವರು,

‘ವೀರ್ ಬಳಿಕ ಸಿನಿಮಾ ಆಫರ್ಗಳೇ ಬರಲಿಲ್ಲ. ‘ಕ್ಯಾರೆಕ್ಟರ್ ಡೀಲಾ’ ಹಾಡಿನ ಬಳಿಕ ನನ್ನ ಬಗ್ಗೆ ಇರುವ ಭಾವನೆ ಬದಲಾಯಿತು. ನನ್ನ ಬಳಿ ಬಂದ ಎಲ್ಲ ಕೆಲಸವನ್ನು ಮಾಡಿದೆ. ನಾನು ಶ್ರೀಮಂತ ಕುಟುಂಬದಿಂದ ಬಂದ ವ್ಯಕ್ತಿ ಅಲ್ಲ. ನಮ್ಮ ಮನೆಯಲ್ಲಿ ನಾನು ಮಾತ್ರ ದುಡಿಯುವ ವ್ಯಕ್ತಿ. ನನ್ನ ಮನೆ ನಡೆಸಲು ನನಗೆ ಒಂದು ಜಾಬ್ ಬೇಕಿತ್ತು. ಆ ಸಮಯದಲ್ಲಿ ಹೇಟ್ ಸ್ಟೋರಿ ಬಂತು. ಅದು ನನ್ನ ಜೀವನದಲ್ಲಿ ಎದುರಿಸಿದ ವಿಚಿತ್ರ ಸಮಯ’ ಎಂದಿದ್ದಾರೆ ಅವರು. ಇತ್ತೀಚೆಗೆ ಅವರು ಯಾವುದೇ ಹೊಸ ಸಿನಿಮಾದಲ್ಲಿ ನಟಿಸಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ