AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರೆ ಮೇಲೆ ನಾಯಕಿ, ತೆರೆ ಹಿಂದೆ ರಾಕ್ಷಸಿ: ಮನೆಕೆಲಸದವರ ಮೇಲೆ ನಟಿಯ ದೌರ್ಜನ್ಯ

Dimple Hayathi: ಸಿನಿಮಾ ನಟ-ನಟಿಯರು ತೆರೆ ಮೇಲೆ ಸಕಲಗುಣ ಸಂಪನ್ನರಂತೆ ತೋರಿಸಿಕೊಳ್ಳುತ್ತಾರೆ. ಆದರೆ ನಿಜ ಜೀವನದಲ್ಲಿ ಅವರ ವ್ಯಕ್ತಿತ್ವ ಬೇರೆಯದ್ದೇ ಆಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ತೆಲುಗು ಚಿತ್ರರಂಗ ಯುವನಟಿ ಡಿಂಪಲ್ ಹಯಾತಿ. ಇದೀಗ ನಟಿ ಡಿಂಪಲ್ ಹಯಾತಿ ಮತ್ತು ಆಕೆಯ ಪತಿಯ ವಿರುದ್ಧ ದೌರ್ಜನ್ಯ, ಹಲ್ಲೆ, ಬೆದರಿಕೆ ಪ್ರಕರಣಗಳು ದಾಖಲಾಗಿವೆ.

ತೆರೆ ಮೇಲೆ ನಾಯಕಿ, ತೆರೆ ಹಿಂದೆ ರಾಕ್ಷಸಿ: ಮನೆಕೆಲಸದವರ ಮೇಲೆ ನಟಿಯ ದೌರ್ಜನ್ಯ
Dimple Hayathi
ಮಂಜುನಾಥ ಸಿ.
|

Updated on: Oct 01, 2025 | 1:05 PM

Share

ಸಿನಿಮಾ ನಟ, ನಟಿಯರು ತೆರೆಯ ಮೇಲೆ ಸರ್ವಗುಣ ಸಂಪನ್ನರಂತೆ ಕಾಣಿಸಿಕೊಳ್ಳುತ್ತಾರೆ. ಬಡವರಿಗೆ ಸಹಾಯ ಮಾಡುವುದು, ದಮನಿತರಿಗೆ ರಕ್ಷಣೆ ನೀಡುವುದು ಮಾನವೀಯ ಮೌಲ್ಯಗಳ ಬೋಧನೆ ಮಾಡುವುದು ಇತರೆ, ಇತರೆ. ಆದರೆ ನಿಜ ಜೀವನದಲ್ಲಿ ಹಲವಾರು ನಟ-ನಟಿಯರು ಇದಕ್ಕೆ ವಿರುದ್ಧ. ಡಿಂಪಲ್ ಹಯಾತಿ, ತೆಲುಗು, ತಮಿಳು ಚಿತ್ರರಂಗದ ಜನಪ್ರಿಯ ನಟಿ. ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಟಿಯ ವಿರುದ್ಧ ಪ್ರಕರಣವೊಂದು ದಾಖಲಾಗಿದ್ದು, ಹೀನ ಕೃತ್ಯಯೊಂದನ್ನು ಡಿಂಪಲ್ ಎಸಗಿದ್ದಾರೆಂಬ ಆರೋಪ ಎದುರಾಗಿದೆ.

ಡಿಂಪಲ್ ಹಯಾತಿ ತಮ್ಮ ಪತಿ ಡೇವಿಡ್ ಜೊತೆಗೆ ಹೈದರಾಬಾದ್​​ನ ಶೈಖ್​​ಪೇಟ್​​ನಲ್ಲಿರುವ ವೆಸ್ಟ್​ವೂಡ್ ಅಪಾರ್ಟ್​​ಮೆಂಟ್​​ನಲ್ಲಿ ನೆಲೆಸಿದ್ದಾರೆ. ಸಿನಿಮಾ ತಾರೆಯರು ಮನೆಗೆಲಸಕ್ಕೆ ಬಡ ನೌಕರರನ್ನು ನೇಮಿಸಿಕೊಳ್ಳುವುದು ಸಾಮಾನ್ಯ. ಕೆಲವು ಸಂಸ್ಥೆಗಳು ಸೆಲೆಬ್ರಿಟಿಗಳಿಗೆ, ಶ್ರೀಮಂತರಿಗೆ ಮನೆಗೆಲಸದವರನ್ನು ನೇಮಿಸಿ ಕೊಡುತ್ತಾರೆ. ಅಂತೆಯೇ ಡಿಂಪಲ್ ಹಯಾತಿ ಮನೆಯಲ್ಲಿ ಪ್ರಿಯಾಂಕಾ ಬಿದರ್ ಹೆಸರಿನ ಯುವತಿಯೊಬ್ಬಾಕೆ ಕೆಲಸಕ್ಕೆ ಸೇರಿಕೊಂಡಿದ್ದರು.

ಇದೀಗ ಈ ಮನೆಗೆಲಸದ ಮಹಿಳೆ ಮೇಲೆ ಡಿಂಪಲ್ ಹಯಾತಿ ಮತ್ತು ಆಕೆಯ ಪತಿ ಡೇವಿಡ್ ದೌರ್ಜನ್ಯ ಎಸಗಿದ್ದಾರೆ ಎಂಬ ದೂರು ದಾಖಲಾಗಿದೆ. ಪ್ರಿಯಾಂಕಾ, ಫಿಲಂನಗರ್ ಪೊಲೀಸ್ ಠಾಣೆಯಲ್ಲಿ ಡಿಂಫಲ್ ಹಯಾತಿ ಮತ್ತು ಡೇವಿಡ್ ವಿರುದ್ಧ ದೂರು ದಾಖಲಿಸಿದ್ದು, ಡಿಂಪಲ್ ಹಯಾತಿ ಮತ್ತು ಡೇವಿಡ್ ತಮ್ಮ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಣ್ಣ ಮದುವೆ: ‘ಉಪಾಧ್ಯಕ್ಷ’ ಸಿನಿಮಾ ನಟಿ ಮಲೈಕಾಗೆ ಸಖತ್ ಖುಷಿ

ಡಿಂಪಲ್ ಹಯಾತಿ ಮತ್ತು ಡೇವಿಡ್ ಮನೆಯಲ್ಲಿ ಕೆಲಸ ಆರಂಭಿಸಿದಾಗಿನಿಂದಲೂ ಇಬ್ಬರೂ ಸಹ ತಮ್ಮೊಟ್ಟಿಗೆ ಬಲು ತುಚ್ಛವಾಗಿ ನಡೆದುಕೊಳ್ಳುತ್ತಿದ್ದರು. ವಿನಾಕಾರಣ ಕೆಟ್ಟ ಭಾಷೆ ಬಳಸಿ ಬೈಯ್ಯುತ್ತಿದ್ದರು. ‘ನಿನ್ನ ಜೀವನ ನನ್ನ ಶೂಗೆ ಸಹ ಸಮ ಅಲ್ಲ’ ಎಂದೆಲ್ಲ ಹೇಳುತ್ತಿದ್ದರು. ಸರಿಯಾಗಿ ಊಟ ಕೊಡುತ್ತಿರಲಿಲ್ಲ. ವಿಶ್ರಾಂತಿಗೆ ಸಮಯ ಕೊಡುತ್ತಿರಲಿಲ್ಲ’ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಅವರ ನಾಯಿ ಬೊಗಳಿದ ವಿಷಯಕ್ಕೆ ಜಗಳ ಮಾಡಿದರು. ಕೆಟ್ಟ ಮಾತುಗಳಲ್ಲಿ ಬೈದರು, ನಾನು ಅವರು ಬೈಯ್ಯುತ್ತಿದ್ದಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಮುಂದಾದಾಗ ಡೇವಿಡ್ ನನ್ನಿಂದ ಮೊಬೈಲ್ ಕಿತ್ತುಕೊಂಡು ನೆಲಕ್ಕೆ ಒಗೆದು ಒಡೆದುಹಾಕಿದರು. ಬಳಿಕ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದರು. ನನ್ನ ಬಟ್ಟೆ ಸಹ ಹರಿದರು’ ಎಂದಿದ್ದಾರೆ.

ಪ್ರಿಯಾಂಕಾ ನೀಡಿರುವ ದೂರಿನಂತೆ ಫಿಲಂನಗರ್ ಪೊಲೀಸರು ಎಫ್​​ಐಆರ್ ದಾಖಲಿಸಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆ 74, 79, 351(2), 324(2) ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಶೀಘ್ರವೇ ಡಿಂಪಲ್ ಹಯಾತಿ ಮತ್ತು ಡೇವಿಡ್ ಅವರನ್ನು ವಿಚಾರಣೆ ನಡೆಸಲಿದ್ದಾರೆ.

ಡಿಂಪಲ್ ಹಯಾತಿ, ವಿಜಯವಾಡ ಮೂಲದ ಡಿಂಪಲ್ ಹಯಾತಿ 2017 ರಲ್ಲಿ ‘ಗಲ್ಫ್’ ತೆಲುಗು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ‘ದೇವಿ 2’, ‘ಗೋಲ್ಕೊಂಡ ಗಣೇಶ್’, ರವಿತೇಜ ನಟನೆಯ ‘ಖಿಲಾಡಿ’, ಗೋಪಿಚಂದ್ ನಟನೆಯ ‘ರಾಮಬಾಣಂ’, ಧನುಶ್ ನಟನೆಯ ಹಿಂದಿ ಸಿನಿಮಾ ‘ಅತರಂಗಿ ರೇ’ ಇನ್ನೂ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

4 ಕೋಟಿ ರೂ. ವಿನಾಯಿತಿ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಒಕ್ಕಲಿಗರ ಸಂಘ
4 ಕೋಟಿ ರೂ. ವಿನಾಯಿತಿ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಒಕ್ಕಲಿಗರ ಸಂಘ
ಧಾರವಾಡ ಗುಳೇದಕೊಪ್ಪ ಜಾತ್ರೆ 2026
ಧಾರವಾಡ ಗುಳೇದಕೊಪ್ಪ ಜಾತ್ರೆ 2026
ರಸ್ತೆಯಲ್ಲಿ ಸಾಕುನಾಯಿ ಮೇಲೆ ಕಾರು ಹತ್ತಿಸಿ ಕೊಂದ ಚಾಲಕ; ವಿಡಿಯೋ ವೈರಲ್
ರಸ್ತೆಯಲ್ಲಿ ಸಾಕುನಾಯಿ ಮೇಲೆ ಕಾರು ಹತ್ತಿಸಿ ಕೊಂದ ಚಾಲಕ; ವಿಡಿಯೋ ವೈರಲ್
ವಿದ್ಯಾರ್ಥಿಗಳ ಮುಂದೆಯೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆಯೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಶಿಕ್ಷಕಿ
ಬಿಡದಿ ಬಳಿ ಹಳಿತಪ್ಪಿದ ರೈಲು, ತಪ್ಪಿದ ಭಾರಿ ದುರಂತ
ಬಿಡದಿ ಬಳಿ ಹಳಿತಪ್ಪಿದ ರೈಲು, ತಪ್ಪಿದ ಭಾರಿ ದುರಂತ
ಪ್ರೀತಿ, ಮದ್ವೆ ಹೆಸರಲ್ಲಿ ಯುವಕರಿಗೆ ಗಾಳ ಹಾಕುತ್ತಿದ್ದವಳು ಮಾಡಿದ್ದೇನು?
ಪ್ರೀತಿ, ಮದ್ವೆ ಹೆಸರಲ್ಲಿ ಯುವಕರಿಗೆ ಗಾಳ ಹಾಕುತ್ತಿದ್ದವಳು ಮಾಡಿದ್ದೇನು?
ಮುಂಬೈ​​ನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜಾಗಿಂಗ್; ಕಣ್ಣೆತ್ತೂ ನೋಡದ ಜನ
ಮುಂಬೈ​​ನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜಾಗಿಂಗ್; ಕಣ್ಣೆತ್ತೂ ನೋಡದ ಜನ
ಮನೆಗಾಗಿ ಕಾಯುತ್ತಿದ್ದ ಕೋಗಿಲು ನಿವಾಸಿಗಳಿಗೆ ಬಿಗ್ ಶಾಕ್
ಮನೆಗಾಗಿ ಕಾಯುತ್ತಿದ್ದ ಕೋಗಿಲು ನಿವಾಸಿಗಳಿಗೆ ಬಿಗ್ ಶಾಕ್
ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಬಾರದ ಆಂಬುಲೆನ್ಸ್
ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಬಾರದ ಆಂಬುಲೆನ್ಸ್
ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಮೋದಿಯಿಂದ ಅಪ್ಪುಗೆಯ ಸ್ವಾಗತ