Chiyan Vikram: ರಜನಿಕಾಂತ್ಗೆ ವಿಲನ್ ಆದ ಚಿಯಾನ್ ವಿಕ್ರಮ್; ಸಿಗ್ತಿದೆ ಭರ್ಜರಿ ಸಂಭಾವನೆ
ವಿಕ್ರಮ್ ಅವರಿಗೆ ಮತ್ತೊಂದು ಸಿನಿಮಾ ಆಫರ್ ಸಿಕ್ಕಿದೆ. ಅದು ರಜನಿಕಾಂತ್ ಸಿನಿಮಾದಲ್ಲಿ ಅನ್ನೋದು ವಿಶೇಷ. ರಜನಿ ವಿರುದ್ಧ ವಿಕ್ರಮ್ ತೊಡೆತಟ್ಟಲಿದ್ದಾರೆ ಎಂಬುದು ವಿಶೇಷ.

ರಜನಿಕಾಂತ್ ಎದುರು ಖಡಕ್ ವಿಲನ್ ತರಬೇಕು ಎಂದು ನಿರ್ಮಾಪಕರು ಹಾಗೂ ನಿರ್ದೇಶಕರು ಪ್ರಯತ್ನಿಸುತ್ತಾರೆ. ವಿಲನ್ ರಗಡ್ ಆಗಿದ್ದರೆ ಹೀರೋ ತೂಕ ಹೆಚ್ಚುತ್ತದೆ. ಈಗ ರಜನಿಕಾಂತ್ (Rajinikanth) ನಟನೆಯ 170ನೇ ಸಿನಿಮಾಗೆ ವಿಲನ್ ಹೆಸರು ಫೈನಲ್ ಆಗಿದೆ. ಮೂಲಗಳ ಪ್ರಕಾರ ಚಿಯಾನ್ ವಿಕ್ರಮ್ (Chiyan Vikram) ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಅವರು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 50 ಕೋಟಿ ರೂಪಾಯಿ ಅನ್ನೋದು ವಿಶೇಷ. ಈ ವಿಚಾರ ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದೆ.
ಚಿಯಾನ್ ವಿಕ್ರಮ್ ಅವರು ಕಾಲಿವುಡ್ನ ಬೇಡಿಕೆಯ ಹೀರೋ. ಕೇವಲ ಒಂದೇ ರೀತಿಯ ಪಾತ್ರಕ್ಕೆ ಅವರು ಕಟ್ಟುಬಿದ್ದಿಲ್ಲ. ವೃತ್ತಿ ಜೀವನದಲ್ಲಿ ಹಲವು ಡಿಫರೆಂಟ್ ರೋಲ್ಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಈಗ ಅವರಿಗೆ ಮತ್ತೊಂದು ಸಿನಿಮಾ ಆಫರ್ ಸಿಕ್ಕಿದೆ. ಅದು ರಜನಿಕಾಂತ್ ಸಿನಿಮಾದಲ್ಲಿ ಅನ್ನೋದು ವಿಶೇಷ. ರಜನಿ ವಿರುದ್ಧ ವಿಕ್ರಮ್ ತೊಡೆತಟ್ಟಲಿದ್ದಾರೆ ಎಂಬುದು ವಿಶೇಷ.
‘ತಲೈವರ್ 170’ನೇ ಚಿತ್ರಕ್ಕೆ ಟಿಜಿ ಜ್ಞಾನವೇಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ತಮಿಳುನಾಡಿನಲ್ಲಿ ಹಲವು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಲೈಕಾಗೆ ಇದೆ. ಅವರು ವಿಲನ್ ರೋಲ್ಗೆ ವಿಕ್ರಮ್ ಅವರನ್ನು ಅಪ್ರೋಚ್ ಮಾಡಿದ್ದಾರೆ. ಒಂದೇ ಹಂತದಲ್ಲಿ 50 ಕೋಟಿ ರೂಪಾಯಿ ಪೇಮೆಂಟ್ ಕೊಡಲು ಲೈಕಾ ಒಪ್ಪಿದೆ.
ಇದನ್ನೂ ಓದಿ: ರಜನಿಕಾಂತ್, ವಿಷ್ಣುವರ್ಧನ್ ಒಟ್ಟಾಗಿ ನಟಿಸಿದ್ದ ಸಿನಿಮಾದ ಅಪರೂಪದ ದೃಶ್ಯ ವೈರಲ್
ಯಾವುದೇ ಪಾತ್ರ ಸಿಕ್ಕರೂ ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಕಲೆ ವಿಕ್ರಮ್ಗೆ ಒಲಿದಿದೆ. ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡ ‘ಪೊನ್ನಿಯಿನ್ ಸೆಲ್ವನ್’, ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರಗಳಲ್ಲಿ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿತ್ತು. ಈಗ ಅವರು ವಿಲನ್ ರೋಲ್ ಮಾಡಲು ಒಪ್ಪಿದ್ದಾರೆ. ‘ಪಿಎಸ್’ ಸರಣಿಯ ಸಿನಿಮಾಗಳನ್ನು ನಿರ್ಮಿಸಿದ್ದು ಲೈಕಾ. ಹೀಗಾಗಿ ಈ ಹೀರೋ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಇದೆ.
ಇತ್ತೀಚೆಗೆ ಲೈಕಾ ಸಂಸ್ಥೆಯ ಮೇಲೆ ಐಟಿ ದಾಳಿ ನಡೆದಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ಕಂಪನಿ ಭಾಗಿಯಾಗಿದೆ ಎನ್ನುವ ಆರೋಪ ಇರುವುದರಿಂದ ಈ ದಾಳಿ ನಡೆದಿತ್ತು. ಆದರೆ, ಈ ದಾಳಿಗಳು ಸಿನಿಮಾ ಕೆಲಸದ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




