ನಟ ಚಿರಂಜೀವಿ ಭೇಟಿಯಾಗಲು 600 ಕಿ.ಮೀ. ಸೈಕಲ್ ತುಳಿದ ಅಭಿಮಾನಿ
ಈಶ್ವರಯ್ಯ ಚಿತ್ತೂರಿನವರು. ಅಲ್ಲಿಂದ ಹೈದರಾಬಾದ್ಗೆ ಸುಮಾರು 600 ಕಿ.ಮೀ ಅಂತರ. ಈ ದೂರವನ್ನು ಕ್ರಮಿಸಲು ಅವರು 12 ದಿನ ತೆಗೆದುಕೊಂಡಿದ್ದಾರೆ.
ನೆಚ್ಚಿನ ನಟನಿಗೋಸ್ಕರ ಅಭಿಮಾನಿಗಳು ಏನು ಮಾಡೋಕೂ ರೆಡಿ ಇರುತ್ತಾರೆ. ದೂರದ ಊರುಗಳಿಂದ ನಡೆದು ಬಂದು ನೆಚ್ಚಿನ ನಟನನ್ನು ಭೇಟಿ ಮಾಡುತ್ತಾರೆ. ತಾವು ಇಷ್ಟಪಡುವ ನಟನಿಗೆ ಒಳ್ಳೆಯದಾಗಲಿ ಎಂದು ಹರಕೆ ಹೊತ್ತಿಕೊಳ್ಳುವ ಅಭಿಮಾನಿಗಳೂ ಇದ್ದಾರೆ. ಅದೇ ರೀತಿ ಈಗ ಎನ್. ಈಶ್ವರಯ್ಯ ಹೆಸರಿನ ವ್ಯಕ್ತಿ ಸುಮಾರು 600 ಕಿ.ಮೀ. ಸೈಕಲ್ ತುಳಿದಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟ ಮೆಗಾಸ್ಟಾರ್ ಚಿರಂಜೀವಿಯನ್ನು ಭೇಟಿ ಮಾಡಿದ್ದಾರೆ.
ಈಶ್ವರಯ್ಯ ಚಿತ್ತೂರಿನವರು. ಅಲ್ಲಿಂದ ಹೈದರಾಬಾದ್ಗೆ ಸುಮಾರು 600 ಕಿ.ಮೀ ಅಂತರ. ಈ ದೂರವನ್ನು ಕ್ರಮಿಸಲು ಅವರು 12 ದಿನ ತೆಗೆದುಕೊಂಡಿದ್ದಾರೆ. ಇನ್ನು, ಚಿರಂಜೀವಿಗೆ ಒಳ್ಳೆಯದಾಗಲಿ ಎಂದು ಈಶ್ವರಯ್ಯ ಅವರು ಹನುಮ ದೀಕ್ಷೆಯನ್ನೂ ತೊಟ್ಟಿದ್ದಾರೆ ಅನ್ನೋದು ವಿಶೇಷ.
ನಿವಾಸದ ಬಳಿ ಬಂದ ಈಶ್ವರಯ್ಯ ಅವರನ್ನು ಚಿರಂಜೀವಿ ಭೇಟಿ ಮಾಡಿದ್ದಾರೆ. ‘ನಮ್ಮ ಬಗ್ಗೆ ಅಭಿಮಾನಿಗಳು ಹೀಗೆ ಯೋಚನೆ ಮಾಡುತ್ತಾರೆ. ನಮ್ಮ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬದವರಿಗೋಸ್ಕರ ಒಳಿತನ್ನು ಬಯಸುತ್ತೇವೆ ಎಂದಿದ್ದಾರೆ. 12 ದಿನಗಳ ಕಾಲ ಸೈಕಲ್ ತುಳಿಯುವುದು ಎಂದರೆ ಅದು ಸುಲಭದ ಕೆಲಸವಲ್ಲ. ಹೀಗಾಗಿ, ಇನ್ನುಮುಂದೆ ಈ ರೀತಿ ಮಾಡದಂತೆ ಚಿರಂಜೀವಿ ಅವರು ಅಭಿಮಾನಿಗೆ ಕಿವಿಮಾತು ಹೇಳಿದ್ದಾರೆ.
ಚಿರಂಜೀವಿ ಅವರು ಇತ್ತೀಚೆಗೆ 66ನೇ ವಸಂತಕ್ಕೆ ಕಾಲಿಟ್ಟಿದ್ದರು. ಅವರ ಬರ್ತ್ಡೇ ಪ್ರಯುಕ್ತ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಿತ್ತು. ಚಿರು 153ನೇ ಚಿತ್ರಕ್ಕೆ ‘ಗಾಡ್ಫಾದರ್’ ಎಂದು ಹೆಸರಿಡಲಾಗಿದೆ. ಮೋಹನ್ಲಾಲ್ ನಟನೆಯ ‘ಲೂಸಿಫರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಡ್ರಗ್ ಹಾಗೂ ರಾಜಕೀಯ ಅನಾಚಾರಗಳ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗಿದೆ. ಈಗ ಈ ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಲೀಡ್ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಗಾಡ್ಫಾದರ್ ಎಂದು ನಾಮಕರಣ ಮಾಡಲಾಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.
ಇದನ್ನೂ ಓದಿ: Chiranjeevi Birthday: ಚಿರಂಜೀವಿ ಜನ್ಮದಿನಕ್ಕೆ 153ನೇ ಸಿನಿಮಾ ಟೈಟಲ್ ಅನಾವರಣ; ಗಾಡ್ಫಾದರ್ ಆದ ಮೆಗಾಸ್ಟಾರ್