ಫ್ರಾನ್ಸ್ನಲ್ಲಿ ‘ಕಾನ್ ಸಿನಿಮೋತ್ಸವ 2022’ (Cannes Film Festival 2022) ಅದ್ದೂರಿಯಾಗಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತದ ಪೂಜಾ ಹೆಗ್ಡೆ, ದೀಪಿಕಾ ಪಡುಕೋಣೆ (Deepika Padukone) ಮೊದಲಾದವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈಗ ಕೆಂಪು ಹಾಸಿನ ಮೇಲೆ ಮುಜುಗರ ತರುವ ಘಟನೆ ಒಂದು ನಡೆದಿದೆ. ಮಹಿಳೆಯೊಬ್ಬರು ಈ ರೆಡ್ ಕಾರ್ಪೆಟ್ ಮೇಲೆ ಬೆತ್ತಲಾಗಿ ನಡೆದಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಬೆತ್ತಲಾಗಿ ಓಡಾಡಿದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.
ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ರಷ್ಯಾ ಮಾಡಿದ ದಾಳಿಗೆ ಉಕ್ರೇನ್ ಕಂಗಾಲಾಗಿದೆ. ಉಕ್ರೇನ್ ಮಹಿಳೆಯರನ್ನು ರೇಪ್ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಲೇ ಇದೆ. ಈ ದಬ್ಬಾಳಿಕೆಯನ್ನು ವಿರೋಧಿಸಿ ಕಾನ್ ಫಿಲ್ಮ್ ಫೆಸ್ಟಿವಲ್ ನಡೆಯುತ್ತಿರುವ ಹೊರ ಭಾಗದಲ್ಲಿ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನಾ ನಿರತ ಯುವತಿಯೊಬ್ಬಳು ತನ್ನ ಬೆತ್ತಲೆ ದೇಹದ ಮೇಲೆ ‘ನಮ್ಮನ್ನು ರೇಪ್ ಮಾಡುವುದನ್ನು ನಿಲ್ಲಿಸಿ’ ಎಂದು ಪೇಂಟ್ನಲ್ಲಿ ಬರೆದುಕೊಂಡು ರೆಡ್ ಕಾರ್ಪೆಟ್ಮೇಲೆ ನಡೆದಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ದೀಪಿಕಾ, ಪ್ರಿಯಾಂಕಾ ರೀತಿ ಹಾಲಿವುಡ್ಗೆ ಹೋಗ್ತಾರಾ ಕಂಗನಾ? ಖಡಕ್ ಉತ್ತರ ನೀಡಿದ ‘ಧಾಕಡ್’ ನಟಿ
ಕಾನ್ ಸಿನಿಮೋತ್ಸವ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದೆ. ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಇದು ಕೂಡ ಒಂದು. ಈ ಫಿಲ್ಮ್ ಫೆಸ್ಟಿವಲ್ನಲ್ಲಿ ತಮ್ಮ ಸಿನಿಮಾ ಪ್ರಸಾರ ಕಾಣಲಿ ಎಂದು ಅನೇಕರು ಆಶಿಸುತ್ತಾರೆ. ಅಂತಹ ಅವಕಾಶ ಸಿಕ್ಕರೆ ನಿಜಕ್ಕೂ ಅದು ಅದೃಷ್ಟವೇ ಸರಿ. ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಈ ರೀತಿಯ ಘಟನೆ ನಡೆದಿರುವುದು ಅನೇಕರಿಗೆ ಮುಜುಗರ ತಂದಿದೆ.
ಫ್ರಾನ್ಸ್ನಲ್ಲಿ ಮೇ 17ರಂದು ಕಾನ್ ಫಿಲ್ಮ್ ಫೆಸ್ಟಿವಲ್ ಆರಂಭ ಆಗಿದೆ. ಮೇ 28ರ ವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ವಿಶ್ವದ ನಾನಾ ಕಡೆಗಳಿಂದ ಕಲಾವಿದರು ಆಗಮಿಸಿದ್ದಾರೆ. ಕನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಜ್ಯೂರಿ ಆಗಿ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅವರು ಈ ಫಿಲ್ಮ್ ಫೆಸ್ಟಿವಲ್ನಲ್ಲಿ ಕಾಣಿಸಿಕೊಂಡ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಾರಿ ಕಾನ್ ಚಿತ್ರೋತ್ಸವದ ಜ್ಯೂರಿ ತಂಡದಲ್ಲಿ ದೀಪಿಕಾ ಪಡುಕೋಣೆ ಜೊತೆ ‘ಐರನ್ ಮ್ಯಾನ್ 3’ ಸಿನಿಮಾ ಖ್ಯಾತಿಯ ನೂಮಿ ರಪಾಸ್, ‘ಶೆರ್ಲಾಕ್ ಹೋಮ್ಸ್: ಎ ಗೇಮ್ ಆಫ್ ಶಾಡೋಸ್’ ಖ್ಯಾತಿಯ ರೆಬಿಕಾ ಹಾಲ್, ಅಸ್ಗರ್ ಫರ್ಹಾದಿ, ಜಾಸ್ಮಿನ್ ತ್ರಿಂಕಾ, ಜೆಫ್ ನಿಕೋಲ್ಸ್ ಮುಂತಾದವರು ಇದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.