Happy Birthday Allu Arjun: ಅಲ್ಲು ಅರ್ಜುನ್ ಜನ್ಮ ದಿನಕ್ಕೆ ಅಭಿಮಾನಿಗಳಿಂದ ಸಿಕ್ತು ಮರೆಯಲಾರದ ಗಿಫ್ಟ್
ಅಲ್ಲು ಅರ್ಜುನ್ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಫ್ಯಾನ್ಸ್ ಮನೆ ಎದುರು ನೆರೆದಿದ್ದರು. ಗೇಟ್ ಬಳಿ ಬಂದು ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಹಾಯ್ ಎಂದಿದ್ದಾರೆ. ಸದ್ಯ, ಈ ಫೋಟೋ ಕೂಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಲ್ಲು ಅರ್ಜುನ್ಗೆ ಇಂದು ಜನ್ಮದಿನದ ಸಂಭ್ರಮ. ಸ್ಟಾರ್ ನಟನ ಜನ್ಮದಿನಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್ ಸೇರಿ ಅನೇಕರು ಶುಭಾಶಯ ತಿಳಿಸಿದ್ದಾರೆ. ಅಲ್ಲು ಅರ್ಜುನ್ ಜನ್ಮದಿನಕ್ಕೆ ಅಭಿಮಾನಿಗಳಂತೂ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. #HBDAlluArjun ಎನ್ನುವ ಹ್ಯಾಶ್ಟ್ಯಾಗ್ ಅಡಿಯಲ್ಲಿ ಸಾಲು ಸಾಲು ಟ್ವೀಟ್ ಮಾಡುತ್ತಿದ್ದಾರೆ. ಪರಿಣಾಮ ಈ ಹ್ಯಾಶ್ಟ್ಯಾಗ್ ಟ್ರೆಂಡಿಗ್ನಲ್ಲಿ ಬಂದಿದೆ.
ಅಲ್ಲು ಅರ್ಜುನ್ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಫ್ಯಾನ್ಸ್ ಮನೆ ಎದುರು ನೆರೆದಿದ್ದರು. ಗೇಟ್ ಬಳಿ ಬಂದು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಭೇಟಿಮಾಡಿದ್ದಾರೆ. ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು, ಅಭಿಮಾನಿಗಳಿಂದ ಅಲ್ಲು ಅರ್ಜುನ್ಗೆ ವಿಶೇಷ ಗಿಫ್ಟ್ ಒಂದು ದೊರೆತಿದೆ. ಅಷ್ಟಕ್ಕೂ ಏನದು ಆ ಗಿಫ್ಟ್ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಅನೇಕ ಸ್ಟಾರ್ಗಳು ಗಿಡ ನೆಟ್ಟು ಪರಿಸರ ಉಳಿಸಿ ಎಂದು ಕರೆ ನೀಡಿದ್ದಾರೆ. ಇದಕ್ಕೆ ಅಲ್ಲು ಅರ್ಜುನ್ ಕೂಡ ಹೊರತಾಗಿಲ್ಲ. ಹೀಗಾಗಿ, ಅವರಿಗೆ ಅಭಿಮಾನಿಗಳು ಗಿಡವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Pics Of The Day ❤️ ?#HappyBirthdayAlluArjun Annayya ?#Pushpa #AlluArjun #PushpaTeaser #HBDAlluArjun pic.twitter.com/Cpy3N9w7nm
— Praveen™ #PushpaOnAug13 (@AlluBoyPraveen) April 8, 2021
Happy happy happiest birthday to @alluarjun sir.. ? I wish you the best of health, happiness filled with love.. ?
— Rashmika Mandanna (@iamRashmika) April 8, 2021
Team #Pushpa Wishes Icon Staar @alluarjun a very Happy Birthday ♥#HappyBirthdayAlluArjunhttps://t.co/aDJPtArXyH#PushpaRaj#ThaggedheLe ?@iamRashmika #FahadhFaasil @aryasukku @ThisIsDSP @resulp @adityamusic
పుష్ప പുഷ്പ புஷ்பா ಪುಷ್ಪ पुष्पा pic.twitter.com/MCDpEE6xI8
— Mythri Movie Makers (@MythriOfficial) April 8, 2021
ಸ್ಟಾರ್ ನಟರ ಚಿತ್ರ ಎಂದರೆ ಅವರ ಸಿನಿಮಾ ತಂಡದಿಂದ ವಿಶೇಷ ಗಿಫ್ಟ್ ಸಿಗೋದು ನಡೆದುಕೊಂಡುಬಂದ ಸಂಪ್ರದಾಯ. ಇದನ್ನು ಪುಷ್ಪ ಸಿನಿಮಾ ತಂಡ ಕೂಡ ಮುಂದುವರಿಸಿಕೊಂಡು ಹೋಗಿದೆ. ಪುಷ್ಪ ಸಿನಿಮಾ ಒಂದು ದಿನ ಮೊದಲೇ ಪುಷ್ಪ ರಾಜ್ ಪಾತ್ರ ಪರಿಚಯ ಮಾಡಿದೆ.
ವಿಶೇಷ ವಿಡಿಯೋ ಒಂದನ್ನು ರಿಲೀಸ್ ಮಾಡಲಾಗಿದ್ದು, ಈ ಸಿನಿಮಾದಲ್ಲಿ ರಕ್ತ ಚಂದನ ಕಳ್ಳ ಸಾಗಣೆಯನ್ನು ಹೇಗೆ ಮಾಡುತ್ತಾರೆ ಎನ್ನುವ ಇಂಚಿಂಚು ಮಾಹಿತಿಯನ್ನು ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಕುರಿ ಮಂದೆಯನ್ನು ಎದುರು ಬಿಟ್ಟು ಹಿಂದಿನಿಂದ ರಕ್ತಚಂದನ ಮರದ ತುಂಡನ್ನು ಕಳ್ಳ ಸಾಗಣೆಕಾರರು ಹೊತ್ತು ಬರುತ್ತಿರುವ ದೃಶ್ಯಗಳು ಭಿನ್ನ ಲೋಕಕ್ಕೆ ಕರೆದೊಯ್ಯುತ್ತವೆ. ಕಳ್ಳ ಸಾಗಣೆ ವೇಳೆ ಲಾರಿ ಚೇಸಿಂಗ್, ಅಲ್ಲು ಅರ್ಜುನ್ ಅವರ ಪೊಲೀಸರ ಜತೆಗಿನ ಫೈಟಿಂಗ್, ಜಿಗಿಯುತ್ತಲೇ ಮರದ ತುಂಡನ್ನು ಲಾರಿ ಮೇಲೆ ಹಾಕೋದು, ಪೊಲೀಸರು ಬಂದಾಗ ಸಿಳ್ಳೆ ಹೊಡೆಯೋದು, ಕಣ್ಣುಕಟ್ಟಿರುವಾಗಲೂ ಫೈಟ್ ಮಾಡೋದು ರೋಮಾಂಚನ ಮೂಡಿಸಿದೆ.
ಇದನ್ನೂ ಓದಿ: Pushpa Teaser: ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಾತ್ರ ನೋಡಿದ್ರೆ ನೀವೊಮ್ಮೆ ಬೆಚ್ಚಿ ಬೀಳ್ತೀರಾ!