Leo Trailer: ‘ಲಿಯೋ’ ಟ್ರೇಲರ್ ಪ್ರಸಾರ ಮಾಡಿ ಸಂಕಷ್ಟಕ್ಕೆ ಸಿಲುಕಿದ ಥಿಯೇಟರ್ ಮಾಲೀಕರು
ಸಿನಿಮಾಟೋಗ್ರಫಿ ಆ್ಯಕ್ಟ್ ಪ್ರಕಾರ ಸೆನ್ಸಾರ್ ಆಗದ ಕಂಟೆಂಟ್ನ ಥಿಯೇಟರ್ನಲ್ಲಿ ತೋರಿಸುವುದು ಅಪರಾಧ. ಇದನ್ನು ಕ್ರಿಮಿನಲ್ ಅಫೆನ್ಸ್ ಎಂದು ಪರಿಗಣಿಸಲಾಗುತ್ತದೆ. ಕೋರ್ಟ್ ಶಿಕ್ಷೆ ಕೂಡ ವಿಧಿಸಬಹುದು. ಈ ಕಾರಣಕ್ಕೆ ಥಿಯೇಟರ್ ಮಾಲೀಕರಿಗೆ ಸೆನ್ಸಾರ್ ಮಂಡಳಿ ನೋಟಿಸ್ ನೀಡಿದ್ದು, ತಕ್ಷಣಕ್ಕೆ ಉತ್ತರಿಸುವಂತೆ ಸೂಚಿಸಿದೆ.
ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ (Leo Movie) ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರದ ಟ್ರೇಲರ್ (Leo Trailer) ಇತ್ತೀಚೆಗೆ ರಿಲೀಸ್ ಆಗಿದೆ. ಇದನ್ನು ಪ್ರಸಾರ ಮಾಡಿದ ಥಿಯೇಟರ್ಗಳಿಗೆ ಸಂಕಷ್ಟ ಎದುರಾಗಿದೆ. ಸೆನ್ಸಾರ್ ಸರ್ಟಿಫಿಕೇಟ್ ಇಲ್ಲದೇ ಥಿಯೇಟರ್ಗಳಲ್ಲಿ ಇದನ್ನು ಬಿತ್ತರ ಮಾಡಲಾಗಿದೆ. ಈ ಕಾರಣಕ್ಕೆ ತೊಂದರೆ ಎದುರಾಗಿದೆ. ಥಿಯೇಟರ್ ಮಾಲೀಕರಿಗೆ ಸೆನ್ಸಾರ್ ಬೋರ್ಡ್ ನೋಟಿಸ್ ನೀಡಿದೆ. ಟ್ರೇಲರ್ಗಳನ್ನು ಯೂಟ್ಯೂಬ್ನಲ್ಲಿ ರಿಲೀಸ್ ಮಾಡಲು ಯಾವುದೇ ಸೆನ್ಸಾರ್ ಸರ್ಟಿಫಿಕೇಟ್ ಬೇಡ. ಆದರೆ, ಥಿಯೇಟರ್ನಲ್ಲಿ ಸಿನಿಮಾ, ಜಾಹೀರಾತು ಹಾಗೂ ಟ್ರೇಲರ್ ಬಿತ್ತರ ಮಾಡೋದಾದರೆ ಸೆನ್ಸಾರ್ ಪ್ರಮಾಣಪತ್ರ ಅತಿ ಅಗತ್ಯ. ಆದರೆ, ಪ್ರಮಾಣ ಪತ್ರ (Censor Certificate) ಸಿಗದಿದ್ದರೂ ‘ಲಿಯೋ’ ಚಿತ್ರದ ಟ್ರೇಲರ್ ಪ್ರಸಾರ ಕಂಡಿದೆ.
ಸಿನಿಮಾಟೋಗ್ರಫಿ ಆ್ಯಕ್ಟ್ ಪ್ರಕಾರ ಸೆನ್ಸಾರ್ ಆಗದ ಕಂಟೆಂಟ್ನ ಥಿಯೇಟರ್ನಲ್ಲಿ ತೋರಿಸುವುದು ಅಪರಾಧ. ಇದನ್ನು ಕ್ರಿಮಿನಲ್ ಅಫೆನ್ಸ್ ಎಂದು ಪರಿಗಣಿಸಲಾಗುತ್ತದೆ. ಕೋರ್ಟ್ ಶಿಕ್ಷೆ ಕೂಡ ವಿಧಿಸಬಹುದು. ಈ ಕಾರಣಕ್ಕೆ ಥಿಯೇಟರ್ ಮಾಲೀಕರಿಗೆ ಸೆನ್ಸಾರ್ ಮಂಡಳಿ ನೋಟಿಸ್ ನೀಡಿದ್ದು, ತಕ್ಷಣಕ್ಕೆ ಉತ್ತರಿಸುವಂತೆ ಸೂಚಿಸಿದೆ. ಈ ನೋಟಿಸ್ನಲ್ಲಿ ಸೆನ್ಸಾರ್ ಮಂಡಳಿ ‘ಲಿಯೋ’ ಚಿತ್ರವನ್ನು ಸೆನ್ಸಾರ್ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಸೆನ್ಸಾರ್ ಬೋರ್ಡ್ನಲ್ಲಿ ಲಂಚಾವತಾರ; ‘ತಕ್ಷಣಕ್ಕೆ ತನಿಖೆ ಮಾಡಿ’ ಎಂದ ಕೇಂದ್ರ ಸರ್ಕಾರ
‘ಪ್ರಮಾಣೀಕರಿಸದ ಲಿಯೋನ ಟ್ರೇಲರ್ ನೀಡಿದ್ದು ಯಾರು ಎಂಬ ವಿಚಾರವನ್ನು ತಿಳಿಸಿ. ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂಬುದಕ್ಕೆ ಕಾರಣ ನೀಡಿ ಎಂದು ಸಿಬಿಎಫ್ಸಿ ಚೆನ್ನೈ ಥಿಯೇಟರ್ಗಳಿಗೆ ಸೂಚಿಸಿದೆ. ಅಂದಹಾಗೆ, ‘ಲಿಯೋ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು/ಎ’ ಸರ್ಟಿಫಿಕೇಟ್ ನೀಡಿದೆ. 13 ಕಡೆಗಳಲ್ಲಿ ಬದಲಾವಣೆ ಮಾಡಲು ಸೂಚಿಸಿದೆ. ಈ ಬದಲಾವಣೆ ಮಾಡಿಯೇ ಸಿನಿಮಾ ರಿಲೀಸ್ ಮಾಡುವ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ.
‘ಲಿಯೋ’ ಚಿತ್ರದಲ್ಲಿ ಕಮಲ್ ಹಾಸನ್?
‘ಲಿಯೋ’ ಚಿತ್ರದಲ್ಲಿ ಕಮಲ್ ಹಾಸನ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಬೇರೆಯದೇ ರೀತಿಯ ಉತ್ತರ ನೀಡಿದ್ದರು. ‘ಇನ್ನು ಕೆಲವೇ ದಿನ. ಕೆಲವು ವಿಚಾರಗಳನ್ನು ಬೇಕಂತಲೇ ಹೇಳಿಲ್ಲ’ ಎಂದು ಅವರು ಹೇಳಿದ್ದರು. ಈ ಮೂಲಕ ಕಮಲ್ ಹಾಸನ್ ನಟನೆಯ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.
ಲಿಯೋ ಟ್ರೇಲರ್:
ಪಾತ್ರವರ್ಗದ ಬಗ್ಗೆ:
‘ಲಿಯೋ’ ಸಿನಿಮಾದಲ್ಲಿ ದಳಪತಿ ವಿಜಯ್ ನಟಿಸಿದ್ದಾರೆ. ತ್ರಿಶಾ, ಅರ್ಜುನ್ ಸರ್ಜಾ, ಗೌತಮ್ ಮೆನನ್, ಪ್ರಿಯಾ ಆನಂದ್ ಮೊದಲಾದವರು ನಟಿಸಿದ್ದಾರೆ. ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಹಳೆಯ ಕನೆಕ್ಷನ್:
ಲೋಕೇಶ್ ಕನಗರಾಜ್ ಅವರು ತಮ್ಮದೇ ಸಿನಿಮಾ ಯೂನಿವರ್ಸ್ ನಿರ್ಮಾಣ ಮಾಡಿಕೊಂಡಿದ್ದಾರೆ. ‘ಕೈದಿ’ ಹಾಗೂ ‘ವಿಕ್ರಮ್’ ಚಿತ್ರಕ್ಕೆ ಕನೆಕ್ಷನ್ ನೀಡಲಾಗಿತ್ತು. ಈ ಎರಡೂ ಸಿನಿಮಾಗಳ ಜೊತೆ ‘ಲಿಯೋ’ಗೆ ಕನೆಕ್ಷನ್ ಇದೆ ಎನ್ನಲಾಗಿದೆ. ಈ ವಿಚಾರವನ್ನು ಟ್ರೇಲರ್ನಲ್ಲಿ ತಂಡ ಬಿಟ್ಟುಕೊಟ್ಟಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.