Allu Arjun: ಅಲ್ಲು ಅರ್ಜುನ್ ಬರ್ತ್ ಡೇ ವಿಚಾರದಲ್ಲಿ ಬಿತ್ತು ಕೇಸ್! ಮಧ್ಯರಾತ್ರಿ ಮೈಮರೆತಿದ್ದೇ ತಪ್ಪಾಯ್ತು
ಅಲ್ಲು ಅರ್ಜುನ್ ಜನ್ಮದಿನಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ವಿಶ್ ಮಾಡಿದ್ದರು. ಅಲ್ಲು ಅರ್ಜುನ್ ಜನ್ಮದಿನಕ್ಕೆ ಅಭಿಮಾನಿಗಳಂತೂ ಶುಭಾಶಯಗಳ ಮಳೆಯನ್ನೇ ಸುರಿಸಿದ್ದರು.
ಅಲ್ಲು ಅರ್ಜುನ್ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ಅಭಿಮಾನಿಗಳು ಅಲ್ಲು ಅರ್ಜುನ್ ಮನೆ ಎದುರು ಬಂದು ವಿಶ್ ಮಾಡಿದ್ದರು. ಅಷ್ಟೇ ಅಲ್ಲ ಅವರಿಗೆ ವಿಶೇಷ ಗಿಫ್ಟ್ ಕೂಡ ಸಿಕ್ಕಿತ್ತು. ಆದರೆ, ಈ ವಿಚಾರದಲ್ಲಿ ಅಭಿಮಾನಿಗಳಿಗೆ ಸಂಕಷ್ಟ ಎದುರಾಗಿದೆ. ಬರ್ತ್ ಡೇ ಸೆಲಬ್ರೇಷನ್ ವಿಚಾರಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಅಲ್ಲು ಅರ್ಜುನ್ ಜನ್ಮದಿನಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ವಿಶ್ ಮಾಡಿದ್ದರು. ಅಲ್ಲು ಅರ್ಜುನ್ ಜನ್ಮದಿನಕ್ಕೆ ಅಭಿಮಾನಿಗಳಂತೂ ಶುಭಾಶಯಗಳ ಮಳೆಯನ್ನೇ ಸುರಿಸಿದ್ದರು. ಅಲ್ಲು ಅರ್ಜುನ್ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಮನೆ ಎದುರು ಫ್ಯಾನ್ಸ್ ಜಮಾಯಿಸಿದ್ದರು. ಗೇಟ್ ಬಳಿ ಬಂದು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಭೇಟಿಮಾಡಿದ್ದರು. ಫ್ಯಾನ್ಸ್ ಅಲ್ಲುಗೆ ಗಿಡವನ್ನು ಗಿಫ್ಟ್ ಆಗಿ ನೀಡಿದ್ದರು.
ಇದಕ್ಕೂ ಮೊದಲು ಅಭಿಮಾನಿ ಬಳಗ ರಾತ್ರಿ ವೇಳೆ ಅಲ್ಲು ಅರ್ಜುನ್ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿ ಸಂಘದ ಅಧ್ಯಕ್ಷ ಪ್ರಶಾಂತ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಾಗಿದೆ. ಇದಕ್ಕೂ ಕಾರಣವಿದೆ. ಇವರು ಮಧ್ಯರಾತ್ರಿ ವೇಳೆ ಅನುಮತಿ ಇಲ್ಲದೆ ಪಟಾಕಿ ಹೊಡೆದು ಸಂಭ್ರಮಿಸಿದ್ದರು. ಅಲ್ಲದೆ, ನೂರಾರು ಜನರು ಒಟ್ಟಾಗಿ ಸೇರಿದ್ದರು.
ಇದನ್ನು ಗಮಿಸಿರುವ ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಶಾಂತ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಕೊರೊನಾ ನಿಯಮ ಉಲ್ಲಂಘನೆ ಮಾಡಿರುವ ಆರೋಪವನ್ನು ಇವರ ಮೇಲೆ ಹೇರಲಾಗಿದೆ. ಪೊಲೀಸರು ಇವರನ್ನು ಬಂಧಿಸಿದ್ದಾರೆಯೇ ಅಥವಾ ಇಲ್ಲವೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ದೇಶದಲ್ಲಿ ಕೊರೊನಾ ವೈರಸ್ ಮಿತಿ ಮೀರಿ ಹರಡುತ್ತಿದೆ. ಹೀಗಾಗಿ, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಹೀಗಿರುವಾಗ ಅಭಿಮಾನಿಗಳು ಈ ರೀತಿ ನಡೆದುಕೊಳ್ಳುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: Happy Birthday Allu Arjun: ಅಲ್ಲು ಅರ್ಜುನ್ ಜನ್ಮ ದಿನಕ್ಕೆ ಅಭಿಮಾನಿಗಳಿಂದ ಸಿಕ್ತು ಮರೆಯಲಾರದ ಗಿಫ್ಟ್
Published On - 5:16 pm, Fri, 9 April 21